ಅಥಣಿ ಪಟ್ಟಣದ ಹಸಿರೀಕರಣ ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : Jul 18, 2025, 12:45 AM IST
ಅಥಣಿ ಪಟ್ಟಣದ ಸ್ವಾಮಿ ಬಡಾವಣೆಯಲ್ಲಿ ಮಾತೃವನದಲ್ಲಿ ಶಾಸಕ ಲಕ್ಷ್ಮಣ ಸವದಿ ತಾಯಿ ಹೆಸರಿನಲ್ಲಿ ಗಿಡವನ್ನು ನೆಟ್ಟು ಸಸಿಗೆ ನೀರು ಎರೆಯುವ ಮೂಲಕ ಉದ್ಯಾನವನವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಪಟ್ಟಣದ ನೈರ್ಮಲ್ಯ ಮತ್ತು ಸೌಂದರ್ಯೀಕರಣದ ಜೊತೆಗೆ ಜನರಿಗೆ ಶುದ್ಧವಾದ ಹವಾಮಾನ, ಕಡಿಮೆ ತಾಪಮಾನ ಮಾಡುವ ಉದ್ದೇಶದಿಂದ ಗಿಡಮರಗಳನ್ನು ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಆಡಳಿತ, ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ನೈರ್ಮಲ್ಯ ಮತ್ತು ಸೌಂದರ್ಯೀಕರಣದ ಜೊತೆಗೆ ಜನರಿಗೆ ಶುದ್ಧವಾದ ಹವಾಮಾನ, ಕಡಿಮೆ ತಾಪಮಾನ ಮಾಡುವ ಉದ್ದೇಶದಿಂದ ಗಿಡಮರಗಳನ್ನು ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಆಡಳಿತ, ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಮನವಿ ಮಾಡಿದರು.

ಪಟ್ಟಣದ ಸ್ವಾಮಿ ಬಡಾವಣೆಯ ಮಾತೃವನಕ್ಕೆ ನಾಮಕರಣ ಮಾಡಿ ತಮ್ಮ ತಾಯಿ ಹೆಸರಿನಲ್ಲಿ ಗಿಡವನ್ನು ನೆಟ್ಟು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ತಾಪಮಾನವನ್ನು ತಗ್ಗಿಸಲು ಮತ್ತು ನಮ್ಮೆಲ್ಲರಿಗೆ ಶುದ್ಧವಾದ ಆಕ್ಸಿಜನ್ ಪಡೆದುಕೊಳ್ಳಲು ಗಿಡಮರಗಳನ್ನು ಬೆಳೆಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪಟ್ಟಣದ ಎಲ್ಲ ರಸ್ತೆಗಳಲ್ಲಿ, ಉದ್ಯಾನವನ, ವಸತಿ ಶಾಲೆ ಮತ್ತು ಶಾಲಾ ಆವರಣಗಳಲ್ಲಿ ಗಿಡ ಮರಗಳನ್ನು ಬಳಸಲು ಸಂಕಲ್ಪ ಹೊಂದಲಾಗಿದೆ ಎಂದರು.ಪುರಸಭಾ ಸದಸ್ಯ ರಾಜಶೇಖರ ಗುಡೋಡಗಿ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಗಿಡ-ಮರಗಳನ್ನು ಬೆಳೆಸುವ ಸಂಕಲ್ಪ ಹೊಂದಲಗಿದ್ದು, ಸ್ವಾಮಿ ಬಡಾವಣೆಯ ಈ ಉದ್ಯಾನವನಕ್ಕೆ ಮಾತೃವನ ಎಂಬ ನಾಮಕರಣ ಮಾಡಿ ಪ್ರತಿಯೊಬ್ಬರು ತಾಯಿ ಹೆಸರಿನಲ್ಲಿ ಗಿಡವನ್ನು ನೆಟ್ಟು ಅವುಗಳನ್ನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಜನರಿಗೆ ಸುಂದರ ವಾತಾವರಣ ನೋಡಲು ಸಿಗುವಂತೆ ಬಿಸಿಲಿನ ತಾಪಮಾನ ಕಡಿಮೆ ಮಾಡಿ ಪರಿಸರ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಈ ವೇಳೆ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗೌರಾಣಿ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಡಿವೈಎಸ್ಪಿ ಪ್ರಶಾಂತ ಮುನ್ನಳ್ಳಿ, ನಿವೃತ್ತ ಪ್ರಾಚಾರ್ಯ ಅಣ್ಣಾಸಾಹೇಬ ಅಡಹಳ್ಳಿ, ಮಲ್ಲಿಕಾರ್ಜುನ ಬುಠಾಳಿ, ಮಲ್ಲು ಹುದ್ದಾರ, ಡಾ.ರಾಮ ಕುಲಕರ್ಣಿ, ಶಿವು ತೆಲಸಂಗ, ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ, ಎಸ್.ಎಸ್.ಪಾಟೀಲ, ದೀಪಕ ತಿಕಾರಿ, ಪ್ರವೀಣ್ ಅವಟಿಮಠ, ರಾಜು ಡಾಲಿ, ನರಸು ಬಡಕಂಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗಿಡಮರಗಳನ್ನು ದತ್ತು ನೀಡುವ ಮೂಲಕ ಅವುಗಳ ಬೆಳವಣಿಗೆಗೆ ಆದ್ಯತೆ ನೀಡಲಾಗಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಸಿರೀಕರಣ ಮಾಡಲು ಪುರಸಭೆ ಆಡಳಿತ ಮುಂದಾಗಬೇಕು. ಬರುವ 3 ವರ್ಷಗಳಲ್ಲಿ ಅಥಣಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಬೆಳೆಸುವ ಸಂಕಲ್ಪ ಹೊಂದಲಾಗಿದೆ.

-ಲಕ್ಷ್ಮಣ ಸವದಿ, ಶಾಸಕರು.

ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡುವ ಸಂಕಲ್ಪ ಹೊಂದಿದ್ದೇವೆ. ಶಾಸಕರ ಮಾರ್ಗದರ್ಶನದಂತೆ ಅಥಣಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ಪ್ರಗತಿ ಹಂತದಲ್ಲಿದೆ. ಪ್ರೌಢಶಾಲಾ ಹಂತದಲ್ಲಿ ಶಾಲಾ ಮಕ್ಕಳಿಗೆ ಸಸಿಗಳನ್ನು ಬೆಳೆಸಲು ದತ್ತು ನೀಡಲಾಗುತ್ತಿದೆ. ಬರುವ 3 ವರ್ಷಗಳಲ್ಲಿ ಅಥಣಿ ಪಟ್ಟಣವನ್ನ ಗ್ರೀನ್ ಸಿಟಿ ಪಟ್ಟಣವನ್ನಾಗಿ ಪರಿವರ್ತಿಸಲಾಗುವುದು.

-ಪ್ರಶಾಂತ ಗೌರಾಣಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಅಥಣಿ.

PREV

Latest Stories

ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ
ಮಳೆಯ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು: ಪರಿಶೀಲನೆ