ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ಸಂಕೇತ ಪದವಿ ಪೂರ್ವ ಕಾಲೇಜು, ಪಾಟೀಲ್ ಕಾಲೇಜು, ಕನಕದಾಸ ಕಾಲೇಜು, ಎಕ್ಸ್ಲೆಂಟ್ ಕಾಲೇಜು, ನ್ಯಾಷನಲ್ ಕಾಲೇಜು, ಆಕ್ಸ್ಫರ್ಡ್ ಕಾಲೇಜು, ವಾಸವಿ ಕಾಲೇಜು, ಎಲ್ಬಿಕೆ ಕಾಲೇಜು, ಎವಿಎಸ್ ಬ್ರಿಲಿಯಂಟ್ ಕಾಲೇಜು, ಜ್ಞಾನಜ್ಯೋತಿ ಕಾಲೇಜು, ದುದ್ದುಪೂಡಿ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಆರ್ಜಿಎಂ ಕಾಲೇಜು, ವಿಜಡಮ್ ಕಾಲೇಜು, ಐಕ್ಯೂ ಇಂಟರ್ ನ್ಯಾಷನಲ್ ಕಾಲೇಜು, ಅನಿಕೇತನ ಕಾಲೇಜು, ಶಂಕರ್ ಟ್ರಸ್ಟ್ ಪದವಿ ಪೂರ್ವ ಕಾಲೇಜುಗಳ ಪರೀಕ್ಷಾ ಕೇಂದ್ರದ ಬಳಿ ಬೆಳಿಗ್ಗೆ ಎಲ್ಲ ಪರೀಕ್ಷಾರ್ಥಿಗಳನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಯಿತು.
ಒಟ್ಟು 5160 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಅದರಲ್ಲಿ 3908 ವಿದ್ಯಾರ್ಥಿಗಳು ಹಾಜರಿದ್ದು, 1252 ಗೈರಾಗಿದ್ದರು. ಬೆಳಿಗ್ಗೆ 10.30 ರಿಂದ 12.30 ರವರೆಗೆ ಪ್ರಶ್ನೆ ಪತ್ರಿಕೆ-1 ಸಾಮಾನ್ಯ ಜ್ಞಾನ, ಮಧ್ಯಾಹ್ನ 2.30 ರಿಂದ 4.30 ರವರೆಗೆ ಪ್ರಶ್ನೆ ಪತ್ರಿಕೆ-2 ಕನ್ನಡ, ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯ ಕುರಿತು ನಿರ್ದಿಷ್ಠ ಜ್ಞಾನ ಪರೀಕ್ಷೆಗಳು ನಡೆದವು. ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು, ಪರೀಕ್ಷಾ ಮುಖ್ಯ ಅಧೀಕ್ಷಕರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಈ ಹಿಂದೆ 4 ಆಯ್ಕೆಗಳು ಇರುತ್ತಿದ್ದವು. ಆದರೆ ಈ ಬಾರಿ 5 ಆಯ್ಕೆಗಳನ್ನು ನೀಡಲಾಗಿತ್ತು. ಉತ್ತರ ಗೊತ್ತಿಲ್ಲದಿದ್ದರೆ 5ನೇ ಆಯ್ಕೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದ್ದು ವಿಶೇಷವಾಗಿತ್ತು.---