ವಾಲ್ಮೀಕಿ ಭವನಕ್ಕೆ ಅನುದಾನ<bha>;</bha> ಸಚಿವ ಬಿ.ನಾಗೇಂದ್ರ ಭರವಸೆ

KannadaprabhaNewsNetwork |  
Published : Oct 26, 2023, 01:00 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಸಮಾಜದ ಅಭಿವೃದ್ಧಿಗೆ ನಾನು ಬದ್ಧ ಎಂದು ಸಚಿವರು

ಸಮಾಜದ ಅಭಿವೃದ್ಧಿಗೆ ನಾನು ಬದ್ಧ ಎಂದು ಸಚಿವರು ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗದಲ್ಲಿರುವ ವಾಲ್ಮೀಕಿ ಭವನ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ನೀಡಿ ಅದ್ಧೂರಿಯಾಗಿ ಉದ್ಘಾಟನೆ ನೆರೆವೇರಿಸಲಾಗುತ್ತದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಭರವಸೆ ನೀಡಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವರು ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ನಾಯಕ‌ ಸಮಾಜದವರ ಮನವಿಯಂತೆ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಶೌಚಾಲಯ ಸಮಸ್ಯೆ ನಿವಾರಣೆ, ಭವನದ ಮೇಲೆ ಪ್ರತಿಮೆಗಳು ನಿರ್ಮಿಸಬೇಕು. ಕಟ್ಟಡದ ಸ್ವಚ್ಛತೆ ಸೇರಿ ಸಂಪೂರ್ಣ ಅಭಿವೃದ್ಧಿ ಮಾಡಲು ಅನುದಾನ ತುರ್ತಾಗಿ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ನಮ್ಮ‌ಸಮಾಜದ ಅಭಿವೃದ್ಧಿಗೆ ನಾನು ಬದ್ಧವಾಗಿದ್ದೇನೆ. ಭವನದ ಅಭಿವೃದ್ಧಿಗೆ ಅಗತ್ಯವಿರುವ ಹಣಕ್ಕೆ ನಾಯಕ‌ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಇದು ನನ್ನ ಜವಬ್ದಾರಿಯಾಗಿದೆ ಎಂದು ಸ್ಥಳದಲ್ಲಿಯೇ ಇಲಾಖೆ ಎಂಡಿ ಅವರಿಗೆ ಫೋನ್ ಮಾಡಿ, ವಾಲ್ಮೀಕಿ ಜಯಂತಿ ನಂತರ ಬೆಂಗಳೂರಿನ ನಮ್ಮ ಇಲಾಖೆ ಪಿಎಸ್, ಇಂಜಿನಿಯರ್‌ಗಳ ತಂಡ ಚಿತ್ರದುರ್ಗಕ್ಕೆ ಕಳಿಸಿ ಎಷ್ಟು ಹಣ ಅಗತ್ಯವಿದೆ ಎಂದು ಅಂದಾಜು ಪಟ್ಟಿ ಮಾಡಬೇಕೆಂದು ಸೂಚಿಸಿದರು. ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಎಸ್ಟಿ ಸೆಲ್ ಜಿಲ್ಲಾ ಅಧ್ಯಕ್ಷ ಅಂಜಿನಪ್ಪ, ಅರುಣ್, ಮುಖಂಡರಾದ ಗೋಪಾಲಸ್ವಾಮಿ ನಾಯಕ್, ದರ್ಶನ್ ಇಂಗಳದಾಳ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಓ.ಪರಮೇಶ್ವರಪ್ಪ, ಮ್ಯಾನೇಜರ್ ದಯಾನಂದ್ ಸೇರಿ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು. ---- ಚಿತ್ರದುರ್ಗದ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಬಿ.ನಾಗೇಂದ್ರ. -- ಫೈಲ್ ನೇಮ್ 25 ಸಿಟಿಡಿ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ