ಹಸಿರು ಕ್ರಾಂತಿ ಹರಿಕಾರ ಡಾ.ಜಗಜೀವನ ರಾಂ: ಎಸಿ

KannadaprabhaNewsNetwork |  
Published : Apr 06, 2024, 12:47 AM IST
ಹೊನ್ನಾಳಿ ಫೋಟೋ 5ಎಚ್.ಎಲ್.ಐ2 ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಾಬೂ ಜಗಜೀವನ ರಾಂ ಅವರ 177ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಮಹೋನ್ನತ ಕನಸು ಹೊತ್ತು, ಹಸಿರು ಕ್ರಾಂತಿಗೆ ಮುನ್ನುಡಿ ಹಾಡಿದ ಧೀಮತ ನಾಯಕ ಡಾ.ಬಾಬು ಜಗಜೀವನ ರಾಂ ಎಂದು ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಮಹೋನ್ನತ ಕನಸು ಹೊತ್ತು, ಹಸಿರು ಕ್ರಾಂತಿಗೆ ಮುನ್ನುಡಿ ಹಾಡಿದ ಧೀಮತ ನಾಯಕ ಡಾ.ಬಾಬು ಜಗಜೀವನ ರಾಂ ಎಂದು ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನ ರಾಂ ಅವರ 117ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ, ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ದೇಶವು ತೀವ್ರವಾದ ಆಹಾರ ಕೊರತೆ ಅನುಭವಿಸುತ್ತಿತ್ತು. ಭಾರತ ಪ್ರಗತಿಯಲ್ಲಿ ನಮ್ಮ ಪ್ರಗತಿಯಿದೆ ಎಂಬ ಸಿದ್ಧಾಂತ ಹೊಂದಿದ್ದ ಜಗಜೀವನ ರಾಂ ಅವರು, ಕೃಷಿ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸುವಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿದ ಮಹಾನಾಯಕ ಎಂದು ಹೇಳಿದರು.

ತಹಸೀಲ್ದಾರ್ ಪುರಂದರ ಹೆಗಡೆ ಮಾತನಾಡಿ, ಜವಾಹರ ಲಾಲ್‌ ನೆಹರು ಕಾಲದಲ್ಲಿ ಉಪಪ್ರಧಾನಿ ಆಗಿದ್ದ ಜಗಜೀವನ ರಾಂ ಅಂದಿನ ದಿನಗಳಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ಮಹಾನ್ ನಾಯಕ ಎನಿಸಿದ್ದರು. ದೇಶದ ಅಭಿವೃದ್ಧಿಯಲ್ಲಿ ನಮ್ಮ ಅಭಿವೃದ್ಧಿ ಅಡಗಿದೆ ಎಂದು ನಂಬಿದ್ದರು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಉಮಾ, ಪಶು ಸಂಗೋಪನಾ ಇಲಾಖೆಯ ಡಾ. ವಿಶ್ವನಟೇಶ್, ಉಪ ತಹಸೀಲ್ದಾರ್ ಚಂದ್ರು, ಸಮಾಜ ಕಲ್ಯಾಣಾಧಿಕಾರಿ ಕಚೇರಿ ಅಧೀಕ್ಷಕಿ ಉಮಾದೇವಿ, ಹಾಸ್ಟೆಲ್ ಮೇಲ್ವಿಚಾರಕ ಸತೀಶ್‌, ಎಫ್.ಡಿ.ಎ. ಮಂಜುನಾಥ, ಜಯಶೀಲ, ರಾಧ, ಮಂಜುಳು, ದಲಿತ ಮುಖಂಡರಾದ ಜಿ.ಎಚ್. ತಮ್ಮಣ್ಣ, ಮಂಜುನಾಥ್, ಮಾರಿಕೊಪ್ಪದ ಮಂಜಪ್ಪ ಮುಂತಾದವರು ಇದ್ದರು.

- - - -5ಎಚ್.ಎಲ್.ಐ2:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಾ. ಬಾಬು ಜಗಜೀವನ ರಾಂ ಅವರ 177ನೇ ಜಯಂತಿ ಆಚರಿಸಲಾಯಿತು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ