ಗೃಹ ಜ್ಯೋತಿ ಯೋಜನೆ : 119.14 ಕೋಟಿ ರು. ಸಂದಾಯ: ಶಿವಾನಂದಸ್ವಾಮಿ

KannadaprabhaNewsNetwork |  
Published : Jul 19, 2024, 12:51 AM IST
ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಕುರಿತು ಮೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ನಗರದ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಜತೆ ಗೃಹ ಜ್ಯೋತಿ ಗ್ಯಾರಂಟಿ ಕುರಿತು ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ನಗರದ ಮೆಸ್ಕಾಂ ಕಚೇರಿಯಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಕುರಿತು ಮೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 3.52 ಲಕ್ಷ ಮೀಟರ್‌ಗಳ ಪೈಕಿ 2.98 ಲಕ್ಷ ಮೀಟರ್ ಗಳು ಯೋಜನೆಯಡಿ ನೋಂದಣಿಯಾಗಿವೆ. 1.92 ಲಕ್ಷ ಮೀಟರ್‌ಗಳಿಗೆ ಯಾವುದೇ ಶುಲ್ಕ ಭರಿಸದೇ ಗೃಹ ಜ್ಯೋತಿ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ಕಳೆದ ಆಗಸ್ಟ್‌ನಿಂದ ಪ್ರಸ್ತುತ ಜೂನ್ ಮಾಹೆವರೆಗೆ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಕಡೂರು, ತರೀಕೆರೆ, ಅಜ್ಜಂಪುರ, ಕೊಪ್ಪ, ಶೃಂಗೇರಿ, ನ.ರಾ.ಪುರ ತಾಲೂಕುಗಳಿಗೆ ರಾಜ್ಯ ಸರ್ಕಾರ 119.14 ಕೋಟಿ ರು. ವಿದ್ಯುತ್ ಶುಲ್ಕ ಭರಿಸುವ ಜೊತೆಗೆ ಜನಸಾಮಾನ್ಯರ ಬದುಕಿಗೆ ಆಶಾದೀಪವಾಗಿ ನಿಂತಿದೆ ಎಂದರು.

ಒಂದು ಕುಟುಂಬದಲ್ಲಿ ಕನಿಷ್ಟ 200 ಯುನಿಟ್ ವಿದ್ಯುತ್ ಬಳಸುವ ಮೀಟರ್‌ ಶುಲ್ಕರಹಿತ ಸೇವೆ ಒದಗಿಸಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಗೃಹ ಜ್ಯೋತಿ ಯೋಜನೆ ಅನ್ವಯವಾಗಲಿದೆ. ಆಧುನಿಕ ಯುಗದಲ್ಲಿ ಕಂಪ್ಯೂಟರ್ ಸೇರಿ ದಂತೆ ಮತ್ತಿತರ ಕೆಲಸಗಳಿಗೆ ವಿದ್ಯುತ್ ಅನಿವಾರ್ಯ ಹಿನ್ನೆಲೆಯಲ್ಲಿ ಸೌಲಭ್ಯ ವಿಸ್ತರಿಸಲಿದೆ ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸೌಲಭ್ಯ ಲಭ್ಯವಿರುತ್ತದೆ. ತದ ನಂತರ ಮತ್ತೊಂದು ಮನೆ ಬಾಡಿಗೆಗೆ ತೆರಳಿದರೆ ಸೌಲಭ್ಯ ಲಭಿಸುವುದೇ ಎಂಬ ಸಂಶಯವಿರುತ್ತದೆ. ಹಳೇ ಮನೆ ಸ್ಥಳಾಂತರಿಸುವ ಬಗ್ಗೆ ಸೇವಾಸಿಂಧು ಅಥವಾ ಕಚೇರಿ ತೆರಳಿ ಡಿಲಿಂಕ್ ಮಾಡಿ, ಹೊಸ ಮನೆ ಮೀಟರ್ ಸಂಖ್ಯೆ ಹಾಗೂ ಆಧಾರ್ ಜೋಡಿಸಿದರೆ ಸೌಲಭ್ಯ ಪಡೆಯ ಬಹುದು ಎಂದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಆಶಯದಂತೆ ಸರ್ವ ಜನರಿಗೂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ಯಾರಂಟಿ ಪ್ರಾಧಿಕಾರ ಮೆಸ್ಕಾಂ ಅಧಿಕಾರಿಗಳ ಜೊತೆಗೂಡಿ ಚರ್ಚಿಸಿ ಸೌಲಭ್ಯ ತಲುಪಿರುವ ಮಾಹಿತಿ ಸ್ವವಿವರವಾಗಿ ಬಹಿರಂಗ ಪಡಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಮೆಸ್ಕಾಂ ಅಧಿಕಾರಿ ಲೋಕೇಶ್ ಮಾತನಾಡಿ, ಗೃಹ ಜ್ಯೋತಿ ಬಳಕೆದಾರರ ಪೈಕಿ ಶೂನ್ಯ ಶುಲ್ಕದಡಿ 1.92 ಲಕ್ಷ ಮೀಟರ್‌ಗಳಿಗೆ 66.98 ಕೋಟಿ ರು. ನೀಡಿದೆ. ನಿಗಧಿತ ಯ್ಯೂನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸಿಕೊಂಡು 1.6 ಲಕ್ಷ ಮೀಟರ್‌ ಗಳಿಗೆ ಸಬ್ಸಿಡಿ ನೀಡಿದ್ದು, ಒಟ್ಟಾರೆ 2.98 ಲಕ್ಷ ಮೀಟರ್‌ಗಳಿಗೆ 119.14 ಕೋಟಿ ರು. ಹಣ ಸಂದಾಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಚಂದ್ರಮೌಳಿ, ಹೇಮಾವತಿ, ಸದಸ್ಯರಾದ ಬಸವರಾಜು, ತಾಲೂಕು ಅಧ್ಯಕ್ಷ ಮಲ್ಲೇಶಸ್ವಾಮಿ, ಸದಸ್ಯರಾದ ಕೆಂಪನಹಳ್ಳಿ ಪುನೀತ್, ಅನ್ಸರ್ ಆಲಿ, ಮೆಸ್ಕಾಂ ಅಧಿಕಾರಿಗಳಾದ ಎಂ.ಎಸ್.ನಂದೀಶ್, ಎಚ್.ಅನುಪಮ, ನಾಗಾರ್ಜುನ, ನಿರಂಜನ್, ಪ್ರದೀಪ್, ಮಾರುತಿ ಉಪಸ್ಥಿತರಿದ್ದರು.

18 ಕೆಸಿಕೆಎಂ 3ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಕುರಿತು ಮೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!