ಬೀರೂರುಪಟ್ಟಣದ ಉಪ್ಪಾರಕ್ಯಾಂಪಿನ ರಾಮಮಂದಿರದಲ್ಲಿ ಸ್ನೇಹಕೂಟ ಗೆಳೆಯರ ಬಳಗದ ಪ್ರತಿಷ್ಠಾಪಿಸಿದ್ದ ಮಹಾರಾಜ ಶ್ರೀ ಸತ್ಯ ಗಣಪತಿಯನ್ನು ಭಾನುವಾರ ವಿವಿಧ ಕಲಾತಂಡ ಮತ್ತು ವರ್ಣರಂಜಿತ ಡಿಜೆ ಹಾಗೂ ಗೊಂಬೆ ಮೇಳದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕ ,ಯುವತಿಯರು । ಮಹಾತ್ಮ ಗಾಂಧಿ ವೃತ್ತದಲ್ಲಿ ಆಕಾಶದೆತ್ತರಕ್ಕೆ ಸಿಡಿಮದ್ದಿನ ಅಬ್ಬರ
ಕನ್ನಡಪ್ರಭ ವಾರ್ತೆ,ಬೀರೂರು
ಪಟ್ಟಣದ ಉಪ್ಪಾರಕ್ಯಾಂಪಿನ ರಾಮಮಂದಿರದಲ್ಲಿ ಸ್ನೇಹಕೂಟ ಗೆಳೆಯರ ಬಳಗದ ಪ್ರತಿಷ್ಠಾಪಿಸಿದ್ದ ಮಹಾರಾಜ ಶ್ರೀ ಸತ್ಯ ಗಣಪತಿಯನ್ನು ಭಾನುವಾರ ವಿವಿಧ ಕಲಾತಂಡ ಮತ್ತು ವರ್ಣರಂಜಿತ ಡಿಜೆ ಹಾಗೂ ಗೊಂಬೆ ಮೇಳದೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಭಾದ್ರಪದ ಚೌತಿಯಿಂದ ಈವರೆಗೂ 21 ದಿನಗಳ ಕಾಲ ಪ್ರತಿಷ್ಠಾಪಿಸಿದ ಗೆಳೆಯರ ಬಳಗ ಪ್ರತಿ ದಿನ ವಿಶೇಷ ಪೂಜೆ ಹೋಮ ಹವನಾದಿಗಳನ್ನು ನಡೆಸಿ ಆಗಮಿಸಿದ್ದ ಭಕ್ತರು ಸಂಜೆ ವಿಶೇಷ ರಸಮಂಜರಿ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಿತ್ತು.
ಭಾನುವಾರ ಮಧ್ಯಾಹ್ನ 3ಕ್ಕೆ ಮಹರಾಜ ಗಣಪತಿಯ ವಿಸರ್ಜನೆ ಹಿನ್ನಲೆಯಲ್ಲಿ ಸದ್ಬಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಗಣಪತಿ ವಿಸರ್ಜನೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಸಂತೆ ಮಾರ್ಕೆಟ್ ಮೂಲಕ ಕೋಡಿಹಳ್ಳಿ ರಸ್ತೆ ತಲುಪಿ ನಂತರ ಮಹಾತ್ಮ ಗಾಂಧಿ ವೃತ್ತ ತಲುಪಿ, ಅಲ್ಲಿಂದ ಲಿಂಗದಹಳ್ಳಿ ರಸ್ತೆ ತಲುಪಿ ದೇವನಕರೆಯಲ್ಲಿ ವಿಸರ್ಜಿಸಲಾಯಿತು.
ಸ್ನೇಹಕೂಟ ಗೆಳೆಯರ ಬಳಗದ ಅಧ್ಯಕ್ಷ ತಿಪ್ಪೇಶ್, ಗೌರವಾಧ್ಯಕ್ಷ ಬಾವಿಮನೆ ಮಧು, ಉಮೇಶ್, ಪ್ರವೀಣ(ಪಣಿ) ಕುರಿ ಚೇತು, ದಿಲೀಪ, ದೀಪು, ಚಿದು,ಗುರುಮೂರ್ತಿ, ಅಜಿತ್, ವಿನಯ್, ಚಂದನ್, ಕಾಂತರಾಜ್ , ದೋಸೆ ದಿನೇಶ್ ಸೇರಿದಂತೆ ಮತ್ತಿತರ ಸದಸ್ಯರಿದ್ದರು.
ಭಾವೈಕ್ಯತೆ ಮೆರೆದ ಮುಸ್ಲಿಂ ಭಾಂಧವರು :
ಮಹರಾಜ ಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನ 4-5ಸಾವಿರ ಜನರಿಗೆ ಪ್ರಸಾದ ವಿನಿಯೋಗದಲ್ಲಿ ಪ್ರತಿ ವರ್ಷದಂತೆ ಮಾರ್ಗದ ಕ್ಯಾಂಪಿನ ಮುಸ್ಲಿಂ ಭಾಂದವರು ಭಕ್ತರಿಗೆ ತಂಪು ಪಾನೀಯ ನೀಡುವ ಮೂಲಕ ಸಾಥ್ ನೀಡಿ ಸೌಹಾರ್ಧತೆ ಮೆರೆದರು.
ಡಿಜೆಗೆ ಹೆಕ್ಕೆ ಹಾಕಿದ ಶಾಸಕ ಆನಂದ್ :
ಗಣೇಶೋತ್ಸವದಲ್ಲಿ ಪಾಲ್ಗೊಂಡ ಶಾಸಕ ಕೆ.ಎಸ್.ಆನಂದ್ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮಹರಾಜ ಗಣಪತಿ ಯನ್ನು ಪಕ್ಕಕ್ಕೆ ನಿಲ್ಲಿಸಿ ಬಾರಿ ಪ್ರಮಾಣದ ಆಕಾಶದೆತ್ತರಕ್ಕೆ ಸಿಡಿಮದ್ದು ಪ್ರದರ್ಶನದ ನಂತರ ಸ್ನೇಹಕೂಟ ಗೆಳೆಯರ ಬಳಗದ ಸದಸ್ಯರು ಡಿಜೆಗೆ ಹೆಜ್ಜೆಹಾಕುವಂತೆ ಒತ್ತಾಯಿಸಿದಾಗ ಕೆಲಕಾಲ ಯುವಕರೊಂದಿಗೆ ನರ್ತಿಸಿ ಸಂಭ್ರಮಿಸಿದ ಅವರು ಕ್ಷೇತ್ರಕ್ಕೆ ವಿಘ್ನವಿನಾಶಕ ಆದಷ್ಟು ಬೇಗ ಮಳೆ ನೀಡಿ ಬರಗಾಲ ದೂರಮಾಡಲಿ ಎಂದರು.
4ಬೀರೂರು3
ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಉಪ್ಪಾರ ಕ್ಯಾಂಪಿನ ಸ್ನೇಹಕೂಟ ಗೆಳೆಯರ ಬಳಗದ ಪ್ರಟಿಷ್ಠಾಪಿಸಿದ್ದ ಮಹಾರಾಜ ಶ್ರೀ ಸತ್ಯಗಣಪತಿ ಗೆ ಗಂಗಾರಥಿ ನಡೆಯಿತು.
4ಬೀರೂರು4
ಬೀರೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಉಪ್ಪಾರ ಕ್ಯಾಂಪಿನ ಸ್ನೇಹಕೂಟ ಗೆಳೆಯರ ಬಳಗದ ಪ್ರಟಿಷ್ಠಾಪಿಸಿದ್ದ ಮಹಾರಾಜ ಶ್ರೀ ಸತ್ಯಗಣಪತಿಯ ದ ರ್ಶನ ಪಡೆದ ಶಾಸಕ ಕೆ.ಎಸ್.ಆನಂದ್
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.