ಸ್ಮಶಾನ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Dec 06, 2024, 08:58 AM IST
ಪೋಟೋ (5 ಹೆಚ್‌ ಎಲ್‌ ಕೆ 1) ಹೊಳಲ್ಕೆರೆ ನಗರದ  ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಹಶೀಲ್ದಾರ್‌   ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಹೊಳಲ್ಕೆರೆ: ವೀರಶೈವ ಸಮಾಜದ ಜನರ ಶವಸಂಸ್ಕಾರಕ್ಕೆ ಮೀಸಲಿಟ್ಟ ಸ್ಮಶಾನ ಭೂಮಿಯನ್ನು ಹಾಗೂ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಸ್ಮಶಾನ ಭೂಮಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಹೊಳಲ್ಕೆರೆ: ವೀರಶೈವ ಸಮಾಜದ ಜನರ ಶವಸಂಸ್ಕಾರಕ್ಕೆ ಮೀಸಲಿಟ್ಟ ಸ್ಮಶಾನ ಭೂಮಿಯನ್ನು ಹಾಗೂ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಸ್ಮಶಾನ ಭೂಮಿಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ನಗರದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ನಗರ ಘಟಕದ ರೈತ ಸಂಘದ ಅಧ್ಯಕ್ಷ ಎಸ್.ಸಿದ್ದರಾಮಪ್ಪ, ಪಟ್ಟಣದ ಗಣಪತಿ ದೇವಾಲಯದ ಮುಂಭಾಗದ ಚೀರನಹಳ್ಳಿಗೆ ಹೋಗುವ ರಸ್ತೆಯ ಪಕ್ಕದ ಹಿರೇಕೆರೆ ಹಳ್ಳದ ಬಲಭಾಗದಲ್ಲಿ ರಿ.ಸ.ನಂ 198ರಲ್ಲಿ ವೀರಶೈವ ಲಿಂಗಾಯತ ಜನಾಂಗದ ಸ್ಮಶಾನಕ್ಕಾಗಿ ಕಾಯ್ದಿರಿಸಿದ 5 ಎಕರೆ 20 ಗುಂಟೆ, ಸರ್ಕಾರ ಕಂದಾಯ ಇಲಾಖೆಯ 5 ಎಕರೆ 28 ಗುಂಟೆ ಒಟ್ಟು 11 ಎಕರೆ 8 ಗುಂಟೆ ಹಾಗೂ ರಿ.ಸ.ನಂ. 196ರಲ್ಲಿ ಹಿಂದೂ ಜನಾಂಗದ ಸ್ಮಶಾನದ ಉದ್ದೇಶಕ್ಕಾಗಿ 5 ಎಕರೆ, ಸರ್ಕಾರ ಕಂದಾಯ ಇಲಾಖೆಗೆ ಸಂಬಂಧಿಸಿದ 17 ಎಕರೆ 28 ಗುಂಟೆ ಜಮೀನಿದ್ದು, ಈ ರುದ್ರಭೂಮಿ ಹಾಗೂ ಸರ್ಕಾರದ ಜಮೀನು ಒತ್ತುವರಿ ಆಗಿರುವುದು ಅಧಿಕಾರಿಗಳ ಗಮನಕ್ಕೆ ಬಂದರೂ, ಕಣ್ಮಂಚಿ ಕುಳಿತಿದ್ದಾರೆ ಎಂದು ದೂರಿದರು.

ಸೂಕ್ತ ಬಂದೊಬಸ್ತುನೊಂದಿಗೆ ಅಳತೆ ಮಾಡಿ ಒತ್ತುವರಿ ಜಮೀನನ್ನು ಆದಷ್ಟೂ ಬೇಗ ತೆರವುಗೊಳಿಸಬೇಕು. ಭಾಂದ್‌ ಕಲ್ಲು ನೆಟ್ಟು ಈ ಸಮಾಜದ ಪಾರ್ಧಿವ ಶರೀರಗಳನ್ನು ಅಂತ್ಯ ಸಂಸ್ಕಾರ ಮಾಡಲು ಅನುವು ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ .ಉಪಾಧ್ಯಕ್ಷ ಸನಾಉಲ್ಲಾ .ಕಾಂತರಾಜ್, ಶಂಕರಪ್ಪ, ಪ್ರಭಾಕರ, ಖಜಾಂಚಿ ಶಿವಮೂರ್ತಿ, ಲೋಕೇಶ್‌, ಕುಮಾರಾಚಾರ್‌ , ಮಲ್ಲಿಕಾರ್ಜುನ ನಾಗರಾಜ್‌, ಶಿವುನಾಡಿಗ್‌ ಸೇರಿದಂತೆ ರೈತ ಸಂಘದ ಸದಸ್ಯರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ