ಪಡ್ನೂರು ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ

KannadaprabhaNewsNetwork |  
Published : Oct 26, 2026, 04:00 AM IST
ಫೊಟೋ: 23ಪಿಟಿಆರ್-ಅಭಿಯಾನಪಡ್ನೂರು ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ ನಡೆಯಿತು.  | Kannada Prabha

ಸಾರಾಂಶ

ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಮುದಾಯದತ್ತ ಸಾಂತ್ವನ ಸಂವಾದ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭವಾರ್ತೆ ಪುತ್ತೂರು

ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಮುದಾಯದತ್ತ ಸಾಂತ್ವನ ಸಂವಾದ ಹಮ್ಮಿಕೊಳ್ಳಲಾಯಿತು.

ಆರಂಭದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಂದಾಯ ಇಲಾಖೆಯ ಗ್ರಾಮ ಸಹಾಯಕ ಬಾಲಕೃಷ್ಣ ಗೌಡ ಅವರು ಸೇವೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಜನರ ಗೊಂದಲಗಳ ಬಗ್ಗೆ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಸೌಮ್ಯ ಆಯುಷ್ಮಾನ್ ಭಾರತ್ ಆಭಾ ಯೋಜನೆಯ ಬಗ್ಗೆ, ಪ್ರದೇಶದಲ್ಲಿ ಒಟ್ಟು ಆಯುಷ್ಮಾನ್ ಆಗಿರುವ, ಸೇವೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಯಶೋದಾ ಕೆ. ಇಲಾಖೆಯ ಸೇವೆ ಮತ್ತು ಗೃಹಲಕ್ಷ್ಮಿ ಯೋಜನೆಯ ಮಾಹಿತಿ ನೀಡಿದರು. ಕಾನೂನಿನ ಅರಿವು, ಮತ್ತು ಸೇವೆಗಳ ಬಗ್ಗೆ ಪ್ಯಾನೆಲ್ ವಕೀಲೆ ಭಾರತಿ ಎ. ವಿವರಣೆಯನ್ನು ನೀಡಿದರು. ಸಾಂತ್ವನ ಕೇಂದ್ರದ ಮೂಲಕ ವಿವಾಹ ಪೂರ್ವ ಸಂವಾದ ಹಾಗೂ ದೌರ್ಜನ್ಯ ಮುಕ್ತ ಗ್ರಾಮದ ಬಗ್ಗೆ ಸಂವಾದವನ್ನು ಪುತ್ತೂರು ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಗೂ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನಶೆಟ್ಟಿ ಮಾತನಾಡಿ ಗ್ರಾಮ ಸ್ವರಾಜ್ ಅಭಿಯಾನದ ಮೂಲಕ ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರಗಳು ಮಾದರಿ ಆಗುವಂತೆ ಹಾಗೂ ಸಂಪೂರ್ಣ ಸ್ವಚ್ಛ ಮನೆ ಸ್ವಚ್ಛ ಗ್ರಾಮದ ಕಲ್ಪನೆ ಮೂಲಕ ಜನರು ಪ್ರಯತ್ನಿಸಿ ಇಡೀ ದೇಶವು ಪಡ್ನೂರು ಗ್ರಾಮವನ್ನು ನೋಡುವ ಹಾಗೆ ಅಭಿವೃದ್ಧಿ ಕಡೆಗೆ ಕೊಂಡೊಯ್ಯು ಹುದಾದ ಜವಾಬ್ದಾರಿಯ ಬಗ್ಗೆ ತಿಳಿಸಿದರು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಗ್ರಾಮಸ್ವರಾಜ ಅಭಿಯಾನ ಕಾರ್ಯಕ್ರಮ ಸಂಯೋಜಕ ಚೇತನ್ ಪಡ್ಪು, ಕ್ಷೇತ್ರ ಸಂಯೋಜಕಿ ದೀಪಿಕಾ, ಕೃಷಿ ಸಖಿ, ಗ್ರಾ.ಪಂ. ಮಾಜಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಸ್ತ್ರೀಶಕ್ತಿ ಮತ್ತು ಸಂಜೀವಿನಿ ಸದಸ್ಯರು, ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಿರಲಿ
ಕಲೆ ಮನುಷ್ಯನ ಅಸ್ಮಿತೆಯ ಸೂಚಕ