ಕನ್ನಡಪ್ರಭ ವಾರ್ತೆ ಹಾಸನ
ತರಬೇತಿ ಕಾರ್ಯಕ್ರಮವನ್ನು ಸಾಮಾಜಿಕ ಅಭಿವೃದ್ಧಿ ತಜ್ಞರಾದ ಪ್ರವೀಣ್, ಸಹಾಯಕ ಕೃಷಿ ನಿರ್ದೇಶಕರಾದ ಪ್ರಸನ್ನ, ಜಿಲ್ಲಾ ನೋಡಲ್ ಅಧಿಕಾರಿಗಳಾದ ಸುಂದರರಾಜು, ನೆಟಾಫಿಮ್ ಕಂಪನಿಯ ಬೇಸಾಯ ತಜ್ಞರಾದ ಅಂಜಿನಪ್ಪ ಹಾಗೂ ರೈತರು ಸೇರಿ ಉದ್ಘಾಟಿಸಿದರು. ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದಿಂದ ಆಗಮಿಸಿದ ಪ್ರವೀಣ್‌ರವರು ಅಟಲ್ ಭೂ ಜಲ ಯೋಜನೆಯ ಮಹತ್ವ, ಧ್ಯೇಯೋದ್ದೇಶಗಳು ಹಾಗೂ ಜಲ ಭದ್ರತಾ ಯೋಜನೆ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಂಜಿನಪ್ಪರವರು ಹನಿ ನೀರಾವರಿ ಮತ್ತು ಸೂಕ್ಷ್ಮ ನೀರಾವರಿ ಪದ್ದತಿಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಗಮಿಸಿದ್ದ ಪ್ರಸನ್ನರವರು ಮಣ್ಣು ಪರೀಕ್ಷೆಯ ಮಹತ್ವ ಮತ್ತು ಮಣ್ಣು ಮಾದರಿ ಸಂಗ್ರಹಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ತಜ್ಞರು, ಸಿಬ್ಬಂದಿ, ಡಿ.ಐ.ಪಿ., ಸಿಬ್ಬಂದಿ ಹಾಜರಿದ್ದರು.