ಹೊಯ್ಸಳರ ನಾಡಿನಲ್ಲಿ ವಂದೇ ಮಾತರಂ ರಥಕ್ಕೆ ಭವ್ಯ ಸ್ವಾಗತ

KannadaprabhaNewsNetwork |  
Published : Nov 25, 2026, 01:45 AM IST
24ಎಚ್ಎಸ್ಎನ್7 : ಹಳೇಬೀಡಿನಲ್ಲಿ ವಂದೇ ಮಾತರಂ ೧೫೦ನೇ ವರ್ಷದ ಭಾರತ ಮಾತೆ ಮತ್ತು ಪುಲಿಕೇಶಿ ಚಕ್ರವರ್ತಿ ರಥದ ಯಾತ್ರೆಗೆ ಹಳೇಬೀಡಿನಲ್ಲಿ ಅದ್ದೂರಿಯಾಗಿ ಮಕ್ಕಳಿಂದ ಪುಷ್ಪ ಅರ್ಚನೆ ಮೂಲಕ ಸುಸ್ವಾಗತ ಕೋರಲಾಯಿತು. | Kannada Prabha

ಸಾರಾಂಶ

ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ರಚನೆಯಾಗಿ ೧೫೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್ ೭, ೨೦೨೫ರಿಂದ ೨೦೨೬ನವೆಂಬರ್‌ವರಗೆ ವರ್ಷ ಪೂರ್ತಿ ರಾಷ್ಟ್ರ ವ್ಯಾಪ್ತಿ ಸ್ಮರಣ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ರಾಜ್ಯ ಸಂಚಾಲಕ ರಾಜು ಕಡಕಲ್ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡುತ್ತ, ನಮ್ಮ ರಾಜ್ಯದಲ್ಲಿ ನವೆಂಬರ್ ೧೬ರಂದು ಮೈಸೂರಿನ ಕೋಟೆ ಶ್ರೀಆಂಜನೇಯ ಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಈ ವಂದೇ ಮಾತರಂ ರಥ ಇಡೀ ರಾಜ್ಯಾದ್ಯಂತ ಸಂಚಾರ ಮಾಡಿ ವಂದೇ ಮಾತರಂ ಗೀತೆ ಸಾರವನ್ನು ತಿಳಿಸಿ ಜನವರಿ ೨೦೨೭ ಮುಕ್ತಾಯ ನೀಡುತ್ತವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ವಂದೇ ಮಾತರಂ ೧೫೦ನೇ ವರ್ಷದ ಭಾರತ ಮಾತೆ ಮತ್ತು ಪುಲಿಕೇಶಿ ಚಕ್ರವರ್ತಿ ರಥಯಾತ್ರೆಗೆ ಹಳೇಬೀಡಿನಲ್ಲಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.

ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ರಚನೆಯಾಗಿ ೧೫೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್ ೭, ೨೦೨೫ರಿಂದ ೨೦೨೬ನವೆಂಬರ್‌ವರಗೆ ವರ್ಷ ಪೂರ್ತಿ ರಾಷ್ಟ್ರ ವ್ಯಾಪ್ತಿ ಸ್ಮರಣ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ರಾಜ್ಯ ಸಂಚಾಲಕ ರಾಜು ಕಡಕಲ್ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡುತ್ತ, ನಮ್ಮ ರಾಜ್ಯದಲ್ಲಿ ನವೆಂಬರ್ ೧೬ರಂದು ಮೈಸೂರಿನ ಕೋಟೆ ಶ್ರೀಆಂಜನೇಯ ಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಈ ವಂದೇ ಮಾತರಂ ರಥ ಇಡೀ ರಾಜ್ಯಾದ್ಯಂತ ಸಂಚಾರ ಮಾಡಿ ವಂದೇ ಮಾತರಂ ಗೀತೆ ಸಾರವನ್ನು ತಿಳಿಸಿ ಜನವರಿ ೨೦೨೭ ಮುಕ್ತಾಯ ನೀಡುತ್ತವೆ ಎಂದು ತಿಳಿಸಿದರು.

ಬಿ. ಜೆ.ಪಿ ಹಿರಿಯ ಮುಖಂಡ ಬಸ್ತಿಹಳ್ಳಿ ಸೋಮಶೇಖರ್ ಮಾತನಾಡುತ್ತ, 1874-75 ರಲ್ಲಿ ರಚನೆಯಾದ ವಂದೇ ಮಾತರಂ ಗೀತೆ 1905 ರ ವೇಳೆಗೆ ಬಂಗಾಳವನ್ನು ಬ್ರಿಟಿಷರು ವಿಭಜನೆ ಮಾಡಿದರು. ಹಿಂದೂ ಮುಸ್ಲಿಮರ ನಡುವೆ ವಿಷವನ್ನು ಬಿತ್ತಿ ಕಿತ್ತಾಟಕ್ಕೆ ಬೆಂಕಿ ಹಚ್ಚಿದರು. ವಂದೇ ಮಾತರಂ ರಣತಂತ್ರವನ್ನು ರೂಪಿಸಿ ವೈಭವದಿಂದ ಗುಣಗಾನವನ್ನು ಹಾಡಿ ದೇಶದ ಬಗ್ಗೆ ಒಗ್ಗೂಡಿಸಲು ಸಹಕಾರವಾಗಿದ್ದೆ ಈ ರಣ ಮಂತ್ರ ವಂದೇ ಮಾತರಂ. ಇದಕ್ಕೆ ೧೫೦ ವರ್ಷಗಳು ಆಗಿದೆ. ಇಂದಿನ ದೇಶದ ರಾಜಕೀಯದಲ್ಲಿ ತಮ್ಮ ಸ್ವಾರ್ಥಕ್ಕಾಗಿ ರಾಜಕೀಯವನ್ನು ಮಾಡುತ್ತಾ ದೇಶವನ್ನು ಹಾಳು ಮಾಡುತ್ತಿದ್ದಾರೆ. ಇಂದಿನ ಅಂಕಿ-ಅಂಶಗಳ ಪ್ರಕಾರ ಅಕ್ಕಪಕ್ಕದ ದೇಶದವರು ವಲಸೆ ಬಂದು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಆಳುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಭಾರತ ಸ್ವತಂತ್ರ ಪೂರ್ವದ ಹಿಂದಿನ ಪರಿಸ್ಥಿತಿಗೆ ಬರಬೇಕಾಗಿದೆ. ಹಾಗಾಗಿ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು. ವಂದೇ ಮಾತರಂ ರಥಕ್ಕೆ ಭವ್ಯ ಸ್ವಾಗತ ನೀಡಿದ ಸರ್ಕಾರಿ ಕೆಪಿಎಸ್ ಶಾಲೆ, ಕಲ್ಪತರು ವಿದ್ಯಾಸಂಸ್ಥೆ, ಎಸ್.ಜಿ.ಆರ್. ಪಬ್ಲಿಕ್ ಸ್ಕೂಲ್, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್, ಬಸವರಾಜೇಂದ್ರ ಪ್ರೌಢಶಾಲೆ ಹಾಗೂ ಹಳೇಬೀಡಿನ ಗ್ರಾಮಸ್ಥರು ಹಾಜರಿದ್ದರು. ವಂದೇ ಮಾತರಂ ಭಾವಪೂರ್ಣ, ಅರ್ಥಪೂರ್ಣದಲ್ಲಿ ಸುಶ್ರಾವ್ಯ ಕಂಠದಲ್ಲಿ ಹಾಡಿ ಮನರಂಜನೆಯನ್ನು ವ್ಯಕ್ತಪಡಿಸಿದ ಎಸ್.ಜಿ.ಆರ್ ಕಾಲೇಜ್‌ನ ಕನ್ನಡ ಉಪನ್ಯಾಸಕ ಸುರೇಶ್. ಈ ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲಾ ಅಭಿವೃದ್ಧಿ ಸದಸ್ಯರಾದ ಎಚ್ ಪರಮೇಶ್ವರ್, ಈಶ್ವರ್, ಯೋಗೀಶ್, ರಂಜಿತ್, ರಾಜಣ್ಣ, ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಯತೀಶ್, ಎಲ್.ಐ.ಸಿ ಚಂದ್ರಶೇಖರ್ ಎಲ್ಲಾ ಶಾಲೆಯ ಶಿಕ್ಷಕರು ಹಾಗೂ ಈ ಒಂದು ಕಾರ್ಯಕ್ರಮ ರೂವಾರಿಯಾದ ಚಂದ್ರಕಾಂತ್, ಲೋಹಿತ್ ಪ್ರಕಾಶ್, ಶಶಾಂಕ್ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು, ಮಕ್ಕಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಪಾನಿಂದಲೇ ಆಶಾ ಮನವೊಲಿಕೆಗೆ ಸಿಎಂ ಯತ್ನ
ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳ ಮಾರಾಟ: ಅಧಿಕಾರಿಗಳ ದಾಳಿ