ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕೆಳ ಜಾತಿಯವರನ್ನು ಕೀಳಾಗಿ ಕಾಣುತ್ತಾ ಮೂಢನಂಬಿಕೆ ಹಾಗೂ ಶೋಷಣೆಯನ್ನು ಬಿತ್ತುವ ಪುರೋಹಿತ ಶಾಹಿಗಳ ವಿರುದ್ಧ ಸಮರ ಸಾರಿದವರು ಅಪ್ಪಣ್ಣ.ವೃತ್ತಿಯಲ್ಲಿ ಕ್ಷೌರಿಕರಾದರೂ ಕೂಡ ನಡೆ ನುಡಿಗಳಲ್ಲಿ ಒಂದಾಗುವ ಮೂಲಕ ಸತ್ಯ ಶುದ್ದ ಕಾಯಕದಲ್ಲಿ ನಿರತರಾಗುತ್ತಿದ್ದ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ನಿಕಟವರ್ತಿಗಳಾಗಿದ್ದ ಬಗ್ಗೆ ಸವಿವರವಾಗಿ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ವಚನಗಳೊಂದಿಗೆ ವಿವರಿಸಿದರು.
ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ, ಸತ್ಯಕ್ಕ, ಮುಕ್ತಾಯಕ್ಕಾ, ಅಕ್ಕಮಹಾದೇವಿ, ನೀಲಾಂಬಿಕೆ, ಸೂಳೆ ಸಂಕವ್ವೆ ಮೊದಲಾದ ಶಿವಶರಣರು ಪ್ರಾಚೀನ ಋಷಿಗಳ ಸಿದ್ಧಾಂತವಾದ ದೇಹವೇ ದೇವಾಲಯ ಹಾಗೂ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಸಾರಿದ ಸತ್ಪುರುಷರು ಎಂದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್, ವಸತಿ ಶಾಲೆಯ ಮೇಲ್ವಿಚಾರಕ ಪ್ರವೀಣ್ ಇದ್ದರು.