ಕನ್ನಡಪ್ರಭ ವಾರ್ತೆ ವಿಜಯಪುರ
ಈ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀದಿ ನಾಟಕ, ಜಾನಪದ ಕಲಾ ತಂಡಗಳು ಹಾಗೂ ಕಲಾ ಜಾಥಾ ಮೂಲಕ ಆಯೋಜಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ. ಈ ಕಲಾ ಜಾಥಾ ಪ್ರದರ್ಶನ ಸಂಚಾರಿ ವಾಹನವು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ 20 ಗ್ರಾಮಗಳಲ್ಲಿ ಡಿ.9ರಿಂದ 18ರವರೆಗೆ ಎರಡು ಎಲ್‌ಇಡಿ ವಾಹನಗಳ ಮೂಲಕ ಸಂಚರಿಸಿ ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸರ್ಕಾರದ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.ಗ್ರಾಮಗಳಾದ ಮಲಘಾಣ, ಕಲಗುರ್ಕಿ, ಕೂಡಗಿ, ಮುತ್ತಗಿ, ಸಂಕನಾಳ, ಸಾತಿಹಾಳ, ಡೋಣೂರ, ಎಂಭತ್ನಾಳ, ಹಡಗಲಿ, ಕಗ್ಗೋಡ, ಮಧಬಾವಿ, ನಾಗಠಾಣ, ಅಥರ್ಗಾ, ತಡವಲಗಾ, ಲಿಂಗದಳ್ಳಿ, ನಿಂಬಾಳ, ಹೊರ್ತಿ, ಸಣಕನಹಳ್ಳಿ, ಕನ್ನಾಳ ಹಾಗೂ ಅರಕೇರಿ ಗ್ರಾಮಗಳಲ್ಲಿ ಸಂಚರಿಸಿ ಬೀದಿ ನಾಟಕ ಹಾಗೂ ಜಾನಪದ ಕಲಾತಂಡಗಳ ಕಲಾವಿದರು ಈ ಯೋಜನೆಗಳ ಕುರಿತು ಗೀತೆಗಳು, ಎಲ್‌ಇಡಿ ವಾಹನ, ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸುವರು ಎಂದು ತಿಳಿಸಿದರು. ವಿವಿಧ ಕಲಾವಿದರು ಪಂಚ ಗ್ಯಾರಂಟಿ ಯೋಜನೆಯ ಬೀದಿ ನಾಟಕ ಹಾಗೂ ಗೀತೆಗಳ ಪ್ರದರ್ಶನ ನೀಡಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೊರಣ್ಣವರ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಎಸ್.ಎಸ್.ನಾಯಕಲಮಠ, ಸುರೇಶ ಚಾವಲರ, ಪ್ರೇಮಕುಮಾರ ಪವಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ,ಶಿರಸ್ತೇದಾರರಾದ ಸಲೀಂ ಬಿಜಾಪುರ, ಸಚ್ಚಿದಾನಂದ ತೇರದಾಳ, ರಾಜು ಹಾದಿಮನಿ, ಡಿ.ಎಂ.ಕರ್ನಾಳ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.