ಅಯೋಧ್ಯೆಯಲ್ಲಿ ಕನ್ಯಾಡಿ ಶ್ರೀರಾಮಕ್ಷೇತ್ರದ ಶಾಖಾಮಠದ ಭೂಮಿಪೂಜೆ

KannadaprabhaNewsNetwork | Published : May 20, 2025 1:26 AM
ಕ್ಷೇತ್ರದ ನಿರ್ಮಾತೃ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ 9 ಕಡೆ ಶಾಖಾ ಮಠಗಳ ನಿರ್ಮಾಣ ನಡೆಯುತ್ತಿದೆ
Follow Us

ಭಟ್ಕಳ; ಅಯೋಧ್ಯೆಯಲ್ಲಿ ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ನೂತನ ಶಾಖಾಮಠದ ಭೂಮಿಪೂಜೆ ನೆರವೇರಿತು.

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರ ಸಮ್ಮುಖದಲ್ಲಿ ರಾಜ್ಯದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್. ವೈದ್ಯ ಮುಂತಾದವರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉತ್ತರ ಭಾರತ ಜುನಾ ಆಖಾಡದ ಆಚಾರ್ಯ ಮಹಾಮಂಡಲೇಶ್ವರ ಅವದೇಶಾನಂದ ಗಿರಿಜೀ ಮಹಾರಾಜ್, ಮಹಾಂತ ವಿದ್ಯಾನಂದ ಸರಸ್ವತಿ ಜೀ ಮಹಾರಾಜ ಶ್ರೀ, ರಾಹೋಪಾಲಿ ಅಯೋಧ್ಯೆಯ ಮಹಾಂತ ಡಾ. ಸ್ವಾಮಿ ಭರತ್ ದಾಸ್ ಜೀ ಮಹಾರಾಜ್ ಶ್ರೀ, ಹರಿದ್ವಾರದ ಜುನಾ ಅಖಾಡದ ಮಹಾಂತ ದೇವಾನಂದ ಸರಸ್ವತಿಜೀ ಮಹಾರಾಜ ಶ್ರೀ, ಅಯೋಧ್ಯೆ ದಿಗಂಬರ ಅಖಾಡದ ಮಹಾಂತ ಸುರೇಶ್ ದಾಸ್ ಜೀ ಮಹಾರಾಜ್ ಶ್ರೀ, ಅಯೋಧ್ಯೆ ಚೋಟಿ ಚಾವಣಿಯ ಮಹಾಂತ ಕಮಲನಯನ್ ದಾಸ್ ಜೀ ಮಹಾರಾಜ್, ಬಡಾಭಕ್ತಮಹಲ್ ಅಯೋಧ್ಯಾ ಧಾಮ್‌ನ ಮಹಾಂತ ಅವಧೇಶ್ ದಾಸ್ ಜೀ ಮಹಾರಾಜ್ ಶ್ರೀ, ಅಯೋಧ್ಯಾ ಧಾಮ ರಾಮವಲ್ಲಭ ಕುಂಜದ ಮಹಾಂತ ರಾಜಕುಮಾರ್ ದಾಸ್ ಜೀ ಮಹಾರಾಜ್ ಶ್ರೀ, ಹನುಮಾನ್ ಗಡಿಯ ಮಹಾಂತ ಸಂಜಯ್ ದಾಸ್ ಜೀ ಮಹಾರಾಜ್ ಶ್ರೀ ಇತರರಿದ್ದರು.

ಶಾಸಕರಾದ ಭೀಮಣ್ಣ ನಾಯ್ಕ, ಹರೀಶ್ ಪೂಂಜ, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಅಯೋಧ್ಯೆ ನಗರ ಶಾಸಕ ವೇದ ಪ್ರಕಾಶ್ ಗುಪ್ತ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸೇರಿದಂತೆ ರಾಜ್ಯದಿಂದ ಹಲವು ಭಕ್ತರು ಭಾಗವಹಿಸಿದ್ದರು.

ಕ್ಷೇತ್ರದ ನಿರ್ಮಾತೃ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ 9 ಕಡೆ ಶಾಖಾ ಮಠಗಳ ನಿರ್ಮಾಣ ನಡೆಯುತ್ತಿದೆ. ಈಗಾಗಲೇ ಉಡುಪಿ, ಹೊನ್ನಾವರ, ಭಟ್ಕಳ, ಕರಿಕಲ್, ದೇವಭೂಮಿ ಹರಿದ್ವಾರದಲ್ಲಿ ಶಾಖಾ ಮಠ ಹೊಂದಲಾಗಿದೆ. ಇದೀಗ ಅಯೋಧ್ಯೆಯಲ್ಲಿ ನೂತನ ಶಾಖಾಮಠಕ್ಕೆ ಭೂಮಿಪೂಜೆ ನೆರವೇರಿದೆ.

೩೫ ಸಾವಿರ ಚದರ ಅಡಿಯ ೪ ಮಹಡಿಯ ಕಟ್ಟಡದಲ್ಲಿ ರಾಮ ಮಂದಿರ, ೭೦೦ ಜನರಿಗೆ ಬೇಕಾಗುವ ಧ್ಯಾನ ಮಂದಿರ, ೪೦ ಕೊಠಡಿಯನ್ನು ಹೊಂದಿರುವ ಮಠ ನಿರ್ಮಾಣವಾಗಲಿದೆ.