ಮಹಾನಗರದ 129 ಸಾಧಕರಿಗೆ ಧೀಮಂತ ಸನ್ಮಾನ

KannadaprabhaNewsNetwork |  
Published : Nov 01, 2025, 02:15 AM IST
ಡಾ.ರಾಜೇಶ್ವರಿ ಮಹೇಶ್ವರಯ್ಯ | Kannada Prabha

ಸಾರಾಂಶ

ಪ್ರಶಸ್ತಿಗೆ ಒಟ್ಟು 623 ಅರ್ಜಿ ಬಂದಿದ್ದು, ಈ ಬಾರಿ 70ನೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ 70 ಸಾಧಕರಿಗೆ ಸನ್ಮಾನ ನೀಡಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ತೀವ್ರ ಒತ್ತಡ ಹಾಗೂ ಪ್ರೋತ್ಸಾಹ ನೀಡಲು ಬರೋಬ್ಬರಿ 129 ಜನರಿಗೆ ಧೀಮಂತ ಸನ್ಮಾನಕ್ಕೆ ಹೆಸರು ಘೋಷಿಸಲಾಗಿದೆ.

ಧಾರವಾಡ:

ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ 23 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 129 ಸಾಧಕರಿಗೆ ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಧೀಮಂತ ಸನ್ಮಾನ ಮಾಡಲು ತೀರ್ಮಾನಿಸಿದೆ.

ಪೌರಕಾರ್ಮಿಕರ ವಿಭಾಗದಲ್ಲಿ ವಲಯ ಕಚೇರಿ 1ರ ಪವಿತ್ರಾ ಚಲವಾದಿ, ವಲಯ ಕಚೇರಿ 8ರ ದುರ್ಗಪ್ಪ ದೊಡಮನಿ, ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಹ.ವೆಂ. ಕಾಖಂಡಕಿ, ಶಶಿಧರ ತೋಡಕರ ಸೇರಿದಂತೆ ಒಂಬತ್ತು ಜನರಿಗೆ ನೀಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಬಸವರಾಜ ಪಟಾತ ಸೇರಿ ಐವರು, ವೈದ್ಯಕೀಯದಲ್ಲಿ 9, ರಂಗದಲ್ಲಿ ಡಾ. ಪ್ರಕಾಶ ಗರುಡ ಸೇರಿ ಇಬ್ಬರು, ನೃತ್ಯದಲ್ಲಿ ನಾಗರತ್ನ ಹಡಗಲಿ ಸೇರಿ ಮೂವರು, ಸಂಗೀತದಲ್ಲಿ ತಬಲಾ ವಾದಕ ಶ್ರೀಧರ ಮಾಂಡ್ರೆ ಸೇರಿ ನಾಲ್ಕು, ಚಿತ್ರಕಲೆಯಲ್ಲಿ ಗಣಪತಿ ಕಲಾವಿದ ಮಂಜುನಾಥ ಹಿರೇಮಠ ಸೇರಿ ನಾಲ್ವರು, ಜಾನಪದದಲ್ಲಿ ಮಾರ್ಕಂಡೇಶ್ವರ ಸೇರಿ ಇಬ್ಬರು, ಕೃಷಿಯಲ್ಲಿ ಇಬ್ಬರು, ಶಿಕ್ಷಣದಲ್ಲಿ ಡಾ. ಕೆ. ಗೋಪಿನಾಥ, ಮಹಾವೀರ ಉಪಾಧ್ಯೆ ಡಾ. ಸಂಗಮನಾಥ ಲೋಕಾಪುರ, ಈರಣ್ಣ ಪತ್ತಾರ ಸೇರಿ ಎಂಟು, ಕೈಗಾರಿಕೆಯಲ್ಲಿ ಮೂವರು, ಯೋಗದಲ್ಲಿ ನಾಲ್ಕು, ಪತ್ರಿಕೋದ್ಯಮದಲ್ಲಿ 14, ಛಾಯಾಗ್ರಹಣದಲ್ಲಿ ಶಿವಲಿಂಗ ಪಾಟೀಲ, ವಿಶೇಷ ಚೇತನರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶಕ್ತಿ ಪಾಟೀಲ ಸೇರಿ ಮೂವರು, ಸಂಘ ಸಂಸ್ಥೆಗಳ ಕ್ಷೇತ್ರದಲ್ಲಿ ನಾಲ್ಕು, ಸಂಶೋಧನೆಯಲ್ಲಿ ಡಾ. ಎಂ.ವೈ. ಸಾವಂತ ಸೇರಿ ಮೂವರು, ಸೇವಾಕ್ಷೇತ್ರದಲ್ಲಿ ಬ್ರಹ್ಮಕುಮಾರ ಜಯಂತಿ ಸೇರಿ ಏಳು, ಸಾಮಾಜಿಕ ಕ್ಷೇತ್ರದಲ್ಲಿ ಆರು, ವಿಶೇಷ ಸಾಧಕರು ಒಟ್ಟು 27, ಐವರು ಪ್ರತಿಭಾವಂತ ಮಕ್ಕಳು ಹಾಗೂ ಇಬ್ಬರು ಕನ್ನಡಪರ ಹೋರಾಟಗಾರರಿಗೆ ಈ ಬಾರಿ ಧೀಮಂತ ಪ್ರಶಸ್ತಿ ದೊರೆತಿದೆ.

ಈ ಪ್ರಶಸ್ತಿಗೆ ಒಟ್ಟು 623 ಅರ್ಜಿ ಬಂದಿದ್ದು, ಈ ಬಾರಿ 70ನೇ ರಾಜ್ಯೋತ್ಸವ ಹಿನ್ನೆಲೆಯಲ್ಲಿ 70 ಸಾಧಕರಿಗೆ ಸನ್ಮಾನ ನೀಡಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ತೀವ್ರ ಒತ್ತಡ ಹಾಗೂ ಪ್ರೋತ್ಸಾಹ ನೀಡಲು ಬರೋಬ್ಬರಿ 129 ಜನರಿಗೆ ಧೀಮಂತ ಸನ್ಮಾನಕ್ಕೆ ಹೆಸರು ಘೋಷಿಸಲಾಗಿದೆ. ನ. 1ರ ಶನಿವಾರ ಮಧ್ಯಾಹ್ನ 3ಕ್ಕೆ ಹುಬ್ಬಳ್ಳಿಯ ಇಂದಿರಾಗಾಜಿನ ಮನೆಯಲ್ಲಿ ಈ ಸನ್ಮಾನ ನಡೆಯಲಿದೆ.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!