ಬಲಿಷ್ಠ ಶಿಕ್ಷಣ ಸಂಸ್ಥೆ ಉದ್ದೇಶದಿಂದ ಅಜ್ಜಂದಿರು ಕಾಲೇಜು ಕಟ್ಟಿದರು

KannadaprabhaNewsNetwork |  
Published : Apr 27, 2026, 01:45 AM IST
ಕ್ಯಾಪ್ಷನ26ಕೆಡಿವಿಜಿ31 ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ 'ಎಥ್ನಿಕ್ ಡೇ' ಹಾಗೂ 'ಚೈತ್ರ-2026' ಕಾರ್ಯಕ್ರಮವನ್ನು ನಟಿ ಮಲೈಕಾ ವಸುಪಾಲ್ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಡಿ.ಪಿ.ನಾಗರಾಜಪ್ಪ ಇತರರು ಇದ್ದರು. .......ಕ್ಯಾಪ್ಷನ26ಕೆಡಿವಿಜಿ32, 33, 34, 35 ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ 'ಎಥ್ನಿಕ್ ಡೇ' ಹಾಗೂ 'ಚೈತ್ರ-2026' ಉದ್ಘಾಟನಾ ಸಮಾರಂಭದಲ್ಲಿ ಮಿಂಚಿದ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು. | Kannada Prabha

ಸಾರಾಂಶ

ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ದಾವಣಗೆರೆಯ ಸ್ಯಾಂಡಲ್‌ವುಡ್ ನಟಿ ಮಲೈಕಾ ಟಿ ವಸುಪಾಲ್ ತಿಳಿಸಿದ್ದಾರೆ.

- ನಟಿ ಮಲೈಕಾ ಟಿ ವಸುಪಾಲ್ ಮನದಾಳ । ಯುಬಿಡಿಟಿ ಕಾಲೇಜಿನಲ್ಲಿ ಎಥ್ನಿಕ್ ಡೇ, ಚೈತ್ರ-2026 ಉದ್ಘಾಟನೆ । ಸಾಂಸ್ಕೃತಿಕ ಕಲರವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾನು ಈ ಬಿಡಿಟಿ ಕಾಲೇಜಿನ ಸಂಸ್ಥಾಪಕರಾದ ಬ್ರಹ್ಮಪ್ಪ ದೇವಪ್ಪ ತವನಪ್ಪನವರ ಮರಿಮೊಮ್ಮಗಳು. ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರೂ ಇದುವರೆಗೂ ಎಲ್ಲಿಯೂ ನನ್ನ ಕುಟುಂಬದ ಹೆಸರನ್ನು ಬಳಸಿಕೊಂಡಿಲ್ಲ ಎಂದು ದಾವಣಗೆರೆಯ ಸ್ಯಾಂಡಲ್‌ವುಡ್ ನಟಿ ಮಲೈಕಾ ಟಿ ವಸುಪಾಲ್ ತಿಳಿಸಿದರು.

ನಗರದ ನಗರದ ಯು.ಬಿ.ಡಿ.ಟಿ. ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ''''''''ಎಥ್ನಿಕ್ ಡೇ'''''''' ಹಾಗೂ ''''''''ಚೈತ್ರ-2026'''''''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ತಾಂತ್ರಿಕವಾಗಿ ಬಲಿಷ್ಠವಾದ ಶಿಕ್ಷಣ ಸಂಸ್ಥೆಯಿರಲಿ ಎಂಬ ಉದ್ದೇಶದಿಂದ ನಮ್ಮ ಅಜ್ಜಂದಿರು ಈ ಕಾಲೇಜನ್ನು ಪ್ರಾರಂಭಿಸಿದರು. ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದ ಬೆಳೆಯಬೇಕೆಂಬ ಹಂಬಲದಿಂದ ನನ್ನ ಕುಟುಂಬದ ಹಿನ್ನೆಲೆಯನ್ನು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಈ ಕಾಲೇಜಿನ ಕಾರ್ಯಕ್ರಮದಲ್ಲಿ ಅದನ್ನು ಹೇಳಲೇಬೇಕಾದ ಅನಿವಾರ್ಯತೆ ಇತ್ತು ಎಂದರು.

ನಾನು ಕೂಡ ಎಂಜಿನಿಯರ್ ಆಗಿದ್ದು, ಇದೇ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದೇನೆ. ಕಾಲೇಜು ದಿನಗಳು ಕೇವಲ ಪಾಠಕ್ಕೆ ಸೀಮಿತವಾಗದೇ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಾನು ಕೂಡ ಪಾಲ್ಗೊಳ್ಳುತ್ತಿದ್ದೆ ಎಂದರು.

ಯತ್ನಿಕ್ ಡೇ- ಸಾಂಸ್ಕೃತಿಕ ಕಲರವ:

ಸಮಾರಂಭದ ಹಿನ್ನೆಲೆ ಕಾಲೇಜಿನ ವಾತಾವರಣ ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಲರವದಿಂದ ಕಂಗೊಳಿಸುತ್ತಿತ್ತು. ಕಾಲೇಜು ದಿನಗಳು ಅಂದ್ರೇನೇ ಕಲರ್ ಫುಲ್. ಈ ನೆನಪುಗಳು ಸದಾ ಹಚ್ಚ ಹಸಿರು. ಇನ್ನು ಎಥ್ನಿಕ್ ಡೇ ಎಂದರೆ ಕೇಳಬೇಕೇ? ಕಲರ್ ಫುಲ್ ಬಟ್ಟೆ, ಹಾಡು, ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಬಗೆ ಬಗೆಯ ನೆನಪುಗಳು ಇರುತ್ತವೆ.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಸೇರಿದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೇಷಭೂಷಣ, ಸಂಪ್ರದಾಯಗಳನ್ನು ಅನಾವರಣಗೊಳಿಸಿದರು. ಗ್ರಾಮೀಣ ಸೊಗಡು, ಯಕ್ಷಗಾನ, ಸೇರಿದಂತೆ ಹಲವು ಸಾಂಪ್ರಾದಾಯಿಕ ಉಡುಗೆಯಲ್ಲಿ ಯುವಕ-ಯುವತಿಯರು ರಾರಾಜಿಸುತ್ತಿದ್ದರು. ಸೀರೆ, ಸಾಂಪ್ರದಾಯಿಕ ಉಡುಗೆಗಳ ಕಾರಬಾರು ಜೋರಾಗಿತ್ತು.

ಗುಜರಾತಿ, ಕೊಡಗು, ಉತ್ತರ ಕರ್ನಾಟಕ ಪೇಟಾ, ಲಂಬಾಣಿ ನೃತ್ಯ, ಯಕ್ಷಗಾನ ಕಣ್ಮನ ಸೆಳೆದವು. ಕಾಲೇಜಿನ ಉಪನ್ಯಾಸಕರು ಬಿಳಿ ಶರ್ಟ್, ಬಿಳಿ ಪಚ್ಚೆ ಕಟ್ಟಿಕೊಂಡು, ತಲೆಯ ಮೇಲೆ ಕೇಸರಿ ಪೇಟ ಧರಿಸಿ ಸಂಭ್ರಮಿಸಿದರು. ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿಯರು ಎಂಜಾಯ್ ಮಾಡಿದರು. ನಿತ್ಯ ಪಾಠದ ಟೆನ್ಷನ್ ಮರೆತು ಕುಣಿದು ಕುಪ್ಪಳಿಸಿದರು.

ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕೇರಳ ಸಂಸ್ಕೃತಿಯನ್ನು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಸಂಸ್ಕೃತಿಗಳಾದ ತಿರುಪತಿ ದೇವಸ್ಥಾನ ಕಲಾಕೃತಿ, ಕುಚಿಪುಡಿ ಡ್ಯಾನ್ಸ್, ಶ್ರೀನಿವಾಸ ಕಲ್ಯಾಣ, ಪೌರಾಣಿಕ ಪಾತ್ರಗಳು, ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳು ಉತ್ತರ ಪ್ರದೇಶ ಅಯೋಧ್ಯೆ ದೇವಸ್ಥಾನ ಕಲಾಕೃತಿ, ರಾಮಾಯಣ ನಾಟಕ, ಇ ಅಂಡ್ ಐ ವಿಭಾಗದ ವಿದ್ಯಾರ್ಥಿಗಳು ಎಲ್ಲಮ್ಮ ದೇವಿ ನಾಟಕ ಪ್ರಸ್ತುತಪಡಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಎಥ್ನಿಕ್ ಡೇ ಸ್ಪರ್ಧೆಗಳ ತೀರ್ಪುಗಾರರಾಗಿ ಬೆಳಗಾವಿ ವಿಟಿಯು ವಿಶೇಷಾಧಿಕಾರಿ ಚೈತ್ರ ಮಲ್ಲಿಕಾರ್ಜುನ್, ದಾವಣಗೆರೆ ಸ್ವರ್ಣ ಭಾರತಿ ಮಹಿಳಾ ಕ್ಲಬ್ ಸಂಸ್ಥಾಪಕ ಅಧ್ಯಕ್ಷೆ ಭಾರತಿ ಕೇಶವ್, ಕನ್ನಡ ಚಿತ್ರನಟ ಹಾಗೂ ಗಾಯಕ ಭರತ್ ನಾಯ್ಕ್, ಪಥದರ್ಶಕ ವಾರಪತ್ರಿಕೆಯ ಸಂಪಾದಕ ಗುರುರಾಜ್ ಶಿರಹಟ್ಟಿ ಪಾಲ್ಗೊಂಡಿದ್ದರು.

ಎಥ್ನಿಕ್ ಡೇ ಸಂಯೋಜಕರಾದ ಡಾ. ಎಸ್.ಮಂಜಪ್ಪ, ಡಾ. ಎಸ್.ಬಿ.ಮಲ್ಲೂರ್, ಸಂಶೋಧನಾ ವಿಭಾಗದ ಡೀನ್ ಡಾ. ಎಸ್.ಮಂಜಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ.ಎನ್.ಮಂಜನಾಯ್ಕ್, ಶೈಕ್ಷಣಿಕ ವಿಭಾಗದ ಡೀನ್ ಡಾ.ಈರಪ್ಪ ಸೊಗಲದ ಮತ್ತು ಡೀನ್ ಡಾ.ಕೆ.ಮಂಜುನಾಥ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-26ಕೆಡಿವಿಜಿ31:

ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ನಡೆದ ''''''''ಎಥ್ನಿಕ್ ಡೇ'''''''' ಹಾಗೂ ''''''''ಚೈತ್ರ-2026'''''''' ಕಾರ್ಯಕ್ರಮವನ್ನು ನಟಿ ಮಲೈಕಾ ವಸುಪಾಲ್ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಡಿ.ಪಿ.ನಾಗರಾಜಪ್ಪ ಇತರರು ಇದ್ದರು. -26ಕೆಡಿವಿಜಿ32, 33, 34, 35: ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ''''''''ಎಥ್ನಿಕ್ ಡೇ'''''''' ಹಾಗೂ ''''''''ಚೈತ್ರ-2026'''''''' ಉದ್ಘಾಟನಾ ಸಮಾರಂಭದಲ್ಲಿ ಮಿಂಚಿದ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆ ಮಾರ್ಗದಲ್ಲಿ ಪುತ್ರ ಮಧು ಮಾದೇಗೌಡರಿಂದ ಜನಸೇವೆ: ನಿಶ್ಚಲಾನಂದನಾಥ ಸ್ವಾಮೀಜಿ
ಮಹಿಳಾ ಮೀಸಲು ಮಸೂದೆ ಹೆಸರಿನಲ್ಲಿ ದಕ್ಷಿಣ ಭಾರತ ರಾಜ್ಯಗಳಿಗೆ ಕೇಂದ್ರದಿಂದ ಅನ್ಯಾಯ: ಕೆ.ಎಂ.ಉದಯ್