ಗ್ಯಾರಂಟಿ ಯೋಜನೆಗಳು ಮನೆಮಾತಾಗಿವೆ: ಮೈಬೂಸಾಬ ಮುದ್ದಾಪೂರ

KannadaprabhaNewsNetwork |  
Published : Nov 28, 2025, 01:15 AM IST
27-ಎಂ ಎಸ್ ಕೆ -01: ಮಹಿಬೂಬ್ ಸಾಬ್ ಮುದ್ದಾಪೂರ | Kannada Prabha

ಸಾರಾಂಶ

ಚುನಾವಣಾ ಘೋಷಣೆಯಲ್ಲಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತಂದು, ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ಮಸ್ಕಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬೂಸಾಬ ಮುದ್ದಾಪೂರ ತಿಳಿಸಿದರು.

ಮಸ್ಕಿ: ಚುನಾವಣಾ ಘೋಷಣೆಯಲ್ಲಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತಂದು, ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ಮಸ್ಕಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬೂಸಾಬ ಮುದ್ದಾಪೂರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಕೇವಲ ಎರಡೂವರೆ ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಕೈಗೊಂಡಿದೆ. ಜನಹಿತದ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳು ಮನೆಮಾತಾಗಿದ್ದು, ಬಡ-ಮಧ್ಯಮ ವರ್ಗದ ಆರ್ಥಿಕ ಭಾರ ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಮಸ್ಕಿ ಕ್ಷೇತ್ರದ ಹಿತಾಸಕ್ತಿ ಮುಂದಿಟ್ಟುಕೊಂಡು ಎರಡು ಬಾರಿಯ ಶಾಸಕರಾಗಿ ಆರ್.ಬಸನಗೌಡ ತುರ್ವಿಹಾಳ ಉತ್ತಮ ಕೆಲಸ ಮಾಡುತ್ತಿದ್ದು, ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ಅದೇ ರೀತಿ ಕಾಂಗ್ರೆಸ್ ಪಕ್ಷ ಸಂಘಟನೆ ಮುಂಚೂಣಿಯಲ್ಲಿರುವ ಮಲ್ಲಿಕಾರ್ಜುನ್ ಪಾಟೀಲ್ ಯದ್ದಲದಿನ್ನಿ ಅವರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಮಿತಿಯ ಸದಸ್ಯ ರಾದ ರವಿಪಾಟೀಲ್,ಚನ್ನಬಸವ, ಶಂಕರಗೌಡ, ಪೌಲರಾಜ ಯದ್ದಲದಿನ್ನಿ, ನಾಗರಾಜ, ರಮೇಶ್ ಕರೆಕುರಿ, ಲಕ್ಷಣ ನಾಯಕ, ಕನಕಪ್ಪ, ಸೋಮನಾಥ ನಾಯಕ, ನಾಗರತ್ನ ಕಟ್ಟಿಮನಿ, ನಿಜಗುಣಿ, ಆಲಂಭಾಷಾ, ಬಸವಂತಪ್ಪ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌