ಕಗ್ಗತ್ತಲಲ್ಲಿ ಗುಂಡ್ಲುಪೇಟೆ ಜೋಡಿ ರಸ್ತೆಗಳು

KannadaprabhaNewsNetwork | Published : Feb 5, 2024 1:47 AM

ಸಾರಾಂಶ

ಪಟ್ಟಣದ ಪರಿಮಿತಿಯ ಮೈಸೂರು-ಊಟಿ, ಗುಂಡ್ಲುಪೇಟೆ -ಚಾ.ನಗರ, ಗುಂಡ್ಲುಪೇಟೆ-ಕೇರಳ ಜೋಡಿ ರಸ್ತೆಯಲ್ಲಿ ಬಹುತೇಕ ಬೀದಿ ದೀಪಗಳು ಕೆಟ್ಟು ನಿಂತಿದ್ದು ಜೋಡಿ ರಸ್ತೆ ರಾತ್ರಿ ಕಗ್ಗತ್ತಲಲ್ಲಿ ಮುಳುಗುತ್ತಿದೆ.

ಸರಿಯಾಗಿ ಬೆಳಕು ನೀಡದ ಬೀದಿ ದೀಪಗಳು । ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ। 6 ತಿಂಗಳಾದ್ರೂ ರಿಪೇರಿ ಮಾಡ್ಸಿಲ್ಲ

ರಂಗೂಪುರ ಶಿವಕುಮಾರ್ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಪರಿಮಿತಿಯ ಮೈಸೂರು-ಊಟಿ, ಗುಂಡ್ಲುಪೇಟೆ -ಚಾ.ನಗರ, ಗುಂಡ್ಲುಪೇಟೆ-ಕೇರಳ ಜೋಡಿ ರಸ್ತೆಯಲ್ಲಿ ಬಹುತೇಕ ಬೀದಿ ದೀಪಗಳು ಕೆಟ್ಟು ನಿಂತಿದ್ದು ಜೋಡಿ ರಸ್ತೆ ರಾತ್ರಿ ಕಗ್ಗತ್ತಲಲ್ಲಿ ಮುಳುಗುತ್ತಿದೆ.ಪಟ್ಟಣದ ಜಿಪಂ ಕಚೇರಿಯಿಂದ ಆರಂಭವಾಗುವ ಜೋಡಿ ರಸ್ತೆಯಿಂದ (ಮೈಸೂರು-ಊಟಿ ರಸ್ತೆ)ಪ್ರವಾಸಿ ಮಂದಿರದ ತನಕ, ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದ ತನಕ ಹಾಗು ಊಟಿ ಸರ್ಕಲ್‌ನಿಂದ ಮಹದೇವಪ್ರಸಾದ್ ನಗರ ತನಕದ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟಿವೆ. ಅಲ್ಲಲ್ಲಿ ಒಂದೊಂದು ಬೀದಿ ದೀಪಗಳು ಬೆಳುಕು ನೀಡುತ್ತಿವೆ.ರಾತ್ರಿಯ ವೇಳೆ ವಿದ್ಯುತ್ ಕೈ ಕೊಟ್ಟಾಗ ಮಾತ್ರ ಜೋಡಿ ರಸ್ತೆಗಳು ಸಂಪೂರ್ಣ ಕಗ್ಗತ್ತಲಲ್ಲಿ ಮುಳುಗುತ್ತವೆ.ಈ ಸಮಯದಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳ ಜೊತೆಗೆ ವಾಯು ವಿಹಾರ ಮುಗಿಸಿ ಹೋಗುವ ವೃದ್ಧರು, ಮಹಿಳೆಯರಿಗೆ ಬೀದಿ ದೀಪಗಳು ಇಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ತೆರಳುತ್ತಿದ್ದಾರೆ.ಶಾಸರು ಹೇಳಿ 6 ತಿಂಗಳಾಯ್ತುಪಟ್ಟಣದ ಪರಿಮಿತಿಯ ೩ ಜೋಡಿ ರಸ್ತೆಯಲ್ಲಿ ಬೀದಿ ದೀಪಗಳ ಕೆಟ್ಟಿರುವುದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರ ಗಮನಕ್ಕೆ ಬಂದ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದ್ದರು.ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪುರಸಭೆಯಲ್ಲಿ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಒಂದು ವಾರದೊಳಗೆ ಬೀದಿ ದೀಪಗಳು ದುರಸ್ಥಿ ಪಡಿಸಬೇಕು ಎಂದು ತಾಕೀತು ಮಾಡಿ ಆರು ತಿಂಗಳು ಉರುಳಿದೆ.ಆದರೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್‌ರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆ ಅಧಿಕಾರಿ ನೀಡಿದ ಭರವಸೆ ಭರವಸೆಯಾಗಿಯೇ 6 ತಿಂಗಳಿನಿಂದ ಉಳಿದಿದೆ ಎಂದರೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ಫಾಲೋ ಆಪ್ ಮಾಡ್ತಿಲ್ಲಪಟ್ಟಣದ ಪರಿಮಿತಿಯ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತ ಬೀದಿ ದೀಪಗಳ ದುರಸ್ಥಿ ಸಂಬಂಧ ಶಾಸಕರು ಸೂಚನೆ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೆನ್ನು ಬಿದ್ದು ಪುರಸಭೆ ಆಡಳಿತ ವರ್ಗ ಕೆಟ್ಟ ಬೀದಿ ದೀಪ ದುರಸ್ಥಿ ಮಾಡಿಸುವಲ್ಲಿ ವಿಫಲರಾಗಿದೆ.ಅಧಿಕಾರಿಗಳಿಗೆ ದಬಾಯಿಸುತ್ತಿಲ್ಲ!ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪಟ್ಟಣದ ಜೋಡಿ ರಸ್ತೆಯಲ್ಲಿ ಕೆಟ್ಟು ನಿಂತ ಬೀದಿದೀಪಗಳ ದುರಸ್ಥಿಗೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಖಡಕ್‌ ಸೂಚನೆ ನೀಡುವ ಮೂಲಕ ಕೆಟ್ಟು ನಿಂತ ಬೀದಿ ದೀಪಗಳಿಗೆ ಬೆಳಕು ಕೊಡಿಸಲಿ.ಪಟ್ಟಣದಲ್ಲಿ ಕೆಟ್ಟು ನಿಂತ ಬೀದಿ ದೀಪಗಳ ದುರಸ್ಥಿ ಜೊತೆಯಲ್ಲಿಯೇ ಬೇಗೂರು ಗ್ರಾಮದ ರಸ್ತೆಯಲ್ಲಿ ಕೆಟ್ಟು ನಿಂತ ಹೆದ್ದಾರಿಯ ಬೀದಿ ದೀಪಗಳ ದುರಸ್ಥಿಗೆ ಶಾಸಕರು ಮುಂದಾಗಲಿ ಎಂಬುದು ಕನ್ನಡಪ್ರಭದ ಕಳಕಳಿ.

‘ಪಟ್ಟಣದ ಜೋಡಿ ರಸ್ತೆಯಲ್ಲಿ ಕೆಟ್ಟಿರುವ ಬೀದಿ ದೀಪಗಳ ದುರಸ್ಥಿ ಟೆಂಡರ್ ಹಂತದಲ್ಲಿದೆ. ಕೆಟ್ಟ ಬೀದಿ ದೀಪಗಳ ದುರಸ್ಥಿ ವಿಷಯದಲ್ಲಿ ಶಾಸಕರೇ ಹೆಚ್ಚಿನ ಆಸಕ್ತಿ ವಹಿಸಿದ್ದು ಸದ್ಯದಲ್ಲೇ ಕೆಟ್ಟ ಬೀದಿ ದೀಪಗಳ ದುರಸ್ಥಿ ಕೆಲಸ ಆಗಲಿದೆ.ಕೆ.ಪಿ.ವಸಂತಕುಮಾರಿ,ಪುರಸಭೆ ಮುಖ್ಯಾಧಿಕಾರಿ

Share this article