ಮುಂಡರಗಿ: ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಹಿರಿಯರ ಸನ್ಮಾರ್ಗದಲ್ಲಿ ಶ್ರದ್ಧೆ, ಶ್ರಮದಿಂದ ಅಭ್ಯಾಸ ಮಾಡಬೇಕು. ಜೀವನದಲ್ಲಿ ನಮ್ಮದೆ ಆದ ಗುರಿ ತಲುಪಿ ಇಡೀ ಸಮಾಜಕ್ಕೆ ಉತ್ತಮವಾದ ಸೇವೆ ಸಲ್ಲಿಸುವುದಕ್ಕೆ ಮುಂದಾಗಬೇಕು ಎಂದು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ವೀರೇಶ ಹಂಚಿನಾಳ ತಿಳಿಸಿದರು.ಇತ್ತೀಚೆಗೆ ಪಟ್ಟಣದ ಎಸ್.ಬಿ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಜರುಗಿದ 2025- 26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸಾನ್ನಿದ್ಯ ವಹಿಸಿದ್ದ ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಯುರ್ವೇದವು ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಯೋಗಕ್ಷೇಮವನ್ನು ಕೇಂದ್ರೀಕರಿಸುವ ಪ್ರಾಚೀನ ಚಿಕಿತ್ಸೆಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ರೀತಿ ಅಧ್ಯಯನ ಮಾಡಿ ಜೀವನದಲ್ಲಿ ಅತ್ಯುನ್ನತ ಹುದ್ದೆ ತಲುಪಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗುರುಮೂರ್ತಿಸ್ವಾಮಿ ಇನಾಮದಾರ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಸಿದ್ಧಲಿಂಗಸ್ವಾಮಿ ಇನಾಮದಾರ, ಪ್ರಾಚಾರ್ಯ ಡಾ. ಸಂಗಮೇಶ ಜಹಗೀರದಾರ್, ಉಪಪ್ರಾಚಾರ್ಯ ಡಾ. ಕಾಮರಾಜ್ ಎನ್., ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಇನಾಮದಾರ, ಸಂಸ್ಕೃತ ಪ್ರಾಧ್ಯಾಪಕಿ ಸುವರ್ಣಾ ಶೇಟ್, ಡಾ. ಮಹೇಶ್ ಭುಜರಿ, ಡಾ. ಶಿಲ್ಪ, ಡಾ.ರಾಜೇಶ್, ಡಾ. ವಿನುತಾ ಕುಲಕರ್ಣಿ, ಡಾ. ಬಸವರಾಜ್, ಡಾ. ತುಕಾರಾಮ್ ಲಮಾಣಿ, ಡಾ. ಗಾನಶ್ರೀ, ಡಾ. ಐತಾಳ್, ಡಾ. ಮುತ್ತು, ಡಾ. ಈರಣ್ಣ, ಡಾ. ಹಿತೇಶ್‌ಪ್ರಸಾದ್, ಡಾ. ಹಾಲಸ್ವಾಮಿ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೌರಭ್ ಪಂಡಿತ್ ಸ್ವಾಗತಿಸಿದರು. ದೀಷಾ ನಾಯಕ್, ಶ್ರೀಸಿಂಗ್ ನಿರೂಪಿಸಿದರು.