ವಿಜಯಪುರ: ರೇಷ್ಮೆ ಬೆಳೆಗಾರರು, ಗುಣಮಟ್ಟದ ರೇಷ್ಮೆನೂಲು ಉತ್ಪಾದಿಸಬೇಕಾದರೆ, ಗುಣಮಟ್ಟದ ಸೊಪ್ಪು ಬೆಳೆಯುವುದು ಅಗತ್ಯ, ಸುಕೃಷಿ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮಲ್ಭೆರಿ ಕಿಟ್ ಅನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಜಿಕೆವಿಕೆ ಬೆಂಗಳೂರು ರೇಷ್ಮೆ ಕೃಷಿ ಮುಖ್ಯಸ್ಥ ಡಾ.ಕೆ.ಜಿ ಭಾನುಪ್ರಕಾಶ್ ಹೇಳಿದರು.
ಜಿಕೆವಿಕೆ ಬೆಂಗಳೂರು ರೇಷ್ಮೆ ಕೃಷಿ ಮುಖ್ಯಸ್ಥೆ ಡಾ.ವಿನೋದಾ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಘನತಾಜ್ಯಗಳನ್ನು ಸಂಪೂರ್ಣಗಿ ಡಿ.ಕಾಂಪೋಸ್ಟ್ ಮಾಡಿ ಉಪಯೋಗಿಸಬೇಕು. ದೇಸಿ ಹಸುಗಳ ಗಂಜಳ ಮತ್ತು ಸಗಣಿ ಬಳಸಿಕೊಂಡು ರೈತರು ಸಾವಯವ ಕೃಷಿ ಮಾಡಿದರೆ, ಕೀಟ ನಾಶಕಗಳ ಬಳಕೆ ಕಡಿಮೆ ಮಾಡಬೇಕು ಎಂದರು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಮಾತನಾಡಿ, ಕೇಂದ್ರ ರೇಷ್ಮೆ ಮಂಡಳಿಯ ಮುಂದಿನ ಸಭೆಯಲ್ಲಿ, ರೈತರಿಗೆ ಸೊಪ್ಪುಕಟಾವು ಮಾಡುವ ಯಂತ್ರ ಅಭಿವೃದ್ಧಿ ಪಡಿಸಿ, ರೈತರಿಗೆ ನೀಡುವ ಬಗ್ಗೆ ಮತ್ತು ಮಲ್ಬೆರಿ ಕಿಟ್ ರೈತರಿಗೆ ಸಹಾಯ ಧನದ ರೂಪದಲ್ಲಿ ನೀಡಲು ಇಲಾಖೆ ಆಯುಕ್ತರು, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುತ್ತದೆ ಎಂದರು.ಈ ವೇಳೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಸಿ.ಎಂ.ಲಕ್ಷ್ಮಣ್, ಡಾ.ಅಂಬಿಕಾ, ರೇಷ್ಮೆ ಸಹಾಯಕ ನಿರ್ದೇಶಕ ಎಲ್.ಪಿ ಧನಂಜಯ, ರೇಷ್ಮೆವಿಸ್ತರಣಾಧಿಕಾರಿ ಕೆ.ಟಿ.ಪ್ರಭಾಕರ್ ಇತರರು ಹಾಜರಿದ್ದರು.