ಕನ್ನಡಪ್ರಭ ವಾರ್ತೆ ಉಡುಪಿ
ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಗೂಡುದೀಪಗಳ ರಚನೆಯ ಈ ಸ್ಪರ್ಧೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭ ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಈಶ್ವರ ಶೆಟ್ಟಿ ಚಿಟ್ಪಾಡಿ ಮುಂತಾದವರಿದ್ದರು.* ಸ್ಪರ್ಧೆಯ ಫಲಿತಾಂಶ:
ಸಾಂಪ್ರದಾಯಿಕ ವಿಭಾಗದಲ್ಲಿ ಪ್ರಥಮ ಬಹುಮಾನ ರಕ್ಷಿತ್ ಕುಮಾರ್ ಮಂಗಳೂರು, ದ್ವಿತೀಯ ಬಹುಮಾನ ನಾಗೇಂದ್ರ ಕೋಟ, ತೃತೀಯ ಬಹುಮಾನ ವಿದ್ಯಾ ಅದಿತಿ ಉಡುಪಿ, ಸಮಾಧಾನಕರ ಬಹುಮಾನ ಕೌಶಿಕ್ ಉಡುಪಿ ಮತ್ತು ಶೋಭಿತ್ ತೆಕ್ಕೆಟ್ಟೆ ಪಡೆದಿರುತ್ತಾರೆ.ಆಧುನಿಕ ವಿಭಾಗದ ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜಗದೀಶ್ ಅಮೀನ್ ಬಜಪೆ, ದ್ವಿತೀಯ ಬಹುಮಾನ ಗೀತಾ ಮಲ್ಯ ಮಂಗಳೂರು, ತೃತೀಯ ಬಹುಮಾನ ವೈಶಾಲ್ ಅಂಚನ್ ಕಟೀಲು, ಸಮಾಧಾನಕರ ಬಹುಮಾನ ಪಂಚಮಿ ಪ್ರೀತಂ ಪರ್ಕಳ, ನಾಗಶ್ರೀ ರಾವ್ ಮಾರ್ಪಳ್ಳಿ ಮತ್ತು ಸಿಂಧೂರ ಬೈಲಕೆರೆ ಗಳಿಸಿರುತ್ತಾರೆ.* ಇಂದು ಪ್ರದರ್ಶನ, ಬಹುಮಾನ ವಿತರಣೆಈ ಸ್ಪರ್ಧೆಯಲ್ಲಿ ರಚಿಸಲಾದ ಗೂಡುದೀಪಗಳನ್ನು ಅ.29ರಂದು ರಾಜಾಂಗಣದಲ್ಲಿ ಪ್ರದರ್ಶನ ಮಾಡಲಾಗುತ್ತದೆ ಮತ್ತು ಸಂಜೆ 5.30ಕ್ಕೆ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.