ಅಯೋಧ್ಯೆಯಿಂದ ಮರಳಿದ ಮುತ್ತಣ್ಣನಿಗೆ ಭವ್ಯ ಸ್ವಾಗತ

KannadaprabhaNewsNetwork | Published : Jan 29, 2024 1:33 AM

ಸಾರಾಂಶ

ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡು ಬಾಲರಾಮನ ದರ್ಶನ ಪಡೆದು ತವರಿಗೆ ವಾಪಸಾದ ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪುರ ಅವರಿಗೆ ಸ್ವಗ್ರಾಮ ರೋಣ ತಾಲೂಕಿನ ಕರಕಿಕಟ್ಟಿಯಲ್ಲಿ ಮೆರವಣಿಗೆ ಮಾಡಿ, ವಸ್ತ್ರ ಮಾಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಹೊಳೆಆಲೂರ: ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡು ಬಾಲರಾಮನ ದರ್ಶನ ಪಡೆದು ತವರಿಗೆ ವಾಪಸಾದ ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪುರ ಅವರಿಗೆ ಸ್ವಗ್ರಾಮ ರೋಣ ತಾಲೂಕಿನ ಕರಕಿಕಟ್ಟಿಯಲ್ಲಿ ಮೆರವಣಿಗೆ ಮಾಡಿ, ವಸ್ತ್ರ ಮಾಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮುತ್ತಣ್ಣ ಡಿ. 9ರಂದು ಅವರ ಗ್ರಾಮದಿಂದ ಅಯೋಧ್ಯೆಗೆ ಪಾದಯಾತ್ರೆ ತೆರಳಿದ್ದರು. ಜ. 22ರಂದು ಉದ್ಘಾಟನೆಗೊ ಮುನ್ನ ಅಯೋಧ್ಯೆ ತಲುಪಿದ್ದರು. ಅಯೋಧ್ಯೆಗೆ ಪಾದಯಾತ್ರೆ ಮಾಡಿ ಬಂದ ಮುತ್ತಣ್ಣ ಅವರಿಗೆ ಇಡೀ ಗ್ರಾಮವೇ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು, ಹಡಪದ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ವಸ್ತ್ರ ಸಹಿತ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.

ಗ್ರಾಪಂ ಸದಸ್ಯ ಸುರೇಶಗೌಡ ಗೌಡರ ಮಾತನಾಡಿ, ಸಣ್ಣ ಗ್ರಾಮದ ಹೆಸರು ಇಡೀ ದೇಶ ಮಟ್ಟದಲ್ಲಿ ಗುರುತು ಮೂಡುವಂತೆ ಮುತ್ತಣ್ಣ ಮಾಡಿದ್ದಾರೆ. ಅವರು ನಮ್ಮ ಗ್ರಾಮದಿಂದ ಸಾಕಷ್ಟು ಪಾದಯಾತ್ರೆ ಮಾಡಿದ್ದಾರೆ. ಆದರೆ ಇದು ನಮಗೆ ವಿಶೇಷ ಅನಿಸಿದೆ ಎಂದು ಹೇಳಿದರು.

ಮುತ್ತಣ್ಣ ಮಾತನಾಡಿ, ಅಯೋಧ್ಯೆ ಪಾದಯಾತ್ರೆ ನನ್ನ ಹೃದಯದಲ್ಲಿ ಉಳಿದಿದೆ. ದಾರಿಯುದ್ದಕ್ಕೂ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದೇನೆ ಎನ್ನುತ್ತಿದ್ದೆ, ಅಷ್ಟೇ ಎಲ್ಲ ಜನರು ನನ್ನ ಕಾಳಜಿ, ಊಟೋಪಚಾರ ಕೇಳಿ, ಊಟ ಮಾಡಿಸಿ ಕಳುಹಿಸುತ್ತಿದ್ದರು. ನನ್ನ ದೇಶದ ಜನರು ಹೃದಯವಂತರು. ಶ್ರೀರಾಮನ ದರ್ಶನ ಪಡೆದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

ಗ್ರಾಪಂ ಸದಸ್ಯ ಸುರೇಶಗೌಡ ಗೌಡರ, ಹನುಮಂತಗೌಡ ಗೌಡರ, ಈಶ್ವರಪ್ಪ ದೇಸಾಯಿ, ಕುಬೇರಗೌಡ ಗೌಡರ, ಸಿದ್ದಪ್ಪ ಗಾಣಿಗೇರ, ಮುತ್ತನಗೌಡ ಗೌಡರ, ಬಸನಗೌಡ ಗೌಡರ, ಈರಪ್ಪ ಉಳ್ಳಾಗಡ್ಡಿ, ಫಕೀರಗೌಡ ಗೌಡರ, ಸಿದ್ದನಗೌಡ ಗೌಡರ, ಬಸವರಾಜ ಕೋರಿ, ಶಿವಯೋಗಿ ಹಿರೇಮಠ, ಈರಯ್ಯ ಮಠದ, ಶಿವಬಸಪ್ಪ ಚಂದನ್ನವರ, ಫಕೀರಪ್ಪ ಬಣಕಾರ, ಸಂಗಪ್ಪ ಹಡಪದ, ಸೈನಿಕ ಶರಣಪ್ಪಗೌಡ ಗೌಡರ, ಮಾಜಿ ಸೈನಿಕ, ಹಡಪದ ಅಪ್ಪಣ್ಣ ಸಮಾಜ ಅಧ್ಯಕ್ಷ ಈರಪ್ಪ ಹಡಪದ, ಮಲ್ಲಪ್ಪ ಹಡಪದ, ಶಂಕ್ರಪ್ಪ ಹಡಪದ, ಬಸವರಾಜ ಹಡಪದ, ಸಂಗಪ್ಪ ಹಡಪದ, ಪ್ರಕಾಶ ಹಡಪದ, ನಿಂಗಪ್ಪ ಹಡಪದ, ಲಚ್ಚಪ್ಪ ಹಡಪದ, ಶಿವಪ್ಪ ಹಡಪದ, ಶರಣಪ್ಪ ಅಂಗಡಿ ಮುಂತಾದವರು ಇದ್ದರು.

Share this article