ಬಾವಿಕೆರೆ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

KannadaprabhaNewsNetwork |  
Published : Mar 03, 2024, 01:31 AM IST
ಕೃಷಿ ವಿವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ | Kannada Prabha

ಸಾರಾಂಶ

ಬಾವಿಕೆರೆ ಗ್ರಾಮದ ಕೃಷಿ ವಿವಿ ಶಿವಮೊಗ್ಗದಡಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಧನುಕಾ ಅಗ್ರಿಟೆಕ್ ನಿಂದ ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ಅಂತಿಮ ವರ್ಷದ ಗ್ರಾಮೀಣ ಕೃಷಿ ಕಾರ್ಯನುಭವದ ಬಿಎಸ್ಸಿ (ಅಗ್ರಿ) ವಿದ್ಯಾರ್ಥಿಗಳಿಗೆ ಖಾಸಗಿ ವಲಯದ ವಿವಿಧ ಉದ್ಯೋಗಾವಕಾಶಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ, ತರೀಕೆರೆ

ಬಾವಿಕೆರೆ ಗ್ರಾಮದ ಕೃಷಿ ವಿವಿ ಶಿವಮೊಗ್ಗದಡಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಧನುಕಾ ಅಗ್ರಿಟೆಕ್ ನಿಂದ ಕೃಷಿ ಮಹಾವಿದ್ಯಾಲಯ ಶಿವಮೊಗ್ಗದ ಅಂತಿಮ ವರ್ಷದ ಗ್ರಾಮೀಣ ಕೃಷಿ ಕಾರ್ಯನುಭವದ ಬಿಎಸ್ಸಿ (ಅಗ್ರಿ) ವಿದ್ಯಾರ್ಥಿಗಳಿಗೆ ಖಾಸಗಿ ವಲಯದ ವಿವಿಧ ಉದ್ಯೋಗಾವಕಾಶಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಥನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧನುಕ ಅಗ್ರಿಟೆಕ್ ನ ರಾಜ್ಯ ವ್ಯವಸ್ಥಾ ಕಾರ್ಯನಿರ್ವಾಹಕ ಉಮಾಕಾಂತ್ ತಮ್ಮ ಕಂಪನಿ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿನ ಕೃಷಿ ಪದ್ಧತಿಗಳಿಗೆ ಅನುಕೂಲವಾಗುವ ಇನ್‌ ಪುಟ್‌ ಗಳ ತಯಾರಿಕೆ ಬಗ್ಗೆಯೂ ವಿವರವಾಗಿ ತಿಳಿಸಿದರು.

ವಿದ್ಯಾರ್ಥಿಗಳು ಉದ್ಯೋಗ ಪಡೆದ ನಂತರ ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಬೇಕಾಗುವ ಕೌಶಲ್ಯತೆ ಮತ್ತು ಸಮರ್ಥ್ಯದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಧನುಕ ಅಗ್ರಿಟೆಕ್ ನ ಪ್ರದೇಶದ ಮಾರಾಟ ವ್ಯವಸ್ಥಾಪಕ ಧರ್ಮರಾಜ್ ಖಾಸಗಿ ವಲಯದ ವಿವಿಧ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿ, ತಮ್ಮ ಕಂಪನಿಯಿಂದ ಲಭ್ಯವಿರುವ ವಿವಿಧ ಇನ್ಪುಟ್ಸ್ ಗಳಾದ ಶಿಲೀಂದ್ರ ನಾಶಕ, ಕೀಟನಾಶಕ, ಕಳೆನಾಶಕ, ರಸಗೊಬ್ಬರ, ಮತ್ತು ಸಸ್ಯ ಪ್ರಚೋದಕಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಡಿಗ್ರಿ ಮುಗಿಸಿದ ನಂತರದಲ್ಲಿ ಖಾಸಗಿ ವಲಯದಲ್ಲಿ ಉತ್ಕೃಷ್ಟಗೊಳ್ಳಲು ಬೇಕಾಗುವ ಕೌಶಲ್ಯಗಳ ಬಗ್ಗೆ ತಿಳಿಸಿದರು.

ಕೃ.ತೋ.ಸಂ.ಕೇ, ಬಾವಿಕೆರೆಯ ಕೀಟಾಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ಕೃಷ್ಣಾರೆಡ್ಡಿ ಮಾತನಾಡಿದರು. ಧನುಕ ಅಗ್ರಿಟೆಕ್ ನ ಪ್ರಾಂತ್ಯ ವ್ಯವಸ್ಥಾಪಕ ಸಿದ್ಧರಾಮ್, ಸಂಶೋಧನಾ ಕೇಂದ್ರದ ವಿಜ್ಞಾನಿ ಮಂಜುನಾಥ್ ಕುದರಿ ಗ್ರಾಮೀಣ ಕೃಷಿ ಕಾರ್ಯಾನುಭವದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿಶಿತಾ ಸ್ವಾಗತಿಸಿದರು, ಗಗನ್ ಪ್ರಾರ್ಥಿಸಿದರು. ಕೃಪಾ ಭಾರದ್ವಾಜ್ ನಿರೂಪಿಸಿದರು.ಮನೋಜಿ ರಾವ್ ಮೋರೆ ವಂದಿಸಿದರು. 2ಕೆಟಿಆರ್.ಕೆ.6ಃ

ತರೀಕೆರೆ ಸಮೀಪದ ಬಾವಿಕೆರೆ ಗ್ರಾಮದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಧನುಕ ಅಗ್ರಿಟೆಕ್ ನ ರಾಜ್ಯ ವ್ಯವಸ್ಥಾಪಕ ಕಾರ್ಯನಿರ್ವಾಹಕರಾದ, ಉಮಾಕಾಂತ್ ಮಾತನಾಡಿದರು. ಪ್ರದೇಶ ಮಾರಾಟ ವ್ಯವಸ್ಥಾಕ ಧರ್ಮರಾಜ್ ಮತ್ತಿತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...