ವೃತ್ತಿಯಲ್ಲಿ ತೃಪ್ತಿ ಕಂಡು ಶಿವನೊಲುಮೆಗೆ ಪಾತ್ರವಾಗಿದ್ದ ಗುಂಡಯ್ಯ

KannadaprabhaNewsNetwork |  
Published : Jul 15, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕುಂಬಾರ ಗುಂಡಯ್ಯ ಹಾಗೂ ಗಾಣದ/ಗಾಳದ ಕಣ್ಣಪ್ಪ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

12 ಶತಮಾನದ ಪ್ರಮುಖ ವಚನಕಾರ ಕುಂಬಾರ ಗುಂಡಯ್ಯ ತನ್ನ ವೃತ್ತಿಯಲ್ಲಿ ತೃಪ್ತಿ ಕಂಡು ಶಿವನೊಲುಮೆಗೆ ಪಾತ್ರರಾಗಿದ್ದ ಎಂದು ಕುಂಬಾರ ಗುರುಪೀಠದ ಕಾರ್ಯದರ್ಶಿ ವೈ.ಮೃತ್ಯುಂಜಯ ಅಭಿಪ್ರಾಯಪಟ್ಟರು.

ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕುಂಬಾರ ಗುಂಡಯ್ಯ ಹಾಗೂ ಗಾಣದ/ಗಾಳದ ಕಣ್ಣಪ್ಪ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಕಾಯಕವಿಲ್ಲದ ಲಿಂಗಪೂಜೆ ಲೇಸಲ್ಲ ಎನ್ನುವ ತತ್ವದ ಶಿವಶರಣರು 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು ಎಂದರು.

ಮನುಷ್ಯರು ಸೇರಿದಂತೆ ಸಕಲ ಜೀವರಾಶಿಗೂ ಲೇಸನ್ನೇ ಬಯಸಿದ ಕಲ್ಯಾಣದ ಅನುಭವ ಮಂಟಪದಲ್ಲಿದ್ದ ಅಸಂಖ್ಯಾತ ಶಿವಶರಣರಲ್ಲಿ ಕುಂಬಾರ ಗುಂಡಯ್ಯನವರೂ ಒಬ್ಬರು. ಹದವಾಗಿ ಮಣ್ಣನ್ನು ತುಳಿಯುತ್ತ ಶಿವಗಣಂಗಳಿಗೆ ಮಣ್ಣಿನ ಪರಿಕರ ಮಾಡಿಕೊಡುತ್ತಿದ್ದರು. ಕಾಯಕದಲ್ಲಿ ಕರ್ಮಯೋಗಿಯಾಗಿ, ಪಾರಮಾರ್ಥದಲ್ಲಿ ತೇಜೋಮೂರ್ತಿಯಾಗಿ, ಶಿವಶರಣರಲ್ಲಿ ಶರಣರಾಗಿ ಇತಿಹಾಸದ ಮಹಾವ್ಯಕ್ತಿಯಾಗಿ ತನ್ನ ಧರ್ಮಪತ್ನಿ ಮಹಾಶಿವಶರಣೆ ಕೇತಲದೇವಿಯೊಂದಿಗೆ ಸಂಸಾರಿಕ ಭವಸಾಗರವನ್ನು ದಾಟಿದವರಾಗಿದ್ದರು ಎಂದರು.

ಶಿವಶರಣರಾದ ಗಾಣದ/ಗಾಳದ ಕಣ್ಣಪ್ಪ ಕುರಿತು ವಿಷಯಾವಲೋಕನ ಮಾಡಿದ ಎಸ್ ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ.ಪುಷ್ಪಾ , ಗಾಣದ ಕಣ್ಣಪ್ಪ ಒಟ್ಟು 10 ಅನುಭಾವಿಕ ವಚನಗಳನ್ನು ರಚಿಸಿದ್ದಾರೆ. ಮೀನುಗಾರಿಕೆ ಸಂಬಂಧಿಸಿದ ಸಾಂಕೇತಿಕ ಪದಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಿ ಕಂಡು ಬರುತ್ತದೆ. ಕಲ್ಯಾಣದ ತ್ರಿಪುರಾಂತಕೇಶ್ವರ ಕೆರೆಯಲ್ಲಿ ಮೀನು ಹಿಡಿಯುವುದು ಇವರ ನಿತ್ಯ ಕಾಯಕವಾಗಿತ್ತು ಎಂದರು.

ಕಣ್ಣಪ್ಪನ ವಚನಗಳು ಸಾಮಾನ್ಯವಾಗಿ ಗೂಢಾರ್ಥಗಳಿಂದ ಕೂಡಿರುತ್ತವೆ. ಅವರು ಹೇಳುವ ಬಿಲ್ಲು, ಬಾಣ, ಕಳ್ಳರು, ಸೂಳೆಯರು, ಮತ್ತಗಜ, ಎರಳೆ ಇತ್ಯಾದಿ ಪದಗಳನ್ನು ನೇರ ಅರ್ಥದಲ್ಲಿ ನೋಡದೇ ಇವುಗಳೆಲ್ಲ ಮಾನವನ ಮನಸ್ಸು, ಅಹಂಕಾರ, ಆಸೆಗಳು, ಬಂಧನಗಳು ಮತ್ತು ಆತ್ಮಜ್ಞಾನದ ಸ್ಥಿತಿಗಳನ್ನು ಸೂಚಿಸುವ ರೂಪಕಗಳಾಗಿವೆ. ಈ ವಚನಗಳಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಹೋಗುವ ಸಾಧಕನ ಅಂತರಂಗದ ಪಯಣವನ್ನು ಚಿತ್ರಿಸಲಾಗಿದೆ ಎಂದರು.

ಶಿವಶರಣ ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಇತಿಹಾಸಕಾರ, ನಿವೃತ್ತ ಉಪನ್ಯಾಸಕ ರಾಜಶೇಖರಯ್ಯ ,ನಿವೃತ್ತ ಶಿಕ್ಷಕ ಕೆ.ಸಿ ಮಂಜಪ್ಪ, ಮುರುಘಾಮಠದ ಬಸವ ಮುರುಘೇಂದ್ರ ಸ್ವಾಮೀಜಿ, ಹೊಳಲ್ಕೆರೆಯ ತಿಪ್ಪೇರುದ್ರ ಸ್ವಾಮೀಜಿ, ಕುಂಬಾರ ಸಮಾಜದ ಎರ್ರಿಸ್ವಾಮಿ, ಬಸವರಾಜಕಟ್ಟಿ, ಎಸ್.ವೀರೇಶ್, ನಾಗರಾಜ ಸಂಗಮ್, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಇಟಗಿ ವಿಜಯಕುಮಾರ್, ಮೆರವಣಿಗೆ ಗುರು, ಜವಳಿ ಮುರುಘೇಶ್, ಕವಿ ಗಂಗಾಧರಪ್ಪ, ಡಾ.ಬಿ.ರಾಜಶೇಖರಪ್ಪ, ಯಶೋದಾ ರಾಜಶೇಖರಪ್ಪ, ಮುಖ್ಯಶಿಕ್ಷಕಿ ಆಶಾರಾಣಿ ಇದ್ದರು. ಅಗಲಿದ ಮಾಜಿ ಸಂಸದ ಹೆಚ್.ಹನುಮಂತಪ್ಪ ಹಾಗೂ ಜಿ.ಎಸ್ ಉಜ್ಜಿನಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಗಡದಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿಸಿ ಸೂಚನೆ
ಕುರಿ ಮಾಲೀಕನಿಗೆ ಪರಿಹಾರ ಮಂಜೂರಾತಿ ಆದೇಶ ಪತ್ರ