ಕನ್ನಡಪ್ರಭ ವಾರ್ತೆ ಹಲಗೂರು
ಪೊಲೀಸ್ ಠಾಣೆ ಆವರಣದಲ್ಲಿ ಠಾಣಾಧಿಕಾರಿ ಲೋಕೇಶ್ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿದರು.ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ವೈದಾಧಿಕಾರಿ ಸೌಮ್ಯಶ್ರೀ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ ಹೋರಾಟಗಾರರ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದಿ ತಿಳಿದು ಅವರ ಆದರ್ಶ, ಧೇಯೋದ್ದೇಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಹಲಗನ ದೊಡ್ಡಿ ಗ್ರಾಮದ ನೂತನ ದಿ.ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್ ನ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಸೈನಿಕ ದೇವರಾಜು ಧ್ವಜಾರೋಹಣ ನೆರವೇರಿಸಿದರು.ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳನ್ನು ತೊಟ್ಟು ರಂಜಿಸಿದರು. ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಆವರಣದಲ್ಲಿ ನೈಸರ್ಗಿಕವಾಗಿ ಬೆಳೆಸಿದ ಭಾರತ ದೇಶದ ನಕ್ಷೆ ಆಕರ್ಷಣೀಯವಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್, ಹಲಗೂರು ಜನಶ್ರೇ ಯೋಭಿವೃದ್ಧಿ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಪುಟ್ಟಲಿಂಗೇಗೌಡ, ಶಾಲೆ ಮೇಲ್ವಿಚಾರಕಿ ಹೆಚ್.ವಿ.ಶ್ವೇತಕುಮಾರಿ, ಅಕ್ಷತಾ ಅಶ್ವಿನ್ ಕುಮಾರ್, ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣಶ್ರೀರಂಗಪಟ್ಟಣ:
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಐಕ್ಯ ಲಯನ್ಸ್ ಅಧ್ಯಕ್ಷೆ ಸರಸ್ವತಿ, ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ವಸಂತಕುಮಾರಿ, ರಾಧ ಶ್ರೀಕಂಠು, ಪೂರ್ಣಿಮಾ, ನಿರ್ಮಲಾ, ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರ ಸದಸ್ಯರುಸ ಸಂಘದ ಅಧ್ಯಕ್ಷ ಆರ್.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಎಲ್.ವಿ.ನವೀನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.