ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಎಚ್.ಮಲ್ಲಿಗೆರೆ ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ದಿವ್ಯ ಸಾನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮೌಲ್ಯ ಯುತ ಶಿಕ್ಷಣದ ಬಗ್ಗೆ ಪ್ರವಚನ ನೀಡಿದರು. ಜಯಶಂಕರ ಅವರ ಪರಿಸರ ಪ್ರೀತಿಯ ಬಗ್ಗೆ, ಪ್ಲಾಸ್ಟಿಕ್ ವಿರೋಧಿ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಉದ್ಘಾಟಿಸಿದರು. ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ, ಟ್ರಸ್ಟ್ ಕಾರ್ಯದರ್ಶಿ ವೈ.ಎಂ.ರತ್ನ, ಬೆಂಗಳೂರು ಇಂದಿರಾ ನಗರದ ರೋಟೀರಿಯನ್ ಎಂ.ಮಂಜುಳಾ ಶ್ರೀನಿವಾಸ ರೆಡ್ಡಿ, ಹಾಸನದ ಸಮಾಜ ಸೇವಕ ಬೋರೇಗೌಡ, ನಿವೃತ್ತ ವಿಷಯ ಪರೀವೀಕ್ಷಕ ನಂಜರಾಜು, ಹೆಮ್ಮಿಗೆ ಪಟೇಲ್ ಚಿಕ್ಕಣ್ಣ ಹಲವರು ಹಾಜರಿದ್ದರು.ತಡರಾತ್ರಿವರೆಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಗ್ರಾಮಸ್ಥರು, ಮಕ್ಕಳ ಪೋಷಕರು ಇದ್ದರು.ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
ಮಂಡ್ಯ:ತಾಲೂಕಿನ ಭೂತನಹೊಸೂರು ಗ್ರಾಮದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೊಸಹಳ್ಳಿ, ಹಳುವಾಡಿ ವಲಯದ ಎಲ್ಲ ಒಕ್ಕೂಟಗಳ ಪಾದಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಚೇತನಾ ಕಾರ್ಯಕ್ರಮ ಉದ್ಘಾಟಿಸಿ ಒಕ್ಕೂಟ ಪದಾಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಣೆ, ಜವಾಬ್ದಾರಿ ಕುರಿತು ವಿವರಿಸಿದರು. ಪ್ರಸುತ ದಿನಗಳಲ್ಲಿ ಕೆಲವೊಂದು ಸಮಸ್ಯೆಗಳಿಂದ ಸದಸ್ಯರಿಗೆ ಆಗಿರುವ ತೊಂದರೆ ಬಗ್ಗೆ ಧೈರ್ಯ ತುಂಬಿ ಕೆಲಸ ಮಾಡಬೇಕು ಎಂದರು. ಒಕ್ಕೂಟದ ಬಡ್ಡಿ ದರದ ಬಗ್ಗೆ ಸಾಮಾನ್ಯರಿಗೂ ಅರ್ಥ ಆಗುವ ರೀತಿಯಲ್ಲಿ ಮಾಹಿತಿ ನೀಡಿದರು.ಈ ವೇಳೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸಾವಿತ್ರಿ, ವಿಮೆ ಸಮಾನ್ವಯ ಅಧಿಕಾರಿ ಶ್ರೀನಿವಾಸ್, ವಿಚಕ್ಷಣಾಧಿಕಾರಿ ಶರತ್, ವಲಯ ಮೇಲ್ವಿಚಾರಕರು, ಒಕ್ಕೂಟ ಎಲ್ಲ ಪಾದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿರಿದ್ದರು.