ಎಕ್ಸೆಲ್ ಕಾಲೇಜ್‌: 500 ಸಾಧಕರಿಗೆ ಸನ್ಮಾನ

KannadaprabhaNewsNetwork |  
Published : Jul 09, 2026, 01:30 AM IST
ಸನ್ಮಾನ.* | Kannada Prabha

ಸಾರಾಂಶ

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಅಂತಿಮ ಪರೀಕ್ಷೆ ಸಿಇಟಿ , ಜೆಇಇ , ಸಿಎ ಫೌಂಡೇಶನ್, ಅಗ್ರಿಕಲ್ಚರಲ್ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡಂತೆ 500 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಗುರುವಾಯನಕೆರೆ: ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಅಂತಿಮ ಪರೀಕ್ಷೆ ಸಿಇಟಿ , ಜೆಇಇ , ಸಿಎ ಫೌಂಡೇಶನ್, ಅಗ್ರಿಕಲ್ಚರಲ್ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡಂತೆ 500 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪದವಿ ಪೂರ್ವ ಮಂಡಳಿ ಪರೀಕ್ಷೆಯಲ್ಲಿ 600 ಕ್ಕೆ 600 ಅಂಕಗಳನ್ನು ಗಳಿಸಿದ್ದ ಯಾನ ಪೊನ್ನಮ್ಮ , ಅಕ್ಷಯ್ ಮತ್ತು ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ ವಿದ್ಯಾರ್ಥಿ ಮೌರ್ಯ ಇವರೆಲ್ಲರಿಗೂ 1 ಲಕ್ಷ ರು. ಗಳ ಚೆಕ್ ವಿತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕ ವಿದ್ಯಾರ್ಥಿಗಳಿಗೆ ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಇವರು ನಗದುಬಹುಮಾನ ನೀಡಿ ಗೌರವಿಸಿದರು.

ಬಹುಮಾನ ಸ್ವೀಕರಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ ಯಾನ ಪೊನ್ನಮ್ಮ ಮಾತನಾಡಿ, ಎಷ್ಟೋ ಸಾಧಕರಿಗೆ ಎಕ್ಸೆಲ್ ಪಿಯು ಕಾಲೇಜು ಸ್ಪೂರ್ತಿಯಾಗಿದೆ ಎಂದರು.

ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸುಮಂತ್ ಕುಮಾ, ಸಾಧಕರನ್ನು ಸನ್ಮಾನಿಸಲು ನಮ್ಮ ಸಂಸ್ಥೆಯು ಸದಾ ಸಿದ್ಧವಿದೆ. ಸಾಧಕ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಆಸ್ತಿ ಎಂದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ನ್ಯೂಯಾರ್ಕ್ ವಿಶ್ವ ವಿದ್ಯಾನಿಲಯ ಪ್ರಾಧ್ಯಾಪಕ ಡಾ. ರವೀಶ್ ಮಯ್ಯ , ಪ್ರಾಧ್ಯಾಪಕ ಹಾಗೂ ಅಧ್ಯಕ್ಷ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವ ವಿದ್ಯಾನಿಲಯ ಡಾ. ಧನಂಜಯ ಕುಂಬ್ಳೆ. ಕರ್ನಾಟಕ ರಾಜ್ಯ ಕಾಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ಅಳದಂಗಡಿ ಸತ್ಯ ದೇವತಾ ದೈವಸ್ಥಾನ ವಿಶ್ರಾಂತ ಅಭಿಯಂತರ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ರಸಾದ್ ಅಜಿಲ, ಪ್ರಾಂಶುಪಾಲ ವಿದ್ಯಾಸಾಗರ ಕ್ಯಾಂಪಸ್‌ ಡಾ. ನವೀನ್ ಕುಮಾರ್ ಮರಿಕೆ, ಅರಮಲೆಬೆಟ್ಟ ಕ್ಯಾಂಪಸ್‌ ಪ್ರಾಂಶುಪಾಲ ಪ್ರಜ್ವಲ್ ಕೆ. ಜಿ., ಉಪ ಪ್ರಾಚಾರ್ಯರು, ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡಂತೆ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಸ್ತಿ ಮೆಚ್ಚಿದ ಮಹತ್ವದ ಕವಿ ಮಜಿಬೈಲು: ಕುಕ್ಕುವಳ್ಳಿ
ದಾಸ್ ಪ್ರಮೋಷನ್ಸ್ ನವೀಕೃತ ಕೇಂದ್ರ ಕಚೇರಿ ಉದ್ಘಾಟನೆ