ಪೂರ್ಣಕುಂಭ ಸ್ವಾಗತ, ಕರಡಿ ಮಜಲು ವಾದ್ಯ ವೈಭವ
ನಗರದ ಸಂಭಾಪೂರ ರಸ್ತೆಯಲ್ಲಿರುವ ಪುಟ್ಟರಾಜ ನಗರ 2ನೇ ಹಂತದ ಬಡಾವಣೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಮೂರ್ತಿ, ನಾಗದೇವರ ಮೂರ್ತಿ ಹಾಗೂ ಬನ್ನಿಮಹಾಂಕಾಳಿ ದೇವಿಯ ಮೂರ್ತಿಗಳ ಭವ್ಯ ಮೆರವಣಿಗೆ ಬುಧವಾರ ಅದ್ದೂರಿಯಾಗಿ ಜರುಗಿತು.
ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಮೆರವಣಿಗೆಗೆ ಬಡಾವಣೆಯ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಆಗಮಿಸಿ, ಭಕ್ತಿಭಾವದಿಂದ ಮೂರ್ತಿಗಳನ್ನು ಸ್ವಾಗತಿಸಿದರು. ಪೂರ್ಣಕುಂಭಗಳ ಸಾಲು, ಮಂಗಳವಾದ್ಯಗಳ ನಾದ ಹಾಗೂ ಭಕ್ತರ ಸಂಭ್ರಮ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.ವೀರೇಶ್ವರ ಪುಣ್ಯಾಶ್ರಮದಿಂದ ಆರಂಭವಾದ ಮೆರವಣಿಗೆಯು ಎಪಿಎಂಸಿ, ವೆಂಕಟೇಶ ಟಾಕೀಜ್ ರಸ್ತೆ, ಪುಟ್ಟರಾಜ ಗವಾಯಿಗಳ ವೃತ್ತ, ಜನರಲ್ ಕಾರ್ಯಪ್ಪ ವೃತ್ತ ಹಾಗೂ ಡಿಎಸ್ಪಿ ಕಚೇರಿ ರಸ್ತೆಯ ಮೂಲಕ ಸಾಗಿತು. ಮಾರ್ಗದುದ್ದಕ್ಕೂ ಭಕ್ತರು ಮೂರ್ತಿಗಳಿಗೆ ಗೌರವ ಸಲ್ಲಿಸಿದರು.
ಮೆರವಣಿಗೆಯಲ್ಲಿ ಬಡಾವಣೆಯ ಅಧ್ಯಕ್ಷ ಶಿವಕುಮಾರ ಕುಷ್ಟಗಿ, ಕೇಶವ ಪಾರ್ಕ ಬಡಾವಣೆಯ ಅಧ್ಯಕ್ಷ ಅಂದಪ್ಪ ಬಂಗಿ, ಬಡಾವಣೆಯ ಹಿರಿಯರಾದ ರಾಜೇಂದ್ರ ನರೇಗಲ್ಲ, ಮಹೇಶ ಡಂಬಳ, ಸುಭಾಷ ಪರಸನಾಯಕರ, ಬಸವರಾಜ ಹೊರಪೇಟಿ, ಪ್ರಕಾಶ ಪಾಟೀಲ, ಪ್ರಕಾಶ ಪಾಟೀಲ, ಈಶ್ವರಗೌಡ ಹುಡೇದಮಠ, ಬಸವರಾಜ ಬಂಡಿವಾಟಮಠ, ಎಸ್.ವೈ. ಕುಂಬಾರ, ಮುತ್ತಣ್ಣ ಜಾನೋಪಂತರ, ಸಿ.ಆರ್. ಬಳ್ಳಾರಿ, ಬಸವರಾಜ ಶೆಟ್ಟರ, ಎಸ್.ಎಂ. ಕಣಗಿ, ಮುತ್ತಣ್ಣ ಹೊಸಮನಿ, ಶರಣು ಹಿರೇಮಠ ಸೇರಿದಂತೆ ಅಕ್ಕದ ಬಡಾವಣೆಯ ನಿವಾಸಿಗಳು, ನೂರಾರು ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.