ಮಾ.27, 28ಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಬಜೆಟ್ ಮಂಡನೆ

KannadaprabhaNewsNetwork |  
Published : Mar 25, 2026, 04:00 AM ISTUpdated : Mar 25, 2026, 04:11 AM IST
GBA

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಬೆಂಗಳೂರಿನ ಪಂಚ ಪಾಲಿಕೆಗಳ ಚೊಚ್ಚಲ ಬಜೆಟ್ ಮಾ.27 ಮತ್ತು 28 ರಂದು ಮಂಡನೆಯಾಗುವ ನಿರೀಕ್ಷೆ ಇದೆ.ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಪ್ರತ್ಯೇಕವಾಗಿ ಬಜೆಟ್ ಮಂಡಿಸಲು ಸಿದ್ಧತೆ

 ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಬೆಂಗಳೂರಿನ ಪಂಚ ಪಾಲಿಕೆಗಳ ಚೊಚ್ಚಲ ಬಜೆಟ್ ಮಾ.27 ಮತ್ತು 28 ರಂದು ಮಂಡನೆಯಾಗುವ ನಿರೀಕ್ಷೆ ಇದೆ.ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಪ್ರತ್ಯೇಕವಾಗಿ ಬಜೆಟ್ ಮಂಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. 

 ಪಾಲಿಕೆಗಳ ಬಜೆಟ್ ಗಾತ್ರ ತಲಾ 4,000 ಕೋಟಿ ರು.ಯಿಂದ 4,200 ಕೋಟಿ ರು. ಆಸುಪಾಸು ಇರಲಿದೆ. ಐದು ಪಾಲಿಕೆಗಳ ಒಟ್ಟಾರೆ ಬಜೆಟ್ ಗಾತ್ರ 20,000 ಕೋಟಿ ರು. ದಾಟಲಿದೆ ಎಂದು ಹೇಳಲಾಗಿದೆ. ಜನಪ್ರತಿನಿಧಿಗಳು ಇಲ್ಲದ ಕಾರಣ ಪಾಲಿಕೆಗಳ ಆಯುಕ್ತರೇ ಬಜೆಟ್ ಮಂಡಿಸುತ್ತಾರೆ.

ಮೂಲಸೌಕರ್ಯಕ್ಕೆ ಆದ್ಯತೆ: 

ರಸ್ತೆಗಳ ಗುಂಡಿ ಮುಚ್ಚುವುದು, ರಾಜಕಾಲುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಹೊಸ ಫುಟ್‌ಪಾತ್, ಸ್ಕೈವಾಕ್ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ನಗರದ ಪ್ರಮುಖ ಸಮಸ್ಯೆಯಾದ ತ್ಯಾಜ್ಯ ವಿಲೇವಾರಿಗೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ ಎಂದು ಹೇಳಲಾಗಿದೆ.ಅಲ್ಲದೇ, ನಮ್ಮ ಕ್ಲಿನಿಕ್ ಮತ್ತು ಪಾಲಿಕೆ ಆಸ್ಪತ್ರೆಗಳ ಅಭಿವೃದ್ಧಿ, ಜಂಕ್ಷನ್‌ಗಳ ಸುಂದರೀಕರಣ, ಬೀದಿ ದೀಪಗಳ ಅಳವಡಿಕೆ, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡುವ ನಿರೀಕ್ಷೆ ಇದೆ.

ಇನ್ನು ಇಂದಿರಾ ಕ್ಯಾಂಟಿನ್‌ಗಳಲ್ಲಿ ಮೆನುವಿನಲ್ಲಿ ಸುಧಾರಣೆ ತರುವ ಉದ್ದೇಶವಿದ್ದು, ಹೊಸ ಘೋಷಣೆಗಳ ನಿರೀಕ್ಷೆ ಇದೆ.

ಮುನ್ಸಿಪಲ್ ಬಾಂಡ್ ಬಿಡುಗಡೆ:  

ಪಾಲಿಕೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಬಾರಿ ಹೊಸ ದಾರಿಗಳನ್ನು ಹುಡುಕುತ್ತಿವೆ. ರಾಜ್ಯ ಬಜೆಟ್‌ನಲ್ಲಿ ತಿಳಿಸಿರುವಂತೆ ಮುನ್ಸಿಪಲ್ ಬಾಂಡ್ ಮಾರಾಟದ ಮೂಲಕ ಪಾಲಿಕೆ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.

ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುನಿಸಿಪಲ್ ಬಾಂಡ್ ಬಿಡುಗಡೆ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಳೆದ ಆರು ತಿಂಗಳಲ್ಲಿ ನಿಗದಿತ ಗುರಿಯಷ್ಟು ತೆರಿಗೆ ಸಂಗ್ರಹಿಸಲು ಪಾಲಿಕೆಗಳು ವಿಫಲವಾಗಿವೆ. ಹೀಗಾಗಿ, ಆಸ್ತಿ ತೆರಿಗೆ, ಜಾಹೀರಾತು ಮತ್ತು ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಬಿಗಿ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ಬಜೆಟ್ ದಿನಾಂಕ:

ಮಾ.27ರಂದು ಪೂರ್ವ ನಗರ ಪಾಲಿಕೆ ಮತ್ತು ಕೇಂದ್ರ ನಗರ ಪಾಲಿಕೆಯ ಬಜೆಟ್ ಹಾಗೂ ಮಾ.28ರಂದು ಉತ್ತರ, ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ ಬಜೆಟ್ ಮಂಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸರ್ವರಲ್ಲಿಯೂ ಸಮಾನತೆ ಸಾರಿದ ದೇವರ ದಾಸಿಮಯ್ಯನವರು: ಶ್ರೀಶೈಲ ದಬಾಡಿ
ವಿಶ್ವಕರ್ಮರು ದೇಶದ ಪ್ರಾಚೀನ ಕುಶಲಕರ್ಮಿ ಸಮಾಜ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ