ಪವಾಡ ಪುರುಷರ ಸಾಲಿನಲ್ಲಿ ಪರಪ್ಪಜ್ಜ ಮೇರು ಪರ್ವತ

KannadaprabhaNewsNetwork |  
Published : Mar 10, 2025, 12:15 AM IST
ಪೋಟೋ, 9ಎಚ್‌ಎಸ್‌ಡಿ3: ಶ್ರೀರಾಂಪುರದ  ಶ್ರೀ ಸದ್ಗುರು ಪರಪ್ಪ ಸ್ವಾಮಿ ಮಠದ ಅವರಣದಲ್ಲಿ ಭಾನುವಾರ ಬಾಗೂರು.ಆರ್.ನಾಗರಾಜಪ್ಪ ರವರ  ನೇಕಾರ ಸಂತ ಬೂದ್ಹಾಳು ಪರಪ್ಪಜ್ಜರ ಜೀವನ ಚಿತ್ರ ಕೃತಿಯನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಶ್ರೀರಾಂಪುರದ ಪರಪ್ಪಸ್ವಾಮಿ ಮಠದ ಅವರಣದಲ್ಲಿ ಬಾಗೂರು.ಆರ್.ನಾಗರಾಜಪ್ಪ ರಚನೆಯ ನೇಕಾರ ಸಂತ ಬೂದ್ಹಾಳು ಪರಪ್ಪಜ್ಜರ ಜೀವನ ಚಿತ್ರ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ:

ಬೂದಿಹಾಳು ಸಂಸ್ಥಾನದ ಸಾಂಸ್ಕೃತಿಕ ನೆಲೆಗಟ್ಟು ಪಾರಂಪರಿಕವಾದದ್ದು ಹಾಗೂ ಈ ನಾಡಿನ ಅವದೂತರ ಮತ್ತು ಪವಾಡ ಪುರುಷರ ಸಾಲಿನಲ್ಲಿ ಬೂದ್ಹಾಳು ಪರಪ್ಪಜ್ಜನವರು ಮೇರು ಪರ್ವತದಲ್ಲಿ ನಿಲ್ಲುತಾರೆ ಅವರ ಇತಿಹಾಸ ಅಗಾದವಾದದ್ದು ಎಂದು ಜಾನಪದ ಕಲಾವಿದ ಹಾಗೂ ನಿವೃತ್ತ ಜಂಟಿ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ತಿಳಿಸಿದರು.

ತಾಲೂಕಿನ ಶ್ರೀರಾಂಪುರದ ಸದ್ಗುರು ಪರಪ್ಪಸ್ವಾಮಿ ಮಠದ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶ್ರೀರಾಂಪುರ ಹೋಬಳಿ ಘಟಕ, ಪರಪ್ಪ ಸ್ವಾಮಿ ಮಠದ ಆಡಳಿತ ಮಂಡಳಿ ಹಾಗೂ ಶ್ರೀರಾಂಪುರ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಬಾಗೂರು.ಆರ್.ನಾಗರಾಜಪ್ಪರವರ ನೇಕಾರ ಸಂತ ಬೂದ್ಹಾಳು ಪರಪ್ಪಜ್ಜರ ಜೀವನ ಚಿತ್ರ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕೃತಿಯಲ್ಲಿ ಪರಪ್ಪ ಸ್ವಾಮಿಗಳ ಜೀವನ ಶೈಲಿ ಮತ್ತು ಪವಾಡಗಳ ತುಣುಕುಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದರು. ಕಾರ್ಯಕ್ರಮವನ್ನು ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಉದ್ಘಾಟಿಸಿದರು. ಚೌಳ ಹಿರಿಯೂರಿನ ಶ್ರೀಶೈಲ ಶಾಖಾ ಮಠದ ಚಂದ್ರಮೌಳಿ ಗುರೂಜೀ ಸಾನ್ನಿಧ್ಯವಹಿಸಿ ಪ್ರವಚನ ನೀಡಿದರು. ಹೋಬಳಿ ಘಟಕದ ಕಸಾಪ ಅಧ್ಯಕ್ಷ ಕಾಚಾಪುರ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಗೋಪಾಲಕಷ್ಣ ಕೃತಿಯ ಕುರಿತು ಸಂಕ್ಷಿಪ್ತ ವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಕಸಾಪ ಮಾಜಿ ಅಧ್ಯಕ್ಷ ಹೆಗ್ಗೆರರಂಗಪ್ಪ, ಮಲ್ಲಿಕಾರ್ಜುನ ಆರಾಧ್ಯ, ಸ್ತ್ರೀ ಸಂಪದ ಪತ್ರಿಕೆ ಸಂಪಾದಕಿ ಶೋಭಾ ಮುರುಳಿಕೃಷ್ಣ ಮಾತನಾಡಿದರು.

ಈ ಸಂದರ್ಭದಲ್ಲಿ ಮಠದ ಅಧ್ಯಕ್ಷ ದೇವಿಕರಿಯಪ್ಪ, ಮುಖಂಡರಾದ ಬಿ.ರಾಮುಸ್ವಾಮಿ, ಆರ್.ದಾಸಪ್ಪ, ಎಸ್.ಸಿ ರಮೇಶ್, ಸಾಹಿತಿ ಮತ್ತೊಡು ನಾಗರಾಜ್, ರಾಸು ತಿಮ್ಮಯ್ಯ, ಬೂದಾಳ್ ಶಿವಕುಮಾರ್, ಗೊಲ್ಲರಹಳ್ಳಿ ವರದರಾಜ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ