ಉದ್ಘಾಟನೆ । ಡಾ.ಹೆಬ್ಬಾರ್ ಆಲಯದ ನೂತನ ಕಟ್ಟಡ । ಆಶ್ರಮ ಸಮಿತಿ ಅಧ್ಯಕ್ಷ ಎಂ.ಮಾಧವ ಶೆಣೈ
ಕನ್ನಡಪ್ರಭ ವಾರ್ತೆ ಹಾಸನನಗರದ ಹೊರವಲಯ ಗವೇನಹಳ್ಳಿ ಬೈ ಪಾಸ್ ರಸ್ತೆ ಬಳಿ ಇರುವ ಕಾಮಧೇನು ಸಹಕಾರಿ ವೃದ್ಧಾಶ್ರಮದ ಆವರಣದಲ್ಲಿ ಜೂ.9 ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಡಾ.ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದಿ.ಗುರುರಾಜ ಹೆಬ್ಬಾರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಆಶ್ರಮ ಸಮಿತಿ ಅಧ್ಯಕ್ಷ ಎಂ. ಮಾಧವ ಶಣ್ಯೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್, ಸಹಕಾರಿ ಸಂಘಗಳ ನಿರ್ದೇಶಕ ಎಚ್.ಸಿ.ಬಸವರಾಜ್, ಸಹಕಾರಿ ಸಂಘಗಳ ಉಪನಿರ್ದೇಶಕ ಜಿ.ಆರ್. ವಿಜಯಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್. ಅನುಪಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಸಂತೋಷ್, ಜಿಲ್ಲಾ ಜಿ.ಎಲ್.ಮುದ್ದೇಗೌಡ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅದ್ಯಕ್ಷ ಎಚ್.ಪಿ.ಮೋಹನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಕಾಮಧೇನು ಸಹಕಾರಿ ವಿದ್ಯಾಶ್ರಮ ಚೈತನ್ಯ ಮಂದಿರ (ವೃದ್ಧಾಶ್ರಮ), ಗೋಪಾಲನ ಘಟಕ ಮತ್ತು ಶಿಶುಕೇಂದ್ರ (ವಿಶೇಷ ದತ್ತು ಕೇಂದ್ರ) ಹಾಸನದ ಹೊರ ವಲಯದಲ್ಲಿದ್ದು, ಈ ಸಂಸ್ಥೆಯು ಸಮಾಜಮುಖಿ ಕೆಲಸ ಮಾಡಿಕೊಂಡು ರಾಜ್ಯಾದ್ಯಾಂತ ಜಯಪ್ರಿಯತೆಯನ್ನು ಗಳಿಸಿದೆ. ಡಾ ಗುರುರಾಜ ಹೆಬ್ಬಾರ್‌ರವರು ೧೦೦ ಜನ ಸದಸ್ಯರಿಂದ ಸ್ಥಾಪಿತವಾದ ಸಂಸ್ಥೆ ಇಂದು ೩೧೮ ಷೇರುದಾರರನ್ನು ಹೊಂದಿರುತ್ತದೆ. ಈ ಹಣವನ್ನು ೫೦ ಷೇರುಗಳನ್ನು ಒಟ್ಟು ಎಚ್‌ಡಿಸಿಸಿ ಬ್ಯಾಂಕ್ ತಾಲೂಕು ಶಾಖೆಯಲ್ಲಿ ಒಟ್ಟು ೫೧೦೦೦೦ ರು. ಠೇವಣಿ ಮಾಡಿ ಉಪ ನಿಬಂಧಕ ಜೆ.ಕೋಟ್ರೇಶ್‌ರವರಿಗೆ ಅರ್ಜಿ ನೀಡಿ ನೋಂದಾಣಿ ಮಾಡಿಸಲಾಯಿತು ಎಂದು ಹೇಳಿದರು.
ಸಂಸ್ಥೆಯ ಹೆಸರಿನಲ್ಲಿ ಗವೇನಹಳ್ಳಿ ಗುಂಡೇಗೌಡರಿಂದ ಕೋಳಿ ಫಾರಂ ಇದ್ದ ೩ ಎಕರೆ ಜಮೀನನ್ನು ಖರೀದಿಸಲಾಯಿತು. ಇದರ ರಿಜಿಸ್ಟ್ರೇಷನ್ ಅನ್ನು ಸರ್ಕಾರದಿಂದ ಅನುಮತಿ ಪಡೆಯಲು ಡಾ ರಾಜಶೇಖರ್ ರವರ ಒಂದು ವರ್ಷದ ಶ್ರಮದಿಂದ ಅನುಮತಿ ದೊರೆಯಿತು. ವಾರ್ಡ್‌ಗಳು ಮತ್ತು ಅಡುಗೆ ಮನೆಯನ್ನು ನವೀಕರಣ ಮಾಡಿ ೨೦೦೩ರ ಇಸವಿಯಲ್ಲಿ ೧೦ ಜನ ವೃದ್ಧರಿಂದ ಉಚಿತ ವೃದ್ಧಾಶ್ರಮ ಪ್ರಾರಂಬಿಸಲಾಯಿತು. ಒಟ್ಟು ೩೩೨ ವೃದ್ಧರು ದಾಖಲಾಗಿದ್ದು, ಪ್ರಸ್ತುತ ೪೩ ವೃದ್ಧರಿದ್ದಾರೆ. ಅದರಲ್ಲಿ ೧೫ ಜನ ಗಂಡಸರು ಮತ್ತು ೨೮ ಜನ ಹೆಂಗಸರು ವಾಸವಿರುತ್ತಾರೆ ಎಂದರು.ಸಂಸ್ಥೆಯ ನಿಧಿಯನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ೪೦೦೦೦ ರು. ಹಣವನ್ನು ಠೇವಣಿ ಇಟ್ಟರೆ ದಾನಿಗಳು ಸೂಚಿಸಿದ ಒಂದು ದಿನ ವೃದ್ಧರಿಗೆ ಪ್ರಸಾದ ರೀತಿ ಊಟದ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟ ಒಳಗೊಂಡಿರುತ್ತದೆ. ಒಂದು ಬಾರಿ ರಾತ್ರಿ ಅಥವಾ ಮಧ್ಯಾಹ್ನದ ಭೋಜನಕ್ಕಾಗಿ ೨೦೦೦೦ ರು. ಠೇವಣಿ ಇಡಬೇಕಾಗಿದೆ. ಒಂದು ದಿನದ ಬೆಳಗಿನ ತಿಂಡಿಗೆ ೧೫೦೦೦ ರು. ಠೇವಣಿ ಇಡಬೇಕಾಗಿದೆ. ಈ ರೀತಿ ಸಂಸ್ಥೆಯ ಆದಾಯವನ್ನು ಕ್ರೋಢೀಕರಿಸಲಾಗುತ್ತದೆ ಎಂದರು.
ಕಾಮಧೇನು ಸಹಕಾರಿ ವೃದ್ಧಾಶ್ರಮದ ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಖಜಾಂಚಿ ಎಚ್.ಡಿ.ಶಾಂತಿಪ್ರಸಾದ್, ನಿರ್ದೇಶಕರಾದ ಎಚ್.ಸಿ. ಆನಂದ್ ಬಾಗಡೆ, ಇಂದಿರಾ ಮೂರ್ತಿ, ಎಸ್.ಎಸ್. ಕೃಷ್ಣ ಅಯ್ಯಂಗಾರ್ ಇದ್ದರು.