ಕನ್ನಡಪ್ರಭ ವಾರ್ತೆ ಕಾಪು
ಶೇರು ಮಾರುಕಟ್ಟೆಯ ವಾಸ್ತವತೆ, ಹೂಡಿಕೆಗಳ ಬಗ್ಗೆ ಸರಿಯಾದ ಯೋಜನೆ ಹಾಗೂ ಅದೃಷ್ಟಕ್ಕಿಂತ ಜಾಣ್ಮೆಯ ಹೂಡಿಕೆಯ ಮಹತ್ವ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಉಪನ್ಯಾಸ ವಿದ್ಯಾರ್ಥಿಗಳಿಗೆ ಆರ್ಥಿಕ ಜಾಗೃತಿ ಹಾಗೂ ಪ್ರೇರಣೆ ನೀಡುವಂತೆ ಮಾಡಿತು. ಶೇರು ಮಾರುಕಟ್ಟೆಯ ಪ್ರಾಯೋಗಿಕ ಹೂಡಿಕೆಯ ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳಲ್ಲಿ ಹೊಸ ಅರಿವನ್ನು ಮೂಡಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಸೋನಾ ಎಚ್.ಸಿ. ಸ್ವಾಗತಿಸಿದರು, ದೈವಿಕ್ ಶೆಟ್ಟಿ ನಿರೂಪಿಸಿದರು. ದೀಕ್ಷಿತ್ ಶೆಟ್ಟಿ ವಂದಿಸಿದರು.