ಎಲ್ಲಾ 202 ಗ್ರಾಮಗಳಲ್ಲಿ ಶಾಖೆ ನಡೆಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಜಿಲ್ಲೆ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಶೃಂಗೇರಿ ಜಿಲ್ಲೆಯಿಂದ ಭಾನುವಾರ ಮಧ್ಯಾಹ್ನ 3ಕ್ಕೆ ಕೊಪ್ಪದ ಮೇಲಿನ ಪೇಟೆಯ ಟೋಲ್ ಗೇಟ್‌ನಿಂದ ಭವ್ಯ ಪಥಸಂಚಲನ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ನಾಲ್ಕು ತಾಲೂಕು ಗಳಿಂದ ಆಗಮಿಸಿದ್ದ ಸುಮಾರು 1,000ಕ್ಕೂ ಹೆಚ್ಚು ಪೂರ್ಣ ಗಣವೇಶಧಾರಿಗಳು 45 ನಿಮಿಷಗಳ ಕಾಲ ಕೊಪ್ಪದ ರಾಜ ಬೀದಿಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದರು.
ಪಥಸಂಚಲನದಲ್ಲಿ ಮಾಜಿ ಸಚಿವ ಡಿ. ಎನ್. ಜೀವರಾಜ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಪೂರ್ಣ ಗಣವೇಶಧಾರಿಗಳಾಗಿ ಪಾಲ್ಗೊಂಡು ಹೆಜ್ಜೆ ಹಾಕಿದ್ದು ವಿಶೇಷ. ಪಥಸಂಚಲನದ ಹಾದಿಯುದ್ದಕ್ಕೂ ತಾಯಂದಿರು ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.101ನೇ ವರ್ಷದಿಂದ ಸಮಾಜ ಪರಿವರ್ತನೆ ಸಂಕಲ್ಪ:
4 ತಾಲೂಕುಗಳಲ್ಲಿ ತರುಣರ ಸಮಾವೇಶ, ಗೃಹ ಸಂಪರ್ಕ ಅಭಿಯಾನದ ಮೂಲಕ 28,000ಕ್ಕೂ ಹೆಚ್ಚು ಮನೆಗಳ ಭೇಟಿ, ಜಿಲ್ಲೆಯ 36 ಕಡೆಗಳಲ್ಲಿ (ಕೊಪ್ಪ ತಾಲೂಕೊಂದರಲ್ಲೇ 14 ಕಡೆ) ಹಿಂದೂ ಸಮಾಜೋತ್ಸವ, ಸದ್ಭಾವನಾ ಸಭೆಗಳು ಹಾಗೂ ಪ್ರಮುಖ ನಾಗರಿಕರ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವಿವರಿಸಿದರು.
ಆಗಸ್ಟ್‌ನಲ್ಲಿ ಜಿಲ್ಲೆಯ 202 ಗ್ರಾಮಗಳಲ್ಲಿ ರಕ್ಷಾಬಂಧನ ಆಚರಿಸಿ, ಶಾಖಾ ಸಪ್ತಾಹದಲ್ಲಿ ಜಿಲ್ಲೆಯ ಎಲ್ಲಾ 202 ಗ್ರಾಮಗಳಲ್ಲಿ ಒಟ್ಟು 223 ಶಾಖೆಗಳನ್ನು ನಡೆಸುವ ಮೂಲಕ ಕಟ್ಟಕಡೆ ವ್ಯಕ್ತಿಯನ್ನೂ ತಲುಪಲು ಸಾಧ್ಯವಾಯಿತು. ಅಖಿಲ ಭಾರತೀಯ ಕಾರ್ಯ ಕಾರಿ ಮಂಡಳಿ ಬೈಠಕ್‌ನಲ್ಲಿ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಶೃಂಗೇರಿ ಜಿಲ್ಲೆಯ ಎಲ್ಲಾ ಗ್ರಾಮ ಗಳಲ್ಲಿ ಶಾಖೆಗಳಲ್ಲಿ ಕಾರ್ಯ ನಡೆದಿರುವುದನ್ನು ವಿಶೇಷವಾಗಿ ಉಲ್ಲೇಖಿಸಿರುವುದು ನಮಗೆ ಹೆಮ್ಮೆ ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಶೃಂಗೇರಿ ಜಿಲ್ಲಾ ಸಂಘಚಾಲಕ ಟಿ. ಕೆ. ನಾರಾಯಣ (ಕೊಪ್ಪ), ವಿಭಾಗ ಸೇವಾ ಪ್ರಮುಖರಾದ ರಾಜೇಂದ್ರ ಕುಮಾರ್ (ಬಿ. ಎಚ್. ಕೈಮರ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಶಾರೀರಿಕ ಪ್ರಮುಖರಾದ ಆದಿತ್ಯ ಹರಿಹರಪುರ ಮುಂತಾದವರಿದ್ದರು.