ಗುರು-ಶಿಷ್ಯರ ಸಂಬಂಧಕ್ಕೆ ಬೆಲೆ ಕಟ್ಟಲಾಗದು: ಅಂಕಲಿಮಠದ ವೀರಭದ್ರ ಸ್ವಾಮಿ

KannadaprabhaNewsNetwork |  
Published : Jun 02, 2024, 01:45 AM IST
ಫೋಟೋ(01ಕೆಪಿಎಂಡಿಎಲ್01) | Kannada Prabha

ಸಾರಾಂಶ

ಮುದಗಲ್ ಸಮೀಪದ ಅಂಕಲಿಮಠದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸುಕ್ಷೇತ್ರ ಅಂಕಲಿಮಠದ ವೀರಭದ್ರ ಸ್ವಾಮಿಗಳು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಶರಣು ಅಂಗದೊಳಗೆ ಶರಣಾರ್ಥಿ. ನಿರುಪಾದಿಗಳು ನಮ್ಮಂತೆ ಇದ್ದು, ನಮ್ಮಂತೆ ಜೀವನ ಮಾಡಿ ಎಲ್ಲವನ್ನೂ ತ್ಯಾಗ ಮಾಡಿ ಗುರುವಿನ ಸೇವೆಯನ್ನು ಮಾಡಿ ಸಾಧಿಸಿದವರಾಗಿದ್ದಾರೆ. ಶ್ರೀ ಮಠದಲ್ಲಿ ಜಾತಿ ಧರ್ಮಕ್ಕೆ ಬೆಲೆ ಕೊಡುವುದಿಲ್ಲ. ಆದರೆ ಇಲ್ಲಿ ಸಹೋದರತ್ವ ಮತ್ತು ಬೀಗರು ಎನ್ನುವ ಎರಡು ಅಂಶಗಳು ಮುಖ್ಯವಾಗಿವೆ. ಗುರು ಶಿಷ್ಯರ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಆ ನಿಟ್ಟಿನಲ್ಲಿ ಶ್ರೀಮಠದ ಪರಂಪರೆ ಮುಂದುವರಿದಿದೆ ಎಂದು ಅಂಕಲಿಮಠದ ವೀರಭದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.

ಅಂಕಲಿಮಠದಲ್ಲಿ ಜರುಗಿದ ಗುರು ನಿರುಪಾಧೀಶ್ವರ ಜಾತ್ರೆಯಲ್ಲಿ ಮಾನವ ಧರ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಾ, ನಿರುಪಾದಿಗಳು ಜನ್ಮಕ್ಕೆ ಮುಕ್ತಿ ಕೊಡು ಎಂದು ಗುರುವಿನಲ್ಲಿ ಬೇಡಿಕೊಂಡವರು. ಗುರುವಿನ ವಾಕ್ಯವನ್ನು ಪಾಲನೆ ಮಾಡಬೇಕು, ಇಲ್ಲವಾದರೆ ಅದು ಶಾಪವಾಗುತ್ತದೆ ಎಂದು ನಂಬಿಕೆ ಉಳ್ಳವರು. ನಿರುಪಾಧೀಶ್ವರು ಮೊದಲು ಗೋಕಾಕ ತಾಲೂಕಿನ ಚಿಕ್ಕೊಪ್ಪ ಮಠದಲ್ಲಿ ವಾಸವಾದವರು. ಹೊನ್ನಪ್ಪನ ಕೆರೆಯಲ್ಲಿ ಒಂದು ಲಿಂಗು ಇದೆ ಅಲ್ಲಿ ಮಠವನ್ನು ಕಟ್ಟು ಎಂದು ಗುರುವಿನ ಆಜ್ಞೆಯ ಮೂಲಕ ಅಂಕಲಿಮಠಕ್ಕೆ ಆಗಮಿಸಿದವರು ಎಂದರು.

ಗುರುವಿನ ಆಶೀರ್ವಾದ ಇದ್ದವರಿಗೆ ಯಾವ ಭಯವಿಲ್ಲ. ಶಿರಹಟ್ಟಿಯ ಜಗದ್ಗುರು ಮಠದವರಿಗೆ ದೊಡ್ಡ ಶಕ್ತಿ ಇದೆ. ಅಂಕಲಿಮಠ ಹಾಗೂ ಶಿರಹಟ್ಟಿಯ ಮಠಗಳಿಗೆ ಅನ್ಯೋನ್ಯ ಅವಿನಾಭಾವ ಧಾರ್ಮಿಕ ಸಂಬಂಧವಿದೆ. ಶಿರಹಟ್ಟಿಯ ಜಗದ್ಗುರುಗಳು ಸೂಗುರು ಸ್ವಾಮಿಗಳಿಗೆ ಹಸಿರು ಪೇಟವನ್ನು ದೇಣಿಯಾಗಿ ನೀಡುತ್ತಾರೆ. ನಿಮ್ಮ ಕುಟುಂಬದಲ್ಲಿ ನಾನು ಹುಟ್ಟಿ ಬರುವೆ ಅವರಿಗೆ ಫಕೀರಸ್ವಾಮಿ ಎಂದು ನಾಮಕರಣ ಮಾಡಬೇಕೆನ್ನುವ ಆಜ್ಞೆಯಾಗಿದೆ. ಶರಣರ ಸಂತರ ಭಾವನೆ ಯಾರಿಗೂ ತಿಳಿಯದು. ಶ್ರೀಮಠದಲ್ಲಿ ಸಹೋದರತ್ವ, ಬೀಗರು ಎನ್ನುವದೇ ಎರಡು ಪಂಕ್ತಿಗಳು. ಉಳಿದಂತೆ ಯಾವ ಜಾತಿ ಮತ ಫಂಥಗಳ ಭೇದವಿಲ್ಲ ಎನ್ನುವುದೇ ನಿರುಪಾಧಿ ಮಠದ ಕೀರ್ತಿ ಎಂದರು.

ವೇದಿಕೆ ಮೇಲೆ ಮಾಜಿ ಶಾಸಕ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹರ ಗುರು ಚರ ಮೂರ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಗಂಗಾಧರ ಶಾಸ್ತ್ರಿ, ಅಮರೇಶ್ವರ ನೆರವೇರಿಸಿದರು.

ಐದು ಜನ ಸಾಧಕರಿಗೆ ಪ್ರಶಸ್ತಿ

ಅಂಕಲಿಮಠ ದಲ್ಲಿ ಜಾತ್ರಾ ನಿಮಿತ್ಯ ಐದು ಜನ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಿರುಪಾಧೀಶ್ರಿ ಪ್ರಶಸ್ತಿಯನ್ನು ಇತಿಹಾಸಕಾರ ಧರ್ಮೇಂದ್ರ ಕುಮಾರ, ವಿಕಲಚೇತನ ಶಿಕ್ಣಣ ಸೇವೆ ಗಜಾನನ ಸಾವನ್ಣನವರ, ಅಬ್ದುಲ್ ಖಾದರ್, ಸಾವಯವ ಕೃಷಿ ಬಿ.ಎಂ. ಈರೇಶಪ್ಪ, ಸಹಕಾರಿ ಕ್ಷೇತ್ರದಡಿ ಡಾ. ಟಿ.ವಿ. ಅರಳಿಕಟ್ಟಿ, ಪುರೋಹಿತ ಶ್ರೀ ಪ್ರಶಸ್ತಿಯನ್ನು ಗಂಗಾಧರ ಶಾಸ್ತ್ರೀ ಇವರೆಲ್ಲರಿಗೆ ಶ್ರೀಮಠದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ