- 34ನೇ ಪುಣ್ಯಸ್ಮರಣೆಯಲ್ಲಿ ರೈತ ಮುಖಂಡ ಬಿದರಗಡ್ಡೆ ಭರಮಪ್ಪ ಗೌಡ ಶ್ಲಾಘನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದ ಉದ್ದಗಲಕ್ಕೂ ರೈತರ ಸಂಘಟನೆಗಳನ್ನು ಸಂಘಟಿಸುವಲ್ಲಿ ಹೊಸಕೊಪ್ಪ ಗ್ರಾಮದ ದಿವಂಗತ ಎಚ್.ಎಸ್.ರುದ್ರಪ್ಪ ಅತ್ಯಂತ ಪ್ರಮುಖ ಪಾತ್ರವಹಿಸಿ, ರೈತರ ಹಿತರಕ್ಷಣೆಗೆ ನಿರಂತರ ಶ್ರಮಿಸಿದ್ದರು ಎಂದು ರೈತ ಮುಖಂಡ ಬಿದರಗಡ್ಡೆ ಭರಮಪ್ಪಗೌಡ ಹೇಳಿದರು.ಪಟ್ಟಣದ ನ್ಯಾಮತಿ-ಶಿಕಾರಿಪುರ ರಸ್ತೆಯ ಅಪ್ಪರ್ ತುಂಗಾ ಸರ್ಕಲ್ ಬಳಿ ಹೊಸಕೊಪ್ಪ ಗ್ರಾಮದ ದಿ. ಎಚ್.ಎಸ್. ರುದ್ರಪ್ಪ ಅವರ 34ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ. ಎಚ್.ಎಸ್. ರುದ್ರಪ್ಪ ಪುತ್ಥಳಿಗೆ ಪುಷ್ಪಹಾರ ಹಾಕಿ, ಗೌರವ ಸಮರ್ಪಿಸಿ ಅವರು ಮಾತನಾಡಿದರು.
ದಿ.ರುದ್ರಪ್ಪ ಸಹೋದರನ ಪುತ್ರ ಡಾ. ಎಚ್.ಎಸ್. ರುದ್ರೇಶ್ ಮಾತನಾಡಿ ಮೈಸೂರು ಸಂಸ್ಥಾನ ಅವಧಿಯಲ್ಲಿ ಕಡಿದಾಳ್ ಮಂಜಪ್ಪ ಮುಖ್ಯಮಂತ್ರಿ ಆಗಿದ್ದಾಗ ದಿ. ಎಚ್.ಎಸ್. ರುದ್ರಪ್ಪ ಅವರು ಅಂದಿನ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ, ಕೃಷಿ ಸೇರಿದಂತೆ ಹಲವಾರು ಖಾತೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತ ಸಂಘಟನೆಗಳು ರುದ್ರಪ್ಪ ಅವರ ಆದರ್ಶ, ಮೌಲ್ಯಗಳನ್ನು ಮುಂದಿಟ್ಟುಕೊಂಡು ರೈತ ಹೋರಾಟ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದರು.
ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಶಾಸಕ ಡಿ.ಜಿ. ಶಾಂತನ ಗೌಡ ಅವರ ಪುತ್ರ ಸುರೇಂದ್ರಗೌಡ, ರೈತ ಮುಖಂಡರಾದ ಎಸ್.ಎನ್. ಗೋಪಾಲ ನಾಯ್ಕ, ಸಾಲಬಾಳ, ಗೋರಟ್ಟಿ ಮಂಜಪ್ಪ, ಶಿವಕುಮಾರ ಕುಂದೂರು, ಷಣ್ಮುಖಪ್ಪ, ಹಿರೇಮಠದ ರಮೇಶ್, ಚನ್ನಪ್ಪ, ಆನಂದಪ್ಪ, ನೀಲಪ್ಪ, ಚನ್ನೇಶ್ ಮತ್ತಿತರ ಮುಖಂಡರು ಇದ್ದರು.
-19ಎಚ್.ಎಲ್.ಐ1.ಜೆಪಿಜಿ: