ಹಡಪದ ಸಮಾಜದ ಕೊಡುಗೆ ಅಪಾರ: ಗವಿಸಿದ್ಧೇಶ್ವರ ಶ್ರೀ

KannadaprabhaNewsNetwork |  
Published : May 25, 2025, 02:17 AM ISTUpdated : May 25, 2025, 02:18 AM IST
ಪೋಟೊ24ಕೆಪಿಎಲ್25:‌ ಕೊಪ್ಪಳ ನಗರದಲ್ಲಿ ನಡೆದ ಹಡಪದ ಸಮಾಜದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ಬಸವರಾಜ್ ಹಿಟ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಹಡಪದ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ಒಗ್ಗಟ್ಟಿನಿಂದ ಹೋರಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವಿದೆ.

ಕೊಪ್ಪಳ:

ಹಡಪದ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ನಡೆದ ಹಡಪದ ಸಮಾಜದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಕರೆ ನೀಡಿದರು.

ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ ಮಾತನಾಡಿ, ಈ ಸಮಾಜಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸಿ ಕೊಡಲಾಗುವುದು ಎಂದರು.

ಜೆಡಿಎಸ್‌ ಮುಖಂಡ ಸಿ.ವಿ. ಚಂದ್ರಶೇಖರ ಮಾತನಾಡಿ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ಒಗ್ಗಟ್ಟಿನಿಂದ ಹೋರಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಬಸವಾದಿ ಶರಣರ ಕಾಲದಿಂದ ಹಡಪದ ಅಪ್ಪಣ್ಣ ಸಮಾಜದವರು ಅನೋನ್ಯವಾಗಿದ್ದಾರೆ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ ಮಾತನಾಡಿದರು. ಜಿಲ್ಲಾ ಕಮಿಟಿಯ ಜಿಲ್ಲಾ ಗೌರವಾಧ್ಯಕ್ಷ ಗವಿಸಿದ್ದಪ್ಪ ಮಾದುನುರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಪ್ರಮಾಣ ವಚನ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಗವಿಸಿದ್ದಪ್ಪ ಕಾಟ್ರಳ್ಳಿ, ಮಲ್ಲಪ್ಪ, ಮಲ್ಲಿಕಾರ್ಜುನ ಮಿಟ್ಟಿಕೇರಿ, ಮಾರಖಂಡಯ್ಯ, ಈಶಪ್ಪ, ಬಸವರಾಜ್, ಚಂದ್ರಶೇಖರ್, ಅನ್ನಪೂರ್ಣಮ್ಮ, ತಾಲೂಕು ಕಮಿಟಿಯ ತಾಲೂಕಾಧ್ಯಕ್ಷ ಅಂದಪ್ಪ, ಉಪಾಧ್ಯಕ್ಷ ವಿರೂಪಾಕ್ಷಪ್ಪ, ಮಹೇಶ, ನಿಂಗೇಶ, ಗವಿಸಿದ್ದಪ್ಪ, ಕೊಟ್ರೇಶ, ಮಾರುತೇಶ ಈರಣ್ಣ, ಕಳಕಪ್ಪ, ಈಶ್ವರಪ್ಪ, ವೀರೇಶ,

ನಗರ ಘಟಕದ ಗೌರವ ಅಧ್ಯಕ್ಷ ಪ್ರಕಾಶ ದದೇಗಲ, ಅಧ್ಯಕ್ಷ ಬಸವರಾಜ್ ಹುಣಸೆಹಾಳ್, ಉಪಾಧ್ಯಕ್ಷ ಲಿಂಗರಾಜ ಹಾಲಳ್ಳಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!