
ದೊಡ್ಡಬಳ್ಳಾಪುರ: ಉಪ ವಿಭಾಗಾಧಿಕಾರಿಗಳ ಕಚೇರಿಯ ಕಾಂಪೌಂಡ್ ಪಕ್ಕದಲ್ಲಿ ಗ್ರಾಪಂ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ್ದು, ಬಲವಂತವಾಗಿ ರಾಜೀನಾಮೆಗೆ ಒತ್ತಾಯಿಸಿದ ಸದಸ್ಯರು ಮತ್ತು ಮುಖಂಡರು ಅಧ್ಯಕ್ಷನ ಬಟ್ಟೆ ಹರಿದು ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಬಳಿ ಸೋಮವಾರ ನಡೆದಿದೆ.
ಹಲ್ಲೆ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಅಧ್ಯಕ್ಷ ರಂಗಸ್ವಾಮಿ, ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸದಸ್ಯರು ಒತ್ತಾಯಿಸುತ್ತಿದ್ದರು. ಪಂಚಾಯಿತಿಯಲ್ಲಿ ಹಳೇ ಅಧ್ಯಕ್ಷರ ಲಾಗಿನ್ ನಲ್ಲಿ ₹29 ಲಕ್ಷ ಹಣ ದುರ್ಬಳಕೆ ಮಾಡಿದ್ದರು. ಅಧ್ಯಕ್ಷನಾಗಿ ಇದನ್ನ ಪ್ರಶ್ನಿಸಿದ ಕಾರಣಕ್ಕೆ ನನ್ನನ್ನು ಬಲವಂತವಾಗಿ ರಾಜೀನಾಮೆ ಕೊಡಿಸಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು.
ನಾವು ಸದಸ್ಯ ಸ್ಥಾನಗಳಿಗೆ ರಾಜೀನಾಮೆ ಕೊಡುವುದಾಗಿ ಹೇಳಿದ್ದ ಅವರು, ಜೊತೆಯಲ್ಲಿ ಅಧ್ಯಕ್ಷರು ಇರಬೇಕೆಂದು ನನ್ನನ್ನು ಕರೆದುಕೊಂಡು ಬಂದಿದ್ದರು. ಎಸಿ ಕಚೇರಿಗೆ ಬಂದ ನಂತರ ರಾಜೀನಾಮೆ ಕೊಡುವಂತೆ ಹೇಳಿದರು. ಪಂಚಾಯಿತಿಯಲ್ಲೇ ರಾಜೀನಾಮೆ ಕೊಡುವುದಾಗಿ ಹೇಳಿದೆ. ಇದರಿಂದ ಕೆರಳಿದ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಬಟ್ಟೆಯನ್ನ ಹರಿದು ಹಾಕಿದ್ದಾರೆ. ಪ್ರಾಣ ರಕ್ಷಣೆಗಾಗಿ ನಾನು ಎಸಿ ಕಚೇರಿಗೆ ಓಡಿ ಬಂದೆ. ಇಲ್ಲಿನ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಪೊಲೀಸರನ್ನ ಕರೆಸಿಕೊಂಡರು ಎಂದು ತಿಳಿಸಿದರು.ಹಲ್ಲೆಗೊಳಗಾದ ರಂಗಸ್ವಾಮಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರೇ ಬಟ್ಟೆ ಹರಿದುಕೊಂಡರು: ಸ್ಪಷ್ಟನೆ
21ಕೆಡಿಬಿಪಿ3-