)
- 2 ವರ್ಷಗಳ ಹಿಂದೆ ಕೋಮುಗಳ ಮಧ್ಯೆ ನಡೆದಿತ್ತು ಗಲಾಟೆ
- ಕಳೆದ ಬಾರಿ ಕೈಗೆ ಕಪ್ಪುಪಟ್ಟಿ ಧರಿಸಿ, ಮೌನ ಮೆರವಣಿಗೆ ನಡೆಸಿದ್ದ ಗಣೇಶ ಸಂಘಟಕರು
- ವೆಂಕಟೇಶ್ವರ ದೇವಸ್ಥಾನ, ಅರಳಿಮರ ವೃತ್ತದ ಮೂಲಕವೇ ಮೆರವಣಿಗೆ ನಡೆಸಲು ಅವಕಾಶ- ಗಲಾಟೆ ಹಿನ್ನೆಲೆ ಸದರಿ ಮಾರ್ಗದಲ್ಲಿ ಮೆರವಣಿಗೆ ನಿರಾಕರಿಸಿದ್ದರಿಂದ ಗಣೇಶ ವಿಸರ್ಜನೆ ಪೂಜಿಸಲಾಗುತ್ತಿತ್ತು
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಟ್ಟಿಕಲ್ ಪ್ರದೇಶದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ 2 ವರ್ಷಗಳ ಹಿಂದೆ ವೆಂಕಟೇಶ್ವರ ದೇವಸ್ಥಾನದ ಅರಳಿಮರ ವೃತ್ತದ ಮಾರ್ಗವಾಗಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ 2 ಕೋಮುಗಳ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಗಣೇಶೋತ್ಸವ ಸಂಘಟಕರು ಕಳೆದ ಬಾರಿ ಕೈಗೆ ಕಪ್ಪುಪಟ್ಟಿ ಧರಿಸಿ, ಮೌನ ಮೆರವಣಿಗೆ ನಡೆಸುವ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದರು.
ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಸುತ್ತಮುತ್ತಲಿನ ಪ್ರದೇಶಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕು ಎಂದು ಮಟ್ಟಿಕಲ್ ಯುವಕರು ಮನವಿ ಮಾಡಿದ್ದಾರೆ.