ದಾಬಸ್‌ಪೇಟೆ: ನಾನು ಈಗಾಗಲೇ ಹಲವಾರು ಏಳುಬೀಳುಗಳನ್ನು ಕಂಡಿದ್ದೇನೆ. ಕಷ್ಟ ಬಂದಾಗ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಸಲಹೆ, ಸೂಚನೆ, ಆಶೀರ್ವಾದ ಪಡೆಯುತ್ತೇನೆ. ಮಠಗಳ ಬಗ್ಗೆ ನನಗೆ ಅಪಾರ ಗೌರವವಿದ್ದು, ಮುಂದೆಯೂ ಮಠಾಧೀಶರ ಸಂಪರ್ಕದಲ್ಲಿರುತ್ತೇನೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ಸಚಿವರು ಆಗಮಿಸಿಲ್ಲ:ವಿಶ್ವದ ಎಲ್ಲಾ ದೇಶಗಳು ಇಂದು ವಿಶ್ವ ಯೋಗ ದಿನಾಚರಣೆ ಆಚರಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಮಾತ್ರ ಆಚರಣೆ ಮಾಡುತ್ತಿಲ್ಲ. ತುಮಕೂರಿನಲ್ಲಿ ಯೋಗ ದಿನಾಚರಣೆಗೆ ರಾಜ್ಯ ಸಚಿವರು ಆಗಮಿಸಿಲ್ಲ, ಆರೋಗ್ಯ ಚೆನ್ನಾಗಿ ಇರುವವರು ಯೋಗದಿನಕ್ಕೆ ಬರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವಿಶ್ವ ಆರೋಗ್ಯಕ್ಕಾಗಿ ಯೋಗ ದಿನ ಜಾರಿಗೆ ತಂದಿದ್ದಾರೆ ಎಂದರು.
ಚರ್ಚಿಸಿ ನಿರ್ಧಾರ: ಇದೇ ಸಂದರ್ಭದಲ್ಲಿ ನಿಡವಂದ, ದಾಬಸ್‌ಪೇಟೆ ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ. ವಾಹನಗಳು, ಸಾರ್ವಜನಿಕರು ಓಡಾಡಲು ಅಂಡರ್ ಪಾಸ್ ಹಾಗೂ ಬ್ರೀಡ್ಜ್ ನಿರ್ಮಿಸಲು ಕ್ರಮ ವಹಿಸುತ್ತೇನೆ ಎಂದರು.ಧನಾತ್ಮಕವಾಗಿ ಸ್ಪಂದಿಸಿದ್ದಾರೆ: ವನಕಲ್ಲು ಮಠದ ಡಾ.ಶ್ರೀ. ಬಸವರಮಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸೋಂಪುರ ಹೋಬಳಿಯಲ್ಲಿ ನನೆಗುದಿಗೆ ಬಿದಿದ್ದ ರೈಲ್ವೆ ಹಾಗೂ ಜಲಶಕ್ತಿ ಸಂಬಂಧಿಸಿದ ಯೋಜನೆಗಳಿಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ದೊಡ್ಡ ಬೆಲೆ ಮತ್ತು ನಿಡವಂದ ರೈಲ್ವೆ ನಿಲ್ದಾಣ ಡಿ ಗ್ರೇಡ್ ನಿಂದ ಬಿ ಗ್ರೇಡ್ ಉನ್ನತ್ತೀಕರಣದ ರೈಲ್ವೆ ನಿಲ್ದಾಣ ಮಾಡಬೇಕು, ರೈಲ್ವೆ ಸೇತುವೆ, ಮೇಲ್ಸೇತುವೆ, ಕೆರೆಗಳ ನೀರು ತುಂಬಿಸುವ ಕಾರ್ಯಕ್ಕೆ ಮನವಿಗೆ ಕೇಂದ್ರ ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೇ, ಮಠಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ ಎಂದು ಹೇಳಿದರು.
2028ಕ್ಕೆ ಮುಖ್ಯಮಂತ್ರಿಯಾಗಲಿ:ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಕೆಳಹಂತದಿಂದ ಇದೀಗ ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣನವರು 2028ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದರು.
ಈ ವೇಳೆ ವನಕಲ್ಲು ಬೆಟ್ಟದ ದೇವಾಲಯ, ಮಠದ ವಿದ್ಯಾರ್ಥಿಗಳ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸನ್ಮಾನ ಸ್ವೀಕರಿಸಿ, ಸಿಹಿ ವಿತರಿಸಿದರು.ಈ ಸಂದರ್ಭದಲ್ಲಿ ನೆಲಮಂಗಲ ತಹಸೀಲ್ದಾರ್ ಅಮೃತ್ ಅತ್ರೇಸ್, ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪರಮೇಶ್, ಜಿಪಂ ಮಾಜಿ ಸದಸ್ಯ ನಂಜುಂಡಪ್ಪ, ತಾಪಂ ಮಾಜಿ ಸದಸ್ಯ ಮಾದೇನಹಳ್ಳಿ ಪ್ರಕಾಶ್, ಹಿರಿಯರಾದ ಮರಳಕುಂಟೆ ಗೋಪಾಲಪ್ಪ, ಗ್ರಾಪಂ ಸದಸ್ಯ ನಾಗರಾಜು, ತ್ಯಾಮಗೊಂಡ್ಲು ಆಂಜನಮೂರ್ತಿ, ಮುಖಂಡ ಬಿ.ಎಂ.ಶ್ರೀನಿವಾಸ್, ತುಮಕೂರು ಬಸವರಾಜು, ಮಠದ ಅಧ್ಯಕ್ಷರಾದ ಎಂ.ಚನ್ನಪ್ಪ, ಕಾರ್ಯದರ್ಶಿ ಗಂಗಯ್ಯ, ರಾಮಕೃಷ್ಣಯ್ಯ, ನಿಕಟ ಪೂರ್ವ ಕುಲ ಸಚಿವರು ಡಾ.ಕೆ.ಶಿವಚಿತ್ತಪ್ಪ, ಮಠದ ಆಡಳಿತಾಧಿಕಾರಿ ಕೃಷ್ಣ ಆಚಾರ್ಯ, ಯೋಗಾನಂದ್, ಟ್ರಸ್ಟ್ ಹನುಮಂತರಾಯಪ್ಪ, ಮತ್ತಿತರರಿದ್ದರು.
ಫೋಟೋ 6 :ಸೋಂಪುರ ಹೋಬಳಿಯ ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ವನಕಲ್ಲು ಮಠದ ಡಾ.ಶ್ರೀ.ಬಸವರಮಾನಂದ ಸ್ವಾಮೀಜಿ ಸನ್ಮಾನಿಸಿದರು.
ಪೋಟೋ 7 :ವನಕಲ್ಲು ಮಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ವನಕಲ್ಲು ಮಲ್ಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.