ಬಿಸಿಲಿನ ತಾಪ ಕಡಿಮೆ ಮಾಡಲು ಗಿಡ,ಮರ ಬೆಳೆಸಿ

KannadaprabhaNewsNetwork |  
Published : Feb 22, 2024, 01:52 AM IST
ಬಿಸಿಲಿನ ತಾಪವನ್ನು ಕಡಿಮೆಮಾಡಲು  ಗಿಡ,ಮರಗಳನ್ನು ಬೆಳೆಸಿ  -ಎಚ್.ಜಿ.ಕುಮಾರ ಸ್ವಾಮಿ | Kannada Prabha

ಸಾರಾಂಶ

ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಗಿಡ, ಮರಗಳನ್ನು ರಕ್ಷಿಸಿ ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆಯ ಅಧ್ಯಕ್ಷ ಎಚ್.ಜಿ.ಕುಮಾರ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಬಿಸಿಲಿನ ತಾಪವನ್ನು ಕಡಿಮೆ ಮಾಡಲು ಗಿಡ, ಮರಗಳನ್ನು ರಕ್ಷಿಸಿ ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆಯ ಅಧ್ಯಕ್ಷ ಎಚ್.ಜಿ.ಕುಮಾರ ಸ್ವಾಮಿ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದ ಮುಖ್ಯ ರಸ್ತೆಯಲ್ಲಿ ನೆಡಲಾಗಿರುವ ಸಾಲು ಗಿಡಗಳಿಗೆ ನೀರು ಹಾಕುವ ಮೂಲಕ ಮಾತನಾಡಿದರು. ಪರಿಸರ ಪ್ರೇಮಿ ಹಾಗೂ ಸಾಲು ಮರದ ಸಿ.ಎಂ.ವೆಂಕಟೇಶ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಸಾಲು ಗಿಡಗಳಿಗೆ ನೀರು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬರು ತಮ್ಮಗಳ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮತ್ತು ಜಯಂತಿ ಕಾರ್ಯಕ್ರಮಗಳ ಅಂಗವಾಗಿ ಗಿಡಗಳನ್ನು ಪೋಷಿಸುವ ಕಾರ್ಯಕ್ಕೆ ಮುಂದಾಗಬೇಕು, ನೀವು ಬೆಳೆಸಿದ ಗಿಡ,ಮರ ನಿಮಗೆ ತಾಪಮಾನವನ್ನು ಕಡಿಮೆ ಮಾಡಿ ತಂಪನ್ನು ನೀಡುತ್ತದೆ ಎಂದು ಹೇಳಿದರು.

ಮುಖ್ಯ ಯೋಗ ಶಿಕ್ಷಕ ನಿಜಗುಣನಾಗೇಂದ್ರ ಮಾತನಾಡಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಿ.ಎಂ. ವೆಂಕಟೇಶ್ ಅವಿರತ ಶ್ರಮದಿಂದ ಚಾಮರಾಜನಗರ ಜಿಲ್ಲಾಧ್ಯಂತ ಸಾಲು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವರೊಂದಿಗೆ ಎಲ್ಲರೂ ಕೈ ಜೋಡಿಸಿದರೆ ಮುಂದೊಂದು ದಿನ ಚಾಮರಾಜನಗರ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿ ಪರಿರ್ವತಿಸಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಜಯಲಕ್ಷ್ಮಿ, ಲೋಕೇಶ್, ಮಹದೇವು, ರೇಣುಕ, ಶೋಭ, ಸುಕನ್ಯ, ಜಯರತ್ನ, ಶುಭ, ಕೋಕಿಲ, ಪರಿಮಳ, ಹೇಮ, ಸರಸುಮಣಿ, ದ್ರಾಕ್ಷಾಯಣಿ, ಉಮಾಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ