ಲೀಡ್‌...ಕಾಗಿಣಾ ನದಿ ತಟದಲ್ಲಿ ಜಯತೀರ್ಥರ ಆರಾಧನೆ ವೈಭವ

KannadaprabhaNewsNetwork |  
Published : Aug 04, 2026, 01:30 AM IST
ಫೋಟೋ- ಮಳಖೇಡ 1, 2 ಮತ್ತು 3ಸೇಡಂ ತಾಲೂಕಿನ ಮಳಖೇಡದಲ್ಲಿರುವ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಸೋಮವಾರ ಆರಾಧನೆ ಭವ್ಯವಾಗಿ ಜೋಡು ರಥೋತ್ಸವ,  ಸಂಸ್ಥಾನ ಪೂಜೆಗಳೊಂದಿಗೆ ನೆರವೇರಿತು. 10 ಸಾವಿರದಷ್ಟು ಭಕ್ತರು ಪಾಲ್ಗೊಂಡು ಜಯರಾಯರ ದರುಶನ ಪಡೆದು ಪುನೀತರಾದರು. | Kannada Prabha

ಸಾರಾಂಶ

A grand Aradhana ceremony was held on Monday at the Moola Vrindavana of Sri Jayatirtha

-ಶ್ರೀ ಸತ್ಯಾತ್ಮತೀರ್ಥ ಅಮೃತೋಪ ದೇಶ, ಜೋಡು ರಥೋತ್ಸವ ವೈಭವ

----

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಕಾಗಿಣಾ ತೀರ ಮಳಖೇಡದಲ್ಲಿರುವ ದ್ವೈತ ಸಿದ್ದಾಂತ ಪ್ರತಿಪಾದಕರಾದಂತಹ ಯತಿಕುಲ ತಿಲಕ ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಸೋಮವಾರ ವೈಭವದ ಆರಾಧನೆ ನಡೆಯಿತು.

10 ಸಾವಿರ ಭಕ್ತರು ಸೇರಿದ್ದ ಸಮಾರಂಭದಲ್ಲಿ ಸಂಸ್ಥಾನ ಪೂಜೆ, ಜೋಡು ರಥೋತ್ಸವ ಸೇರಿದಂತೆ ಅನೇಕ ಪೂಜೆಗಳು ನಡೆದವು.

ಜಯತೀರ್ಥರು ಇಂದ್ರಾಂಶ ಸಂಭೂತರು, ಹೀಗಾಗಿ ಅವರ ರಥೋತ್ಸವ ಸಂದರ್ಭದಲ್ಲಿ ಇಂದ್ರ ದೇವನು ಮಳೆಯಸಿಂಚನ ಮಾಡಿದ. ಜಿಟಿ ಜಿಟಿ ಮಳೆಯ ನಡುವೆಯು ಭಕ್ತರು ಉತ್ಸಾಹದಿಂದ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಎದುರಾರೈ ಗುರುವೆ ನಿನಗೆ‌ ಸಮಾನಾರೈ ಎಂದು ದಾಸರ ಪದಗಳನ್ಬು ಹಾಡುತ್ತ ದಾಸರ ವೇಷ ಭೂಷಣದಲ್ಲಿ ಭಕ್ತರು ರಥೋತ್ಸವದ‌ ಮುಂದೆ ಭಕ್ತರು ಕುಣಿದು ಕುಪ್ಪಳಿಸಿದರು. ವಿವಿಧ ಭಜನಾ‌ ಮಂಡಳಿಗಳ‌ ಸದಸ್ಯರು ದಾಸರ ಪದ ಹಾಡುವ ಮೂಲಕ ರಥೋತ್ಸವಕ್ಕೆ ಮೆರಗು ತಂದುಕೊಟ್ಟರು.

ಉತ್ತರಾದಿ‌ಮಠದ‌ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶ್ರೀ‌ಜಯತೀರ್ಥರ ಹಾಗೂ ಶ್ರೀ ಅಕ್ಷೋಭ್ಯತೀರ್ಥ ರ, ಶ್ರೀ ರಘುನಾಥ ತೀರ್ಥರ ಮೂಲ‌ ವೃಂದಾವನಗಳಿಗೆ ಶ್ರೀಗಳಿಗೆ ಮಂಗಳಾರತಿ‌ ನೆರವೇರಿಸಿ ಆಶೀರ್ವಚನ ನೀಡಿದರು.

ಮಧ್ಯಾರಾಧನೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶ್ರೀಪಾದಂಗಳವರಿಂದ‌ ಸುಧಾ ಪಾಠ, ಭಕ್ತರಿಗೆ ಮುದ್ರಾಧಾರಣೆ, ರಥಾಂಗ ಹೋಮ, ಶ್ರೀ‌ಜಯತೀರ್ಥರ ಮೂಲ‌ವೃಂದಾವನಕ್ಕೆ ಶ್ರೀಗಳು ಪಂಚಾಮೃತಾಭಿಷೇಕ ನಡೆಸಿಕೊಟ್ಟು ಶ್ರೀಗಳು ಜೋಡು ರಥೋತ್ಸವಕ್ಕೆ ಚಾಲನೆ‌ ನೀಡಿದರು.

ಮಠದ ದಿವಾನ‌ ಪಂ.‌ಶಶಿ ಆಚಾರ್ಯ, ಮುಂಬೈ ಸತ್ಯಧ್ಯಾನ‌ ವಿದ್ಯಾಪೀಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರ ಪೂಜಾರ, ಮಠಾಧಿಕಾರಿ ರಾಮಾಚಾರ್ಯ ಘಂಟಿ ಸೇರಿದಂತೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೆಶ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಭಕ್ತರು ಆರಾಧನಾ ಮಹೋತ್ಸವದಲ್ಕಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಳಖೇಡದ ಕಮಲಾಕರ ಕುಲಕರ್ಣಿ ರಚಿಸಿದ ದಾಸರು ಕಂಡ‌ ಶ್ರೀ ಜಯತೀರ್ಥರು ಪುಸ್ತಕವನ್ನು ಶ್ರೀ‌ಸತ್ಯಾತ್ಮತೀರ್ಥರು ಬಿಡುಗಡೆ ಮಾಡಿದರು.

-------ಬಾಕ್ಸ್--------

ಆಚರಣೆ ಅನುಷ್ಠಾನದಿಂದ ಸಿದ್ದಾಂತ ಉಳಿವು: ಸತ್ಯಾತ್ಮತೀರ್ಥ ಶ್ರೀ

ಯಾವುದೇ ಧರ್ಮ , ಸಿದ್ಧಾಂತ ಉಳಿಯಬೇಕಾದರೆ ಆಚರಣೆ ಅನುಷ್ಠಾನಕ್ಕೆ ತರಬೇಕು. ಹಿಂದೂ ಧರ್ಮ ಹಾಗೂ‌ ಸಿದ್ಧಾಂತ ಉಳಿಸಿಕೊಳ್ಳಬೇಕಾದರೆ ನಾವು ಆಚರಣೆಗಳನ್ನು‌ಅನುಷ್ಠಾನಕ್ಕೆ ತರಬೇಕು ಎಂದು ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು. ಪಾಲಕರು‌ ಮಕ್ಕಳಿಗೆ‌ ನಮ್ಮ‌ ಧರ್ಮದ ಆಚರಣೆ‌ ಕುರಿತು ಮಾಹಿತಿ‌ ನೀಡಬೇಕು.‌ ಮಕ್ಕಳಿಗೆ‌ ಉತ್ತಮ‌ ಸಂಸ್ಕಾರ ನೀಡಬೇಕು ಅಂದಾಗ ಮಾತ್ರ‌ ಉತ್ತಮ‌ ಸಮಾಜ‌ ನಿರ್ಮಾಣವಾಗಲು‌ ಸಾಧ್ಯ‌ವೆಂದರು.

------

ಫೋಟೋ- ಮಳಖೇಡ 1, 2 ಮತ್ತು 3

ಸೇಡಂ ತಾಲೂಕಿನ ಮಳಖೇಡದಲ್ಲಿರುವ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಸೋಮವಾರ ಆರಾಧನೆ ಭವ್ಯವಾಗಿ ಜೋಡು ರಥೋತ್ಸವ, ಸಂಸ್ಥಾನ ಪೂಜೆಗಳೊಂದಿಗೆ ನೆರವೇರಿತು. 10 ಸಾವಿರದಷ್ಟು ಭಕ್ತರು ಪಾಲ್ಗೊಂಡು ಜಯರಾಯರ ದರುಶನ ಪಡೆದು ಪುನೀತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ
ಸಾಲಬಾಧೆಯಿಂದ ರೈತ ದಂಪತಿ ಆತ್ಮಹತ್ಯೆ: ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ