ಯಾದಗಿರಿಯಲ್ಲಿ ಲಕ್ಷಾಂತರ ಭಕ್ತರ ಸಾಕ್ಷಿಯಲ್ಲಿ ಶನಿವಾರ ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ । ಬೃಹತ್ ಶೋಭಾಯಾತ್ರೆ
ಸೆ.14 ರಿಂದ 21 ದಿನಗಳ ಕಾಲ ಭಕ್ತಿಭಾವದ ವೈಭವ ಮೆರೆದ ಯಾದಗಿರಿ ಹಿಂದೂ ಮಹಾ ಗಣಪತಿ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಾಕ್ಷಿಯಲ್ಲಿ ವಿಸರ್ಜನೆಗೊಂಡಿತು. ಭಜರಂಗದಳ ಹಾಗೂ ವಿಶ್ವ ಹಿಂದೂ ಮಹಾ ಪರಿಷತ್ತು ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ವಿಸರ್ಜನೆ ನೆರವೇರಿತು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಮಹಾ ಗಣಪತಿ ವಿಸರ್ಜನೆ ಹಿನ್ನೆಲೆ, ಬೃಹತ್ ಶೋಭಾಯಾತ್ರೆ ನಡೆಯಿತು. ಶನಿವಾರ ಬೆಳಿಗ್ಗೆಯಿಂದಲೇ ಇಡಿ ನಗರವೇ ಸಂಭ್ರಮದಲ್ಲಿ ಮಿಂದೆತ್ತಿತ್ತು. ಉತ್ಸವದ ನಿಮಿತ್ಯ ಇಲ್ಲಿನ ಬಹುತೇಕ ಎಲ್ಲ ಮುಖ್ಯ ರಸ್ತೆಗಳು ಭಗವಾಧ್ವಜಗಳಿಂದ, ಕೇಸರಿ ಬ್ಯಾನರ್ ಗಳಿಂದ ಕಂಗೊಳಿಸುತ್ತಿತ್ತು. ದೀಪಾಲಂಕಾರ ಎಲ್ಲಡೆ ಝಗಮಗಿಸುತ್ತಿತ್ತು.ಉತ್ಸವ ಸಮಿತಿ ಕಾರ್ಯಕರ್ತರಿಂದ ಮಧ್ಯಾಹ್ನ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ನಡೆಯಿತು. ನಂತರ ಸಂಜೆ 4ರ ಸಮಯಕ್ಕೆ ಬೃಹತ್ ಗಣಪತಿ ವಿಗ್ರಹವನ್ನು ಸ್ಥಾಪಿಸಿದ ವೇದಿಕೆಯಿಂದ ಕ್ರೇನ್ ಮೂಲಕ ಎತ್ತಿ ಶೋಭಾಯಾತ್ರೆಯ ವೇದಿಕೆಯಲ್ಲಿ ಕೂಡಿಸಿದರು. ಈ ದೃಶ್ಯವನ್ನು ಕಂಡು ಸಾವಿರಾರು ಜನರು ಜೈಕಾರ ಹಾಕಿ ಸಂಭ್ರಮಿಸಿದರು.
ಮಹಿಳೆಯಿರಿಗೆ ವಿಶೇಷ ಮತ್ತು ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಿದ್ದರಿಂದ ಸಾವಿರಾರು ಮಹಿಳೆಯರು ತಂಡ, ತಂಡವಾಗಿ ಮೆರಣಿಗೆಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ನಗರದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ನೇತಾಜಿ ಸುಭಾಷ್ಚಂದ್ರ ಭೋಸ್ ವೃತ್ತ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ, ಹಳೇ ಕೋರ್ಟ ರೋಡ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕನಕ ವೃತ್ತ, ಜಗಜೀವನರಾಂ ವೃತ್ತ (ಹಿರೇ ಅಗಸಿ) ವೀರಶೈವ ಕಲ್ಯಾಣ ಮಂಟಪ, ಗಾಂಧಿ ವೃತ್ತ, ಶಿವಾಜಿ ವೃತ್ತ, ಮೂಲಕ ಮೈಲಾಪುರ ಅಗಸಿಗೆ ಆಗಮಿಸಿ ತಡರಾತ್ರಿ ವಿಸರ್ಜನೆಗಾಗಿ ನಗರದ ಕೆರೆಗೆ ತೆಗೆದುಕೊಂಡು ಹೋಗಲಾಯಿತು.
ಉತ್ಸವ ಸಮಿತಿ ಸಂಚಾಲಕ ಶಿವಕುಮಾರ ಸುಕಲೂರ, ಉತ್ಸವ ಸಮಿತಿ ಪದಾಧಿಕಾರಿಗಳಾದ ಸಿದ್ದಾಮಪ್ಪ ಅರಕೇರಿ, ಗೌತಮ ಕಾಡೂರ, ಮಲ್ಲಣ್ಣ ಕೊಯಮುತ್ತೂರ, ದೇವೇಂದ್ರಪ್ಪ ಮದ್ದಿನ, ವೀರಜಾ ಪ್ರತಾತಸಿಂಗ್, ಸುಮಾ ಮಂಜುನಾಥ, ರೇಣುಕಾ ಸೆಂಡಗಿ, ಅಂಬಿಕಾ ಮಾಹಮನಿ, ಕಾವೇರಿ ನಾಗೇಶ ಸೇರಿದಂತೆ ಅನೇಕರಿದ್ದರು.
* ಪೊಲೀಸರಿಂದ ಸೂಕ್ತ ಬಂದೋಬಸ್ತ್
ಹೆಚ್ಚುವರಿ ಎಸ್ಪಿ ಧರಣೇಶ, ಡಿವೈಎಸ್ ಪಿಗಳಾದ ಭರತಕುಮಾರ ತಳವಾರ, ಸುರೇಶ ನಾಯಕ, ಸಿಪಿಐ ಶ್ರೀದೇವಿ ಬಿರಾದಾರ, ನಾಡಗೌಡ, ಸಿಪಿಐ ರಮೇಶ ಕಾಂಬಳೆ, ಪಿಎಸ್ ಐ ಮಂಜನಗೌಡ, ವೀರೇಶ, ಗೀತಾ ಭದ್ರಾಪುರ ಸೇರಿದಂತೆಯೇ ಇತರರಿದ್ದರು.
3ವೈಡಿಆರ್1 ರಿಂದ 3ವೈಡಿಆರ್14 :