ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಶಿಕ್ಷಕರ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 1994-95ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಾರ್ಶನಿಕರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳುವ ಮೂಲಕ ಗುರು-ಶಿಷ್ಯ ಪರಂಪರೆಗೆ ಮಹತ್ವ ತಂದು ಕೊಟ್ಟಿದ್ದಾರೆ ಎಂದರು.
ವಿದ್ಯಾರ್ಥಿಗಳು ತಮಗೆ ದಾರಿದೀಪವಾಗಿರುವ ಗುರುಗಳನ್ನು 30 ವರ್ಷವಾದರು ಕೂಡಾ ಮರೆಯದೆ ಜ್ಞಾಪಕದಲ್ಲಿಟ್ಟುಕೊಂಡು ಗೌರವಿಸುತ್ತಿರುವುದು ಉತ್ತಮ ಕೆಲಸ. ಗುರುಗಳನ್ನು ಒಬ್ಬ ಶಿಷ್ಯ ಉತ್ತಮ ಸ್ಥಾನದಲ್ಲಿದ್ದಾನೆ ಎಂದು ತಿಳಿದರೆ ಹೆಚ್ಚು ಸಂತೋಷ ಪಡುತ್ತಾನೆ. ಇವನು ನನ್ನ ಶಿಷ್ಯ ಎಂದು ಎದೆಯುಬ್ಬಿಸಿ ಹೇಳುತ್ತಾನೆ ಎಂದರು.ನಿವೃತ್ತ ಶಿಕ್ಷಕ ಸಣಬ ಯೋಗಾನರಸಿಂಹೇಗೌಡ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದರೆ ಅದನ್ನು ನೋಡುವ ಗುರು ಧನ್ಯನಾಗುತ್ತಾನೆ ಎಂದರು.
ಇದೇ ವೇಳೆ ಅಂದಿನ ಶಿಕ್ಷಕರಾದ ಬಂಡಿಹೊಳೆ ರಾಮೇಗೌಡ, ಎಚ್.ಟಿ.ಗೋಪಾಲ್, ಸಣ್ಣತಮ್ಮೇಗೌಡ, ರಂಗರಾಜು, ಕೆ.ಮಾದೇಗೌಡ, ರವಿಕುಮಾರ್, ಎಚ್.ಟಿ.ಜಾನಕಿ ಸೇರಿದಂತೆ ಹಲವರನ್ನು ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು.