ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜಿಎಸ್‍ಎಸ್ ಜನ್ಮ ಶತಮಾನೋತ್ಸವ, ಕಾವ್ಯಸೌರಭ ಹಾಗೂ ಜಿಎಸ್‍ಎಸ್ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಜಿಎಸ್‍ಎಸ್ ತಮ್ಮ ಕಾವ್ಯಗಳಲ್ಲಿ ನಮ್ಮೊಂದಿಗಿದ್ದಾರೆ. ಈಸೂರಿನಲ್ಲಿ ಜನ್ಮಿಸಿದ್ದ ಜಿಎಸ್‍ಎಸ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿತ್ತು. ಅವರ ಮಾತುಗಳು ನನಗೆ ಚೈತನ್ಯ ನೀಡುತ್ತಿದ್ದವು. ಯುವ ಪೀಳಿಗೆ ಅವರ ಕೃತಿ, ಕಾವ್ಯಗಳನ್ನು ಅಧ್ಯಯನ ಮಾಡಬೇಕು ಎಂದರು.ದೇಶದಲ್ಲೇ ಒಂದು ಜಿಲ್ಲೆಗೆ ಎರಡು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮಗೆ ಮಾತ್ರ. ಜಿಎಸ್‍ಎಸ್ ಪುರಸ್ಕಾರ ಪಡೆಯುತ್ತಿರುವ ವಿಮರ್ಶಕ ಡಾ.ಓ.ಎಲ್.ನಾಗಭೂಷಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನಂತರ ಮಾತನಾಡಿ, ಕುವೆಂಪು, ಅನಂತಮೂರ್ತಿ ಅವರಂತೆ ಜಿಎಸ್‍ಎಸ್ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಜಿಲ್ಲೆಯಲ್ಲೆ ಅತಿಹೆಚ್ಚು ಜನರನ್ನು ಒಳಗೊಳ್ಳುವ ಸಾಂಸ್ಕೃತಿಕ ಭವನ ಶಿಕಾರಿಪುರದಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಜಿ.ಎಸ್.ಶಿವರುದ್ರಪ್ಪ ಹೆಸರನ್ನು ಇಡಲಾಗುವುದು ಎಂದರು.
ಫೆ.26ರಂದು ಕೇಂದ್ರ ಸಚಿವ ಮುರುಗನ್ ಆಗಮಿಸಿ, ಸಹ್ಯಾದ್ರಿ ಕಾಲೇಜಿನ ಎದುರು ಇರುವ ದೂರದರ್ಶನ ಟ್ರಾನ್ಸ್‌ಮೀಟರ್ ಸೆಂಟರ್‌ನಲ್ಲಿ ಅಳವಡಿಸಿರುವ 10 ಕೆವಿ ಎಫ್‍ಎಂ ಸ್ಟೇಷನ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇಲ್ಲಿ ನಿರ್ಮಿಸಿರುವ ಸ್ಟುಡಿಯೋವನ್ನು ಸಾಹಿತ್ಯದ ಕೆಲಸಗಳಿಗೂ ಬಳಸಬಹುದು ಎಂದರು.
ಜಿಎಸ್‍ಎಸ್ ಗೀತ ಗಾಯನ ಸ್ಪರ್ಧೆಯ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿ ರಂಜನಾ ರಾನಡೆ, ದ್ವಿತೀಯ ಸ್ಥಾನ ಪಡೆದ ಸುನೈನಾ ದೇಶಪಾಂಡೆ, ತೃತೀಯ ಸ್ಥಾನ ಪಡೆದ ಸಂಧ್ಯಾ ಹೆಗ್ಡೆ, ಸಮಾಧಾನಕರ ಬಹುಮಾನವನ್ನು ಎಚ್.ಭುವನ್ ಅವರಿಗೆ ನೀಡಲಾಯಿತು. ಕರ್ನಾಟಕ ಸಂಘದಿಂದ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.