ಯಾದಗಿರಿ:ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ವಿಶ್ವವಿದ್ಯಾಲಯ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಒಟ್ಟು ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶದಿಂದ ಪ್ರಥಮ ಮತ್ತು ದ್ವೀತಿಯ ಸೇರಿದಂತೆ ಇನ್ನಿತರ ರ‍್ಯಾಂಕ್ ನೀಡಲು ಆಯ್ಕೆ ಮಾಡಲಾಗುತ್ತದೆ. ಮಾತೋಶ್ರೀ ಮಲ್ಲಮ್ಮ ಪದವಿ ಮಹಾವಿದ್ಯಾಲಯ ಯಾದಗಿರಿಯ, 2022-23ನೇ ಸಾಲಿನ ವಿದ್ಯಾರ್ಥಿ ಸಾಹೇಬಗೌಡ ತಂದೆ ಗುರುಪಾದಪ್ಪ ಎಂಬ ವಿದ್ಯಾರ್ಥಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಸಾಹೇಬಗೌಡ ಅವರು ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಪಾಂಶುಪಾಲ ಶಿವಪ್ಪ ಎಸ್.ಕೆ. ಹಾಗೂ ಉನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
13ವೈಡಿಆರ್6: ಸಾಹೇಬಗೌಡ.