ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆ ಕೃಷ್ಣಕುಮಾರ್ ಸಭಾಂಗಣದಲ್ಲಿ ಪಿಇಎಸ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಹ್ಯಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಮತೋಲನಕ್ಕಾಗಿ ಹ್ಯಾಕಥಾನ್ ನಡೆಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ವಿವಿಧ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಮೀಣ ಪ್ರದೇಶ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಂಬಂದಿಸಿದಂತೆ ಒಂದು ಆಪ್ ಅಭಿವೃದ್ಧಿ ಪಡಿಸಲಿದ್ದಾರೆ. ಇದರಲ್ಲಿ ಯಾವ ಆಪ್ ಉತ್ತಮ ಎಂಬುದನ್ನು ಪರಿಶೀಲಿಸಿ ಒಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಜನರಿಗೆ ಪರಿಚಯಿಸಲಾಗುವುದು ಎಂದರು.ಈ ಆಪ್ ಆದಾಯ ಮತ್ತು ಖರ್ಚಿನ ಇತಿ ಮಿತಿ ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಸಲಿದೆ. ನಾವು ಇದನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ದೇಶದಲ್ಲಿ ಕೇವಲ ಶೇ.27ರಷ್ಟು ಮಾತ್ರ ಆರ್ಥಿಕ ಸಾಕ್ಷರತೆ ಕಾಣಬಹುದು. ಜನ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿರುವ ಜತೆಗೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಜನರ ಆರ್ಥಿಕ ವ್ಯವಹಾರಗಳನ್ನು ಸರಿದೂಗಿಸಲು ಈ ಆಪ್ ಅನುಕೂಲವಾಗಲಿದೆ. ಇಲ್ಲಿ ಸಿದ್ಧವಾಗುವ ಆಪ್ ಅನ್ನು ಪ್ರತಿ ಗ್ರಾಪಂನಲ್ಲಿ ಪ್ರಚಾರ ನಡೆಸುವ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗುವುದು. ಇದರಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ರಾಘವ ಪ್ರಕಾಶ್, ಎಲೆಕೆರೆ ಚಂದ್ರಣ್ಣ, ರಂಜಿತ್, ಸತೀಶ್ ಇತರರು ಇದ್ದರು.