ಗುಡ್ಲುಪೇಟೆ-ನಂಜುನೂಡು ಎನ್ನೆಚಲ್ಲಿ ದೂಳು ದರ್ಶನ

KannadaprabhaNewsNetwork |  
Published : Nov 12, 2026, 01:30 AM IST
ಎಸಿ ಕಾರಲ್ಲೋಗೋ | Kannada Prabha

ಸಾರಾಂಶ

ಗುಂಡ್ಲುಪೇಟೆಯಿಂದ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಬ್ಲಾಕ್ ಸ್ಪಾಟ್‌ನಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಪಟ್ಟಣದ ಬಳಿಯ ವೀರನಪುರ ಕ್ರಾಸ್ ಬಳಿ ಜಲ್ಲಿ ಹಾಕಿರುವ ರಸ್ತೆಗೆ ನೀರು ಹಾಕದ ಕಾರಣ, ವಾಹನಗಳು ಸಂಚರಿಸುವಾಗ ಹೆದ್ದಾರಿಯಲ್ಲಿ ಸಂಚರಿಸುವ ಜನರು ಮತ್ತು ವಾಹನ ಸವಾರರಿಗೆ ದೂಳು ಉಚಿತವಾಗಿ ಸಿಗುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆಯಿಂದ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಬ್ಲಾಕ್ ಸ್ಪಾಟ್‌ನಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಪಟ್ಟಣದ ಬಳಿಯ ವೀರನಪುರ ಕ್ರಾಸ್ ಬಳಿ ಜಲ್ಲಿ ಹಾಕಿರುವ ರಸ್ತೆಗೆ ನೀರು ಹಾಕದ ಕಾರಣ, ವಾಹನಗಳು ಸಂಚರಿಸುವಾಗ ಹೆದ್ದಾರಿಯಲ್ಲಿ ಸಂಚರಿಸುವ ಜನರು ಮತ್ತು ವಾಹನ ಸವಾರರಿಗೆ ದೂಳು ಉಚಿತವಾಗಿ ಸಿಗುತ್ತಿದೆ.

ರಸ್ತೆ ಅಗಲೀಕರಣದ ನೆಪದಲ್ಲಿ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುವಾಗ, ಜಲ್ಲಿ ಹಾಕಿದ ರಸ್ತೆಗೆ ಡಾಂಬರು ಹಾಕುವ ತನಕ ಕನಿಷ್ಠ ಗಂಟೆಗೊಮ್ಮೆಯಾದರೂ ನೀರು ಹಾಕುತ್ತಿಲ್ಲ ಎಂದು ಹಂಗಳ ಅನಿಲ್ ಕುಮಾರ್ ಮತ್ತು ಅಂಕಹಳ್ಳಿ ಮಧು ಆರೋಪಿಸಿದ್ದಾರೆ.

ರಸ್ತೆಯಲ್ಲಿ ಬೈಕ್, ಸೈಕಲ್ ಹಾಗೂ ಪಾದಚಾರಿಗಳಿಗೆ ದೂಳಿನಿಂದ ಬಾರಿ ತೊಂದರೆಯಾಗುತ್ತಿದೆ. ಎಸಿ ಕಾರಲ್ಲಿ ಹೋಗುವವರಿಗೆ ದೂಳಿನಿಂದ ತೊಂದರೆಯಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಿಪ್ಪರ್ ಹೋಗುವ ಸಮಯದಲ್ಲಂತೂ ದೂಳು ಹೆಚ್ಚು ಬರುತ್ತಿದೆ ಎಂದು ಬೈಕ್‌ ಸವಾರ ಮಹೇಶ್‌ ಹೇಳಿದರು.

ರಸ್ತೆ ಕಾಮಗಾರಿಯ ಉಸ್ತುವಾರಿ ಹೊತ್ತವರ ನಿರ್ಲಕ್ಷ್ಯದಿಂದ ಸಾರ್ವಜನಿಕರು ಮತ್ತು ಸವಾರರಿಗೆ ಬಾರಿ ತೊಂದರೆಯಾಗುತ್ತಿದೆ.ಈ ದೂಳಿನಿಂದ ಮುಕ್ತಿ ಯಾವಾಗ? ಶಾಸಕರೇ, ಸಂಸದರೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಸಾರ್ವಜನಿಕರ ಕೂಗು ರಸ್ತೆ ಅಗಲೀಕರಣವಾಗುತ್ತಿರುವ ಗುಂಡ್ಲುಪೇಟೆ-ನಂಜನಗೂಡು ರಸ್ತೆಯಲ್ಲಿ ಎಸಿ ಕಾರಲ್ಲಿ ಓಡಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಎಲ್ಲಿ ಕೇಳುತ್ತದೆ ಎಂದು ಮಾಡ್ರಹಳ್ಳಿ ಗ್ರಾಮದ ಮಹದೇವಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌