ಶಿಗ್ಗಾಂವಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆ ಫಲಾಭವಿಗಳ ಸಮಾವೇಶ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ಪ್ರತಿ ಗ್ಯಾರಂಟಿ ಯೋಜನೆಯಲ್ಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಮದ್ಯವರ್ತಿಗಳ ಹಾವಳಿ ಇಲ್ಲ ಎಂದು ತಹಸೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಶಿಗ್ಗಾಂವಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆ ಫಲಾಭವಿಗಳ ಸಮಾವೇಶದಲ್ಲಿ ಮಾತನಾಡಿದರು.47051ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯದ ಕುರಿತು ಪ್ರತಿಯೊಬ್ಬ ಫಲಾನುಭವಿಗಳು ತಿಳಿದಿರಬೇಕು. ಈ ಐದು ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಕ್ಕೆ ಪ್ರತಿ ತಿಂಗಳು ₹೪ ರಿಂದ ೫ ಸಾವಿರ ಲಾಭದಾಯಕವಾಗಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ 47051 ಫಲಾನುಭವಿಗಳಾಗಿದ್ದಾರೆ. ಶಕ್ತಿಯೋಜನೆಯಲ್ಲಿ ೩೬ ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ. ಈ ಯೋಜನೆಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಆಯಾ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಲಿದ್ದಾರೆ ಎಂದರು.
ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಎಂ. ರಮೇಶ ಮಾತನಾಡಿ, ಎಲ್ಲ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಅತ್ಯಂತ ಜನೋಪಯೋಗಿಯಾಗಿದೆ. ಅನ್ನ ಭಾಗ್ಯ ಯೋಜನೆಯ ಕುರಿತು ನ್ಯಾಯಬೆಲೆ ಅಂಗಡಿಕಾರರೊಂದಿಗೆ ಸಭೆ ಮಾಡಿ ಈಗಾಗಲೇ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದರು.ಸಿಡಿಪಿಒ ಗಣೇಶಗೌಡ ಲಿಂಗನಗೌಡ್ರ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ನೆರವಾಗಿದೆ. ಈ ಯೋಜನೆಯಲ್ಲಿ ಮೊದಲು ಜಿ.ಎಸ್.ಟಿ, ಐಟಿ ಪೈಲ್ ಮಾಡಿದ್ದರೆ ಅವರು ಫಲಾನುಭವಿಯಾಗುವುದಿಲ್ಲ, ಒಂದು ವೇಳೆ ಐಟಿ ಪೈಲ್ ನಿಲ್ಲಿಸಿದ್ದರೆ, ಅಂತವರು ಫಲಾನುಭವಿಗಳಾಗಲು ಸಂಬಂಧಿಸಿದ ಸೂಕ್ತ ದಾಖಲೆ ನೀಡಿ ಮರಳಿ ಫಲಾನುಭವಿಯಾಗಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೌಶಾಲ್ಯಾಭಿವೃದ್ಧಿ ಅಧಿಕಾರಿ ಹುಲಿರಾಜ್ ಎಚ್. ಮಾತನಾಡಿ, ಯುವನಿಧಿ ಯೋಜನೆಯಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಫಲಾನುಭವಿಯಾಗಲು ಅರ್ಜಿ ಹಾಕಬೇಕು, ೨೦೨೩ರಲ್ಲಿ ಪದವಿ ಮುಗಿಸಿ ಕನಿಷ್ಠ ೮೦ ದಿನ ಆಗಿರಬೇಕು. ಅಂತವರು ಈ ಫಲಾನುಭವಿಯಾಗಲು ಸಾಧ್ಯ. ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕೆ ಹೋಗಿದ್ದರೆ ಅವರು ಫಲಾನುಭವಿಯಾಗಲು ಸಾಧ್ಯವಿಲ್ಲ ಎಂದರು.ಹೆಸ್ಕಾಂ ಇಲಾಖೆಯ ಸಿ.ಬಿ. ಹೊಸಮನಿ ಮಾತನಾಡಿದರು.
ಫಲಾನುಭವಿಗಳಾದ ವಿಜಯಲಕ್ಷ್ಮಿ ಸಾರಂಗಮಠ, ಸವಿತಾ ತವರಿಮಠ ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡರು. ಸವಣೂರು ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್ ಸಮಾವೇಶ ಉದ್ಘಾಟಿಸಿದರು.ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸಾರಿಗೆ ಇಲಾಖೆಯ ಶೇಖರ್ ನಾಯಕ್, ವಿವಿಧ ಇಲಾಖೆಯ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕಿನ ಫಲಾನುಭವಿಗಳು, ಮಹಿಳೆಯರು ಇದ್ದರು. ನಳಂದಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಿಕ್ಷಕ ಎಚ್.ಎಚ್. ರಟ್ಟಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.