ಜಿಎಸ್‌ಟಿ ಕಡಿತ: ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ

KannadaprabhaNewsNetwork |  
Published : Sep 23, 2025, 01:03 AM IST
22ಕೆಎಂಎನ್ ಡಿ26 | Kannada Prabha

ಸಾರಾಂಶ

ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿದ್ದ ಜಿಎಸ್‌ಟಿ ತೆರಿಗೆ ಸಡಿಲಗೊಳಿಸಿದ್ದರಿಂದ ವಸ್ತುಗಳ ಬೆಲೆ ಕಡಿಮೆಯಾಗಿದೆ. ಅಲ್ಲದೆ ಹೊಸ ವಾಹನಗಳ ತೆರಿಗೆ ಕಡಿಮೆ ಮಾಡಿದ್ದರಿಂದ ಎಷ್ಟೋ ಬಡ ಜನರು ಇದೀಗ ಕಡಿಮೆ ದರದಲ್ಲಿ ಕಾರು ಕೊಂಡುಕೊಳ್ಳಲು ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಕಡಿತ ಮಾಡಿ ಸಾಮಾನ್ಯ ಜನರ ಹೊರೆ ಇಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರವಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ತಾಲೂಕು ಅದ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗುಣಗಾನ ಮಾಡಿದರು.

ನಂತರ ರಮೇಶ್ ಮಾತನಾಡಿ, ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿದ್ದ ಜಿಎಸ್‌ಟಿ ತೆರಿಗೆ ಸಡಿಲಗೊಳಿಸಿದ್ದರಿಂದ ವಸ್ತುಗಳ ಬೆಲೆ ಕಡಿಮೆಯಾಗಿದೆ. ಅಲ್ಲದೆ ಹೊಸ ವಾಹನಗಳ ತೆರಿಗೆ ಕಡಿಮೆ ಮಾಡಿದ್ದರಿಂದ ಎಷ್ಟೋ ಬಡ ಜನರು ಇದೀಗ ಕಡಿಮೆ ದರದಲ್ಲಿ ಕಾರು ಕೊಂಡುಕೊಳ್ಳಲು ಅನುಕೂಲವಾಗಿದೆ ಎಂದರು.

ದೇಶದಲ್ಲಿ ಅಗತ್ತ ವಸ್ತುಗಳ ಮೇಲಿದ್ದ ತೆರಿಗೆ ಸರಳೀಕರಿಸಿದ್ದರಿಂದ ಜನ ಸಾಮಾನ್ಯರ ಹೊರೆಯನ್ನು ಇಳಿಸಿದಂತಾಗಿದೆ. ಹಾಗಾಗಿ ಕಾರ್ಯಕರ್ತರೊಂದಿಗೆ ಸೇರಿ ರಸ್ತೆಯಲ್ಲಿ ಹೋಗುವ ಜನರು, ಅಂಗಡಿ ಮುಂಗಟ್ಟು ವ್ಯಾಪಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ ಎಂದರು.

ನಂತರ ರಾಜ್ಯ ಮೋರ್ಚಾ ಬಿಜೆಪಿ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಕೇಂದ್ರದ ಬಿಜೆಪಿ ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದೆ. ದೇಶವಲ್ಲಷ್ಟೆ ಅಲ್ಲದೆ ವಿಶ್ವದಲ್ಲಿ ಮೋದಿಯವರ ಪರ ಅಲ್ಲಿನ ಜನರು ನಿಲ್ಲುವಂತೆ ಮಾಡಿದ ಏಕೈಕ ವ್ಯಕ್ತಿ ಪ್ರಧಾನ ನರೇಂದ್ರ ಮೋದಿ. ಇದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಶ್ರೀಧರ್ ಕಾರ್ಯಕ್ರಮ ಕುರಿತು ಮಾತನಾಡಿದರು. ಪುರಸಭೆ ಸದಸ್ಯರಾದ ಕೃಷ್ಣಪ್ಪ, ಗಂಜಾಂ ಶಿವು, ಎಸಿಸಿ ಪ್ರಕಾಶ್, ಎಸ್.ಟಿ ರಾಜು, ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಮುಖಂಡರಾದ ರಘು, ಉಮೇಶ್ ಕುಮಾರ್, ಕೃಷ್ಣಪ್ಪ, ನಗರ ಬಿಜೆಪಿ ಅಧ್ಯಕ್ಷ ಸುದಾಕರ್, ಪುಟ್ಟರಾಮು, ಪ್ರಭಾಕರ್, ವೆಂಕಟೇಶ್, ಅಭಿಲಾಷ್, ಬೆಳಗೊಳ ಮಲ್ಲೇಶ್, ಬೆಳ್ಳಿ ಮಂಜು ಸೇರಿದಂತೆ ಇತರ ಮಹಿಳಾ ಕಾರ್ಯಕರ್ತರಿದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ