ಕಾಂಗ್ರೆಸ್‌ ಸದಸ್ಯರಿಗೆ ಮಾತ್ರ ಅನುದಾನವೇ

KannadaprabhaNewsNetwork |  
Published : Jun 03, 2025, 01:10 AM IST
2ಕೆಕೆಆರ್1:ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯತಿ ಮಾಸಿಕ ಸಾಮಾನ್ಯ ಸಭೆ ಸೋಮವಾರ ಜರುಗಿತು. ಪಪಂ ಸದಸ್ಯ ಶಿವರಾಜಗೌಡ ಯಲ್ಲಪ್ಪಗೌಡ್ರು ಮಾತನಾಡಿದರು.  | Kannada Prabha

ಸಾರಾಂಶ

ನಮ್ಮ ವಾರ್ಡ್‌ಗಳಲ್ಲಿ ಅನೇಕ ಸಮಸ್ಯೆಗಳಿದ್ದು ಈ ಕುರಿತು ಅಧ್ಯಕ್ಷರು, ಮುಖ್ಯಾಧಿಕಾರಿ ಗಮನಕ್ಕೂ ತಂದರೂ ಸ್ಪಂದಿಸಿಲ್ಲ. ಸಿಸಿ ರಸ್ತೆ ಇಲ್ಲ, 15ನೇ ಹಣಕಾಸಿನಲ್ಲಿ ವಾರ್ಡ್‌ ಕಾಮಗಾರಿ ₹ 1 ಸಹ ನೀಡಿಲ್ಲ. ಈ ಮೂಲಕ ವಿಪಕ್ಷ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡುತ್ತಿಲ್ಲ.

ಕುಕನೂರು:

ಆಡಳಿತ ಪಕ್ಷದ ಸದಸ್ಯರ (ಕಾಂಗ್ರೆಸ್‌) ವಾರ್ಡ್‌ಗಳಿಗೆ ಮಾತ್ರ ಅನುದಾನ ಹಂಚಿಕೆ ಆಗುತ್ತಿದೆ. ಬಿಜೆಪಿ ಸದಸ್ಯರಿಗೆ ಅನುದಾನ ನೀಡುತ್ತಿಲ್ಲ ಏಕೆ ನೀಡುತ್ತಿಲ್ಲ. ಈ ಮೂಲಕ ತಾರತಮ್ಯ ಮಾಡುತ್ತೀದ್ದೀರಿ.

ಸೋಮವಾರ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವರಾಜಗೌಡ ಯಲ್ಲಪ್ಪಗೌಡ್ರ ಅವರ ಆಕ್ರೋಶದ ಮಾತುಗಳು.

ಕೆಲ ಸದಸ್ಯರ ಗಮನಕ್ಕೂ ತರದೆ ಕಾಮಗಾರಿ ಟೆಂಡರ್ ಕರೆಯಲಾಗುತ್ತಿದೆ. ನಮ್ಮ ವಾರ್ಡ್‌ಗಳಲ್ಲಿ ಅನೇಕ ಸಮಸ್ಯೆಗಳಿದ್ದು ಈ ಕುರಿತು ಅಧ್ಯಕ್ಷರು, ಮುಖ್ಯಾಧಿಕಾರಿ ಗಮನಕ್ಕೂ ತಂದರೂ ಸ್ಪಂದಿಸಿಲ್ಲ. ಸಿಸಿ ರಸ್ತೆ ಇಲ್ಲ, 15ನೇ ಹಣಕಾಸಿನಲ್ಲಿ ವಾರ್ಡ್‌ ಕಾಮಗಾರಿ ₹ 1 ಸಹ ನೀಡಿಲ್ಲ. ಈ ಮೂಲಕ ವಿಪಕ್ಷ ಸದಸ್ಯರ ವಾರ್ಡ್‌ಗಳಿಗೆ ಅನುದಾನ ನೀಡುತ್ತಿಲ್ಲ. ನಮ್ಮ ಗಮನಕ್ಕೂ ತರದೆ ಟೆಂಡರ್‌ ಕರೆಯುವುದುದಾದರೆ ಸದಸ್ಯರಾಗಿ ನಾವೇಕೆ ಇರಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.

ಫಾರಂ ನಂ. ೩ ವಿಳಂಬ ಆರೋಪ:

ಸಾರ್ವಜನಿಕರು ಫಾರಂ ನಂ. ೩ ನೀಡಬೇಕೆಂದು ವರ್ಷದ ಹಿಂದೇ ಅರ್ಜಿ ಸಲ್ಲಿಸಿದ್ದರೂ ಕೆಲವರಿ ಈ ವರೆಗೂ ಅಧಿಕಾರಿಗಳು ನೀಡಿಲ್ಲ. ಇದರಿಂದ ಜನರನ್ನು ನಮ್ಮನ್ನು ಬೈಯುತ್ತಿದ್ದಾರೆ. ಅರ್ಜಿ ಸಲ್ಲಿಸದ ಪ್ರಭಾವಿಗಳಿಗೆ ಫಾರಂ ನಂ. ೩ ವಿತರಿಸಿದ್ದಾರೆ. ಇಂತಹ ನೌಕರರು ಏಕೆಬೇಕೆಂದು ನೌಕರರ ವಿರುದ್ಧ ಸದಸ್ಯ ಸಿರಾಜುದ್ದೀನ್ ಕರಮುಡಿ ಹರಿಹಾಯ್ದರು.

ವಿದ್ಯುತ್ ಸಂಪರ್ಕ ಕಡಿತಗೊಳಿಸಿ:

ಪಟ್ಟಣದಲ್ಲಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು ಅವುಗಳನ್ನು ಗುರುತಿಸಿ ಸಂಪರ್ಕ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ ಸದಸ್ಯ ರಾಮಣ್ಣ ಬಂಕದಮನಿ, ಕೆಇಬಿ ರಸ್ತೆಯಲ್ಲಿ ಚರಂಡಿ ನಿರ್ಮಿಸಿದ ಬಳಿಕವೇ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಒತ್ತಾಯಿಸಿದರು.

ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಶೇ. ೨೪.೧೦ ಪಪಂ ನಿಧಿಯಲ್ಲಿ ಕ್ರಿಯಾಯೋಜನೆ ಮಂಜೂರಾತಿ, ಎಸ್‌ಟಿಪಿ ಜಾಗೆ ಮಂಜೂರಾತಿ, ಕೆಇಬಿ ರಸ್ತೆಯಿಂದ ಗಟಾರ್ ನಿರ್ಮಾಣ, ಸರ್ವೇ ನಂ. ೧೦೦ರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ಸಿಬ್ಬಂದಿ ವರ್ಗಾವಣೆ, ಚರಂಡಿ ಸ್ವಚ್ಛಗೊಳಿಸುವುದು, ಹೊಸ ಕಟ್ಟಡ ಟೆಂಡರ್ ಕರೆಯುವುದು, ಸರ್ವೇ ೩೯೫ರ ಜಮೀನಿನಲ್ಲಿ ೩೨ ಗುಂಟೆಯಲ್ಲಿ ಅಂಬೇಡ್ಕರ್ ಭವನಕ್ಕೆ ೩೨ ಗುಂಟೆ ಕಾಯ್ದಿರಿಸುವುದು, ಸರ್ವೇ ೧೩೫ ರಲ್ಲಿಯ ಜವಳದ ಕೆರೆ ಸಮತಟ್ಟು, ಸರ್ವೇ ೧೩೫, ೧೯೫ ರಲ್ಲಿಯ ಆಸ್ತಿಗಳನ್ನು ಹದ್ದುಬಸ್ತ್ ಮಾಡುವುದು, ಇಟಗಿ ಮಸೂತಿ ಬಯಲು ರಂಗ ಮಂದಿರ ನಿರ್ಮಾಣದ ಕುರಿತು, ಕೋಳಿಪೇಟೆ ಬಸ್ ನಿಲ್ದಾಣಕ್ಕೆ ಆರ್‌ಸಿಸಿ ಹಾಕುವ ಕುರಿತು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ ಆರುಬೆಳ್ಳಿನ್, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ್‌ಸಾಬ ಗುಡಿಹಿಂದಲ್, ಸದಸ್ಯರಾದ ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಗಗನ್ ನೋಟಗಾರ, ಮಂಜುಳಾ ಕಲ್ಮನಿ, ರಾಧಾ ದೊಡ್ಡಮನಿ, ಕವಿತಾ ಹೂಗಾರ, ಲಕ್ಷ್ಮೀ ಸಬರದ, ಬಾಲರಾಜ ಗಾಳಿ, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಮಲ್ಲು ಚೌಧರಿ, ಜಗನ್ನಾಥ ಭೋವಿ, ಶಿವರಾಜಗೌಡ ಯಲ್ಲಪ್ಪಗೌಡ್ರ, ಮಂಜುನಾಥ ಕೋಳೂರು, ನೇತ್ರಾವತಿ ಮುಧೋಳ, ನಾಮನಿರ್ಮೀಶಿತ ಸದಸ್ಯ ಈರಣ್ಣ ಯಲಬುರ್ಗಿ, ಶರಣಯ್ಯ ಸಸಿಮಠ ಸೇರಿದಂತೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!