ಕನಿಷ್ಠ ಕೂಲಿಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

KannadaprabhaNewsNetwork |  
Published : Jul 29, 2025, 01:00 AM IST
28ಕೆಆರ್ ಎಂಎನ್ 2.ಜೆಪಿಜಿ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬವಿಲ್ಲದೆ ತಕ್ಷಣ ಜಾರಿ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಮನಗರ: ವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬವಿಲ್ಲದೆ ತಕ್ಷಣ ಜಾರಿ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು ಜಿಪಂ ಉಪಕಾರ್ಯದರ್ಶಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ ಉದ್ದಿಮೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನವನ್ನು 2021ರ ನ.29ರಲ್ಲಿ ಅವೈಜ್ಞಾನಿಕವಾಗಿ ಜಾರಿ ಮಾಡಿದೆ. ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ಸಂಘವು ರಿಟ್ ದಾಖಲಿಸಿದ ನಂತರ ನ್ಯಾಯಾಯಲದಲ್ಲಿ ವಾದ - ವಿವಾದಗಳು ಪ್ರಾರಂಭವಾಗಿ 2024ರ ಡಿಸೆಂಬರ್ 13ರಂದು ನ್ಯಾಯಲಯದ ಏಕ ಸದಸ್ಯ ಪೀಠವು ಸುಪ್ರೀಂ ಕೋರ್ಟಿನ ಮಾರ್ಗದರ್ಶನದಂತೆ ಕನಿಷ್ಠ ವೇತನ ನಿಗದಿ ಪಡಿಸಲು 10 ವಾರಗಳ ಗಡುವು ನೀಡಿತ್ತು. ಆದರೀಗ ಕನಿಷ್ಠ ವೇತನದ ಅಧಿಸೂಚನೆ ರದ್ದು ಮಾಡಿ ಮತ್ತೆ 2025ರ ಏಪ್ರಿಲ್ 11ರಂದು ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ. ಇದಕ್ಕೆ ಸಂಘವು ಕಸ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳನ್ನು ಅತಿ ಕುಶಲರಾಗಿ ಪರಿಗಣಿಸಿ ಮೂಲ ವೇತನ 38,021 ರು. ನಿಗದಿ ಪಡಿಸುವಂತೆ ಒತ್ತಾಯಿಸಿದರು.

ವಾಟರ್ ಮೆನ್, ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಾಗಿ ಕುಶಲರಾಗಿ ಪರಿಗಣಿಸಿ ಮೂಲ ವೇತನ 33062 ರು. ನಿಗದಿ ಪಡಿಸಬೇಕು. ಅಟೆಂಡರ್-ಜವಾನರು ಅರೆಕುಶಲರಾಗಿ ಪರಿಗಣಿಸಿ ಮೂಲ ವೇತನ 28,750 ರು. ನಿಗದಿ ಮಾಡಬೇಕು. ಕಸಗುಡಿಸುವವರು, ಸ್ವಚ್ಛಾಗಾರರು ಅಕುಶಲರಾಗಿ ಪರಿಗಣಿಸಿ ಮೂಲ ವೇತನ 25 ಸಾವಿರ ರು. ನಿಗದಿ ಪಡಿಸಬೇಕೆಂದು ಆಗ್ರಹಿಸಿದರು.

ಈ ಕನಿಷ್ಠ ವೇತನದ ಜಾರಿಯನ್ನು 2025ರ ಏಪ್ರಿಲ್ 1 ರಿಂದ ಜಾರಿ ಮಾಡಬೇಕು 9,469 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ದಿನಕ್ಕೆ ಪೈಸೆ ನಿಗದಿಯಾಗಬೇಕು. ಗ್ರಾಪಂಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮಾನ್ತೆ ನೀಡಿ ಮೂಲಕ ವೇತನಕ್ಕೆ ಶೇಕಡ 2 ಹೆಚ್ಚಳವನ್ನು ಪ್ರತಿ ವರ್ಷ ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಪ್ರತಿಭಟನಾಕರಾರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ , ಜಿಲ್ಲಾ ಕಾರ್ಯದರ್ಶಿ ಜಯಲಿಂಗ, ಮುಖಂಡರಾದ ರಾಜೇಶ್ , ಸುರೇಶ್ , ನಾಗರಾಜ್, ಸದಾಶಿವ, ವೀರಭದ್ರಯ್ಯ, ಕಮರುದ್ದೀನ್ ಪಾಷ, ಶೇಖರ್ , ನಂದೀಶ್ , ಭವ್ಯ, ಯೋಗಲಿಂಗು, ಮಹದೇವಯ್ಯ, ರೇಣುಕಯ್ಯ ಮತ್ತಿತರರು ಭಾಗವಹಿಸಿದ್ದರು.

28ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!